Friday, October 4, 2024
Google search engine
HomeUncategorizedಎಲ್ಲರೂ ನೋಡಿ, ಕಲಿಯಬೇಕಾದ 'ಒಳಿತು ಮಾಡು ಮನುಸಾ'

ಎಲ್ಲರೂ ನೋಡಿ, ಕಲಿಯಬೇಕಾದ ‘ಒಳಿತು ಮಾಡು ಮನುಸಾ’

ವಿಮರ್ಶೆ: -ಹರೀಶ್ ಕಮ್ಮನಕೋಟೆ


ಕೊರೊನ ಸಂಕಷ್ಟ ಕಾಲದಲ್ಲಿ ಶತಮಾನದ ಕಥೆಯಾಗಿ ರೂಪುಗೊಂಡ ‘ಒಳಿತು ಮಾಡು ಮನುಸಾ’ ನಾಟಕ ಸರ್ಕಾರಗಳ ಜನವಿರೋಧಿ ಧೋರಣೆಯನ್ನು ಪ್ರತಿಬಿಂಬಿಸುತ್ತದೆ.

ಇಲ್ಲಿ ಎಲ್ಲರೂ ಹೋರಾಟ ಮಾಡುತ್ತಿರುವುದು ಬದುಕಿಗಾಗಿ ಮಾತ್ರ . ಇದರಿಂದ ಯಾರೂ ಹೊರತಲ್ಲ. ಒಳಿತು ಮಾಡುವುದೇ ನಮ್ಮ ಕಾಯಕವಾದರೆ ಜೀವನ ಸಾರ್ಥಕವಲ್ಲವೇ?

ಅತಿ ಹೆಚ್ಚಿನ ಪಾಲು ಬಡವರೇ ತುಂಬಿರುವ ಭಾರತದಲ್ಲಿ ಆಶ್ವಾಸನೆಗಳು ಕಣ್ಣೊರೆಸುವ ತಂತ್ರಗಳಾಗಿಯೇ ಉಳಿದಿವೆ.

ಕಾಗದ ಪತ್ರಗಳ ತರಾತುರಿಯಲ್ಲಿ ಸಹಾಯಧನಗಳು ಕೊಚ್ಚಿ ಹೋಗಿವೆ. ರೈತರು, ನೇಕಾರರು ಮತ್ತು ಕರ ಕಸುಬುಗಳನ್ನೇ ನೆಚ್ಚಿ ಬದುಕುತ್ತಿದ್ದ ಜನ ಇಂದು ಕೊರೊನ ಕಷ್ಟದ ಅಲೆಗೆ ಬಲಿಯಾಗಿದ್ದಾರೆ.

ಸಾಲಗಾರರು ಸಾವಿನ ಆಕ್ರಂದನವನ್ನು ಆಘ್ರಾಣಿಸಿಕೊಂಡಿದ್ದಾರೆ. ಬದುಕು ಸಾಕಾಗಿ ಭಾರವೆನಿಸಿರುವ ಜನರ ಗೋಳನ್ನು ಈ ನಾಟಕ ಪ್ರಸ್ತುತಿಸುತ್ತಿದೆ.

ಜನರ ಆರೋಗ್ಯ ಕಾಳಜಿ ವಹಿಸಬೇಕಾದ ಜನಪ್ರತಿನಿಧಿಗಳು ಚಪ್ಪಾಳೆ ಬಡಿಯಿರಿ, ದೀಪ ಹಚ್ಚಿರಿ, ಟಮಟೆ ವಾದ್ಯಗಳನ್ನು ನುಡಿಸಿರಿ ಎನ್ನುತ್ತಾ.. ಕೊರೋನ :ಗೋ’ ಕೊರೋನ ‘ಗೋ’ ಎನ್ನುವ ಸಲಹೆ ನೀಡುತ್ತಿದ್ದಾರೆ. ಇವರು ಈ ಶತಮಾನದ ಶತ ಮೂರ್ಖರೋ.. ಅಥವಾ ಹೊಣೆಗೇಡಿಗಳೋ ಎನ್ನುತ್ತಿವೆ ನಾಟಕದ ಒಂದೊಂದು ನುಡಿಗಳು.

ಬರಿಗೈ ಕಾಲದಲ್ಲಿ ಜನರಿಗೆ ಜೀವನ ರೂಪಿಸಿಕೊಳ್ಳಲು ಅಗತ್ಯವಾದ ನೆರವು ನೀಡುವ ಜವಾಬ್ದಾರಿಯಿಂದ ಆಡಳಿತ ವರ್ಗ ನುಣುಚಿಕೊಳ್ಳುತ್ತಿರುವ ಪರಿಯನ್ನು ಸೂಚ್ಯವಾಗಿ ಈ ಮೂಲಕ ತಿಳಿಸಿದ್ದಾರೆ.

ಶವ ಸಂಸ್ಕಾರಕ್ಕೆ ಅವಕಾಶ ನೀಡದ ಅಮಾನವೀಯ ಘಟನೆಗಳು ನಡೆದವು. ಆಡಳಿತವು ನಿರ್ಲಜ್ಜ ಮತ್ತು ನಿರ್ಲಕ್ಷ್ಯತನ ತೋರಿತು. ಜನರಿಗೆ ಸರಿಯಾದ ಮಾರ್ಗದರ್ಶನ ಮತ್ತು ಜಾಗೃತಿ, ಮಾಹಿತಿಯನ್ನು ಒದಗಿಸದೆ ದಿಗ್ಭ್ರಾಂತಗೊಳಿಸಿ ಪ್ರಾಣ ಭೀತಿಯಲ್ಲಿ ಮುಳುಗಿಸಿತು. ಕೊರೊನ ವ್ಯಥೆಯನ್ನು ಪೆಣಂಭೂತವಾಗಿಸಿತು.

ಕಾರ್ಮಿಕರು ಆರ್ಥಿಕತೆಯ ಬೆನ್ನೆಲುಬು. ನೂರಾರು, ಸಾವಿರಾರು ಕಿ.ಮೀ ಬರಿಗಾಲಿನಲ್ಲಿ ನಡೆದು ಮನೆಗೆ ಹಿಂದಿರುಗುವ ಪ್ರಸಂಗ ಎದುರಾಗಿ ಹಸಿವಿನಿಂದ ಅಸುನೀಗಿದವರೆಷ್ಟೋ? ಮಿಕ್ಕಿದ್ದ ಅರುಕಲು ಮುರುಕಲು ರೊಟ್ಟಿ ಸೇವಿಸಿ, ಕನಸುಗಳನ್ನು ಹೊತ್ತ ಮನಸುಗಳು ರೈಲು ಗಾಲಿಗಳಿಗೆ ಬಲಿಯಾದವು.

ಈ ದೇಶದ ಜಿಡಿಪಿ ಯ ಸಂಕೇತವಾದ ಕಾರ್ಮಿಕರನ್ನು ಹೊತ್ತು ಚಲಿಸಬೇಕಾದ ರೈಲು ಚಕ್ರಗಳು ಅವರ ನೆತ್ತರನ್ನು ಮೆತ್ತಿಕೊಂಡವು. ಭಾರತದ ಆರ್ಥಿಕತೆಯಂತೆಯೇ ರುಂಡ ಮುಂಡಗಳು ಜರ್ಜರಿತವಾದವು.

ಆದರೆ ಜನಪ್ರತಿನಿಧಿಗಳ ಕಲ್ಲು ಮನಸ್ಸುಗಳು ಮಾತ್ರ ಜಾಣ ಕುರುಡನ್ನು ಪ್ರದರ್ಶಿಸಿದವು. ಕಾರ್ಮಿಕರನ್ನು ಕಾಡು ಮಿಕಗಳಂತೆ ಕಂಡವರು ಮನುಷ್ಯರೋ …
ಮೃಗಗಳೋ.. ಎಂಬುದನ್ನು ಕೇಳುತ್ತಿವೆ ಜೀವಪರ ಮನಸ್ಸುಗಳು.

ಇಲ್ಲಿ ಜಾತಿ ಧರ್ಮಕ್ಕಿರುವ ಪ್ರಾಮುಖ್ಯತೆ ಪ್ರೀತಿಗಿಲ್ಲ. ಇನ್ನು ಮಾನವೀಯತೆಗೆ ನೆಲೆ ಎಲ್ಲಿದೆ ಎಂದು ಈ ನಾಟಕ ಪ್ರಶ್ನಿಸುತ್ತಿದೆ. ನಮ್ಮ ನಿಮ್ಮೊಳಗಿನ ಮನಸ್ಸನ್ನು, ಮುಖವಾಡ ಧರಿಸಿದ ಜನಾಧಿಕಾರವನ್ನು, ಕಪಟತನ ಹೊತ್ತ ಇಡೀ ಪ್ರಭುತ್ವವನ್ನು!


ಹರೀಶ್ ಕಮ್ಮನಕೋಟೆ

ನಾಟಕ: ಒಳಿತು ಮಾಡು ಮನುಸಾ
ರಚನೆ: ಶಶಿಧರ್ ಭಾರಿಘಾಟ್
ನಿರ್ದೇಶನ: ಮಾಲತೇಶ್

RELATED ARTICLES

1 COMMENT

  1. In the present situation no one cares about many things happening infront of us atleast you’ve tried to convey them, the words you used were really I liked it and worth for the reading ☺

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?