Sira: ಕಾರ್ಖಾನೆಯ ತ್ಯಾಜ್ಯ ಮತ್ತು ಕೆಮಿಕಲ್ ದ್ರವವನ್ನು ಅರಣ್ಯಕ್ಕೆ ತಂದು ಸುರಿಯುತ್ತಿರುವುದರಿಂದ ಜೀವವೈವಿಧ್ಯಕ್ಕೆ ಮತ್ತು ಕಾಡು ಪ್ರಾಣಿಗಳಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಬ್ಯಾಡರಹಳ್ಳಿ ಮತ್ತು ತಿಮ್ಮನಹಳ್ಳಿ ಗ್ರಾಮಸ್ಥರು ದೂರಿದ್ದಾರೆ.
ಸಿರಾ ತಾಲೂಕು ಬ್ಯಾಡರಹಳ್ಳಿ ಮತ್ತು ತಿಮ್ಮನಹಳ್ಳಿಹಟ್ಟಿ ನಡುವೆ ಅರಣ್ಯ ಪ್ರದೇಶವಿದೆ. ಈ ಅರಣ್ಯ ಪ್ರದೇಶದಲ್ಲಿ ಇಲ್ಲಿನ ಕಾರ್ಖಾನೆಯವರು ಕೆಮಿಕಲ್ ಯುಕ್ತ ತ್ಯಾಜ್ಯವನ್ನು ಸುರಿಯುವುದರಿಂದ ಜನರ ಓಡಾಟಕ್ಕೆ ತೊಂದರೆಯಾಗಿದೆ.
ಕೆಮಿಕಲ್ ಕೆಟ್ಟ ವಾಸನೆ ಬರುತ್ತಿದ್ದು ಗ್ರಾಮಗಳಲ್ಲಿ ಇರಲು ಕಷ್ಟವಾಗುತ್ತಿದೆ. ಸಂಬಂಧಪಟ್ಟ ಕಾರ್ಖಾನೆಯವರಿಗೆ ಹೇಳಿದರೂ ಯಾರೂ ಕೇಳುತ್ತಿಲ್ಲ. ಕಾರ್ಖಾನೆಯ ತ್ಯಾಜ್ಯ ಮತ್ತು ಕೆಮಿಕಲ್ ಸುರಿದರೆ ಅದು ಭೂಮಿ ಆಳದೊಳಗಿನ ನೀರಿಗೆ ಸೇರಿ ವಿಷವಾಗುತ್ತದೆ. ಇಂತಹ ನೀರನ್ನು ಕುಡಿದರೆ ಜನರು ಮತ್ತು ಪ್ರಾಣಿಗಳಿಗೆ ಕಾಯಿಲೆಗಳು ಬರುತ್ತವೆ. ಆದರೆ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ.
ದಿನೇದಿನೇ ತ್ಯಾಜ್ಯ ಮತ್ತು ಕೆಮಿಕಲ್ ಸುರಿಯುವ ಪ್ರಮಾಣ ಹೆಚ್ಚಾಗುತ್ತಿದ್ದು ದುರ್ವಾಸನೆ ಬರುತ್ತಿದೆ. ಕೆಮಿಕಲ್ ಪರಿಣಾಮ ಅರಣ್ಯದ ಗಿಡಮೆಗಳ ಮೇಲೆ ಬೀರುತ್ತಿದ್ದು ಗಿಡಗಳು ಒಣಗತೊಡಗಿವೆ. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.