ವಿನಯ್ ಹೆಬ್ಬೂರು
ಲಡಾಖ್‌ನ ಪಾಂಗೊಂಗ್ ತ್ಸೋ ಮತ್ತು ಗಾಲ್ವಾನ್ ನದಿ ಕಣಿವೆಯಲ್ಲಿನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ತೊಂದರೆ ಸೃಷ್ಟಿಸಿದ ನಂತರ, ಚೀನಾ ಕಣ್ಣು ಈಗ ದೌಲತ್ ಬೇಗ್ ಓಲ್ಡಿ ರಸ್ತೆ ಮೇಲೆ ಬಿದ್ದಿದೆ.
ಕಾರಕೋರಂ ಪರ್ವತ ಶ್ರೇಣಿಯಲ್ಲಿ ಇರುವ ಈ ಪ್ರದೇಶವನ್ನು ಆಕ್ರಮಿಸಿಕೊಂಡರೆ ಪಾಕಿಸ್ತಾನ ಮತ್ತು ಯುರೋಪ್ ಕಡೆಗೆ ಸಾಗುವ ತಮ್ಮ ಹೆದ್ದಾರಿಗಳಿಗೆ ಆನುಕೂಲವಾಗುತ್ತದೆ ಎಂಬುದು ಚೀನಿಯರ ದುರಾಲೋಚನೆ.ಇದೇ ಪ್ರದೇಶದಲ್ಲಿ ಸಿಪಿಇಸಿ ರಸ್ತೆ ಹಾದು ಹೋಗುತ್ತದೆ.
“ಡಿಬಿಒ ವಲಯದಲ್ಲಿ, ಚೀನಿಯರು ನಮಗೆ ತೊಂದರೆ ನೀಡುತ್ತಿರುವ ಪ್ರದೇಶ ಗಾಲ್ವಾನ್ ನದಿ ಕಣಿವೆಯ ಪಕ್ಕದಲ್ಲಿವೆ ಮತ್ತು ಡಿಬಿಒ ವಲಯದ ಭಾರತೀಯ ಬೆಟಾಲಿಯನ್ಗಳಿಗೆ ಹತ್ತಿರದಲ್ಲಿವೆ”.
ಪಿಪಿ 15, ಪಿಪಿ 17 ಮತ್ತು ಪಿಪಿ 17 ಎ ಬಳಿಯ ರಸ್ತೆಯಲ್ಲಿ ಭಾರೀ ವಾಹನಗಳು ಮತ್ತು ಫಿರಂಗಿಗಳನ್ನು ಎಲ್‌ಎಸಿಗೆ ಹತ್ತಿರಕ್ಕೆ ಸಾಗಿಸಲು ಚೀನಿಯರು ಮೂಲಸೌಕರ್ಯ ತೀವ್ರವಾಗಿ ಅಭಿವೃದ್ಧಿ ಪಡಿಸುತ್ತಿದ್ದಾರೆ.
ಡಿಬಿಒ ವಲಯ ಅಕ್ಸಾಯ್ ಚಿನ್ ಪ್ರಸ್ಥಭೂಮಿ ಪ್ರದೇಶದಲ್ಲಿದ್ದು .ಇದು ಭಾರತೀಯ ವಶದಲ್ಲಿರುವ ಅಕ್ಸಾಯ್ ಚಿನ್ ಪ್ರದೇಶವಾಗಿದೆ.
ಪಾಂಗೊಂಗ್ ತ್ಸೋನ ಬೆರಳಿನ ಪ್ರದೇಶದಲ್ಲೂ, ಚೀನಿಯರು ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದನ್ನು ಮುಂದುವರೆಸಿದ್ದಾರೆ ಮತ್ತು ಬೆರಳು ನಾಲ್ಕು ಮತ್ತು ಪಕ್ಕದ ಭಾಗಗಳಲ್ಲಿ ತಮ್ಮ ಸ್ಥಾನಗಳನ್ನು ಬಲಪಡಿಸಿದ್ದಾರೆ.
ಚೀನಾ ಸುಖೋಯ್ -30 ವಿಮಾನಗಳನ್ನು ತನ್ನ ಮುಂಚೂಣಿ ನೆಲೆಗಳಿಗೆ ಸಮೀಪವಾಗಿರುವ ಪ್ರದೇಶದಲ್ಲಿ ಭಾರತೀಯ ಪ್ರದೇಶಕ್ಕೆ ಹತ್ತಿರದಲ್ಲಿ ನಿಯೋಜಿಸಿದ್ದಾರೆ.
ಸ್ಯಾಟಲೈಟ್‌ಗಳು ಹಾಗೂ ಗುಪ್ತಚರ ಮಾಹಿತಿ ನಂಬುವುದಾದರೆ ಚೀನಾ ವಾಯು ರಕ್ಷಣಾ ಗನ್ ಬ್ಯಾಟರಿ ನಿಯೋಜಿಸಿದ್ದು ಕ್ಷಿಪಣಿ ನಿರೋಧಕ ವ್ಯವಸ್ಥೆ ಅಳವಡಿಸಲಾಗಿದೆ.
ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ಈ ಪ್ರದೇಶದ ಮುಂಚೂಣೀ ನೆಲೆಗಳಲ್ಲಿ ನಿಯೋಜಿಸಲಾಗಿದೆ.
ಭಾರತ ಮತ್ತು ಚೀನಾ ನಡುವೆ ಮಾತುಕತೆಗಳು ನಡೆಯುತ್ತಿದ್ದು, ಅಲ್ಲಿ ಒಪ್ಪಂದಗಳಾಗುತ್ತಿದ್ದರೂ ಚೀನಿಯರು ತಮ್ಮ ಬದ್ಧತೆಗಳನ್ನು ಮತ್ತು ಆಶ್ವಾಸನೆಗಳನ್ನು ಗೌರವಿಸುವಲ್ಲಿ ವಿಫಲರಾಗಿದ್ದಾರೆ.