ತುಮಕೂರು ಜಿಲ್ಲೆಯ ಪಾವಗಡದಲ್ಲಿ ಭಾನುವಾರ ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಸಮುದಾಯದವರು ಮೆಕ್ಕ, ಮದೀನ ಮಾಧರಿಗಳೊಂದಿಗೆ ಸಂಭ್ರಮ, ಸಡಗರದಿಂದ ಮೆರವಣಿಗೆ ನಡೆಸಿದರು.
ಜಾಮಿಯಾ ಮಸೀದಿಯಿಂದ ಆರಂಭವಾದ ಮೆರವಣಿಗೆ ಪೆನುಗೊಂಡ ಕೋಟೆ ಬಾಗಿಲ ಮೂಲಕ ರೊಪ್ಪ ಗೆ ಹೋಗಿ ಅಲ್ಲಿಂದ ಪಟ್ಟಣದ ಪ್ರಮುಖ ರಸ್ತಯ ಮೂಲಕ ಶಿರಾ ರಸ್ತೆಗೆ ಆಗಮಿಸಿತು. ಜಾಮಿಯಾ ಮಸೀದಿ ಬಳಿ ಮೆರವಣಿಗೆ ಮುಕ್ತಾಯವಾಯಿತು.
ಯುವಕರು ರಾಷ್ಟ್ರ, ಧರ್ಮ ಧ್ವಜ ಹಿಡಿದು ಉತ್ಸಾಹದಿಂದ ಭಾಗವಹಿಸಿದರು. ಮಸೀದಿ ಆಜಂ ಪ್ರಮುಖರು ಪಟ್ಟಣದಲ್ಲಿ ಹಬ್ಬದ ಪ್ರಯುಕ್ತ ಸಿಹಿ ಹಂಚಿ ಸಂಭ್ರಮಿಸಿದರು.
ಜಾಮಿಯಾ ಮಸೀದಿಯ ಷಾದಿ ಮಹಲ್ ನಲ್ಲಿ ಸಮುದಾಯದವರಿಗೆ ಊಟದ ವ್ಯವಸ್ಥೆ ಮಾಡಲಾಯಿತು. ಜಾಮಿಯಾ ಮಸೀದಿ, ನೌಜವಾನ್ ಕಮಿಟಿಯಿಂದ 3 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಮಾಡಿಸಲಾಯಿತು. ವಿವಾಹಿತ ಜೋಡಿಗಳಿಗೆ ಅಗತ್ಯ ಪೀಠೋಪಕರಣ, ಸಾಮಾನು, ಸರಂಜಾಮುಗಳನ್ನು ಕೊಟ್ಟು ಶುಭ ಹಾರೈಸಲಾಯಿತು.
ಮೊಹಮದ್ ಫಜಲುಲ್ಲಾ, ತಾಲ್ಲೂಕು ವಕ್ಫ್ ಬೋರ್ಡ್ ಸದಸ್ಯ ಮೊಹಮದ್ ಜಾವಿದ್, ಪುರಸಭೆ ಸದಸ್ಯ ಎಂ.ಎ.ಜಿ ಇಮ್ರಾನ್, ಇದಾಯತ್ ಉಲ್ಲಾ, ಯೂನಸ್, ಶಾಕೀರ್, ಮತೀನ್, ಮಹೀದ್, ಮುಭಾರಕ್, ರಿಯಾಜ್, ಷಫಿ ಇದ್ದರು.