Sunday, November 10, 2024
Google search engine
Homeತುಮಕೂರು ಲೈವ್ಅಲೆಮಾರಿ ಜನರಿಗೆ ಕೈ ಚಾಚಿದ ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರ

ಅಲೆಮಾರಿ ಜನರಿಗೆ ಕೈ ಚಾಚಿದ ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರ

ತುರುವೇಕೆರೆ: ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಟ್ಟಣದ ಬಸವೇಶ್ವರ ನಗರದ ಅಲೆಮಾರಿ ಜನರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ಪೊಟ್ಟಣಗಳನ್ನು ನೀಡಿ ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಿದರು.

ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಸಿದ್ಧಲಿಂಗೇಗೌಡ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‍ಡೌನ್ ಘೋಷಿಸಿರುವ ಹಿನ್ನಲೆಯಲ್ಲಿ ಹಲವಾರು ಕೂಲಿ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರು, ಅಲೆಮಾರಿಗಳು ತಮ್ಮ ಜೀವನೋಪಾಯವನ್ನು ತಾತ್ಕಾಲಿಕವಾಗಿ ಕಳೆದುಕೊಂಡಿದ್ದಾರೆ. ಅವರ ಸುರಕ್ಷತೆ ಮತ್ತು ಜೀವನ ಭದ್ರತೆಯನ್ನು ಕಾಪಾಡಬೇಕಾದ್ದು ಸಾಮಾಜಿಕ ನ್ಯಾಯ ಹಾಗೂ ಮಾನವ ಹಕ್ಕುಗಳ ಸಂರಕ್ಷಣೆಯೂ ಹೌದು. ಈ ನಿಟ್ಟಿನಲ್ಲಿ ನಾವು ಆಡಳಿತ ಮತ್ತು ಸರ್ಕಾರಗಳ ಜೊತೆ ಕೈ ಜೋಡಿಸಿದ್ದು ಆಹಾರ ಮತ್ತಿತರ ದಿನಬಳಕೆ ವಸ್ತುಗಳ ಅವಶ್ಯಕತೆ ಇರುವ ಜನರಿಗೆ ಅವನ್ನು ಪೂರೈಕೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ತುರುವೇಕೆರೆಯ ಆರಕ್ಷಕ ವೃತ್ತ ನಿರೀಕ್ಷಕ ಲೋಕೇಶ್ ಜನಗಳು ಅನವಶ್ಯಕವಾಗಿ ಮನೆ ಬಿಟ್ಟು ಬರಬಾರದು. ನಾವು ಜನರನ್ನು ನಿಯಂತ್ರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ. ಜನರು ಅನಿವಾರ್ಯವಾಗಿ ಈಚೆ ಬರುವ ಪರಿಸ್ಥಿತಿ ಬಂದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.

ಬಸವೇಶ್ವರ ನಗರ ಮತ್ತು ಸುತ್ತಮುತ್ತಲ ಕಾರ್ಮಿಕರಿಗೆ ತಿಂಡಿ , ಊಟ ಹಾಗೂ ಹಾಲಿನ ಪ್ಯಾಕೆಟ್ ವಿತರಿಸಲಾಯಿತು.

ವಿಶ್ವಮಾನವ ಹಕ್ಕುಗಳ ಸೇವಾಕೇಂದ್ರದ ಕಾರ್ಯದರ್ಶಿ ಎಂ.ಎಸ್.ದರ್ಶನ್ ಜಿಲ್ಲಾಡಳಿತ, ಹಾಗೂ ತಾಲ್ಲೂಕು ಆಡಳಿತ ಲಾಕ್‍ಡೌನ್ ಅವಧಿ ಮುಗಿಯುವವರೆಗೆ ಕೂಲಿಕಾರ್ಮಿಕರಿಗೆ ಹಾಗೂ ಬಡವರಿಗೆ ಆಹಾರಪೂರೈಕೆಯ ಖಾತರಿ ನೀಡಬೇಕು ಎಂದು ತಹಸೀಲ್ದಾರ್ ಅವರಿಗೆ ಮನವಿ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎ.ಸಿ.ಡಿ.ಪಿ.ಓ ಅರುಣ್ ಕುಮಾರ್ ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ತಕ್ಷಣದಿಂದಲೇ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸೇವಾಕೇಂದ್ರದ ರಾಜ್ಯ ನಿರ್ದೇಶಕ ನಟೇಶ್, ಮಾಲತೇಶ್,ಮುನಿಯೂರಿನ ಸಾಗರ್, ಶಿವಕುಮಾರ್, ಕಿರಣ್, ದಯಾನಂದ, ಗಾಯತ್ರಿ ಅರಸ್ ಇತರರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?