.
ತುಮಕೂರು ನಗರದ ಒಕ್ಕಲಿಗರ ಯುವ ಮುಖಂಡರಾಗಿ ಗಮನ ಸೆಳೆಯುತ್ತಿರುವ, ವಕೀಲರು ಆದ ರವಿಗೌಡ ಅವರು ಬರೆದಿರುವ ಒಕ್ಕಲಿಗರ ಕೇಂದ್ರ ಸಂಘದ ಚುನಾವಣೆ ಕುರಿತ ಚುರುಕು ನೋಟ ಇಲ್ಲಿದೆ
ಜಿಲ್ಲೆಯ ಪ್ರಬಲ ಕೋಮು ಆಗಿದ್ದರೂ ಸಹ ಇಂದು ಒಕ್ಕಲು ಮಕ್ಕಳಾದ ನಾವುಗಳು ಸಮಾಜದ ರಕ್ಷಣೆ ಮಾಡುವ ಜನನಾಯಕನಿಲೢದೆ ಅಕ್ಷರಶಃ ತಬ್ಬಲಿಗಳಾಗಿದ್ದೇವೆ .
ಕೇಂದ್ರ ಒಕ್ಕಲಿಗರ ಸಂಘ ವನ್ನು ಪ್ರತಿನಿಧಿಸಿದ ಜಿಲ್ಲೆಯ ಹಲವಾರು ನಿರ್ದೇಶಕರನ್ನು ಈಗಾಗಲೆ ನಾವು ನೋಡಿದ್ದೇವೆ. ಯಾರಿಗೂ ಸಹ ಸಮಾಜದ ಜ್ವಲಂತ ಸಮಸ್ಯೆಗಳ ಅರಿವಿಲ್ಲ .ಸಮಾಜವನ್ನು ಒಗ್ಗೂಡಿಸಬೇಕೆಂಬ ಮನೋಭಾವ ಯಾರಲ್ಲೂ ಸಹ ಇಲ್ಲ. ಸ್ವಹಿತಾಸಕ್ತಿಗೆ ಇವರುಗಳೆಲ್ಲರೂ ನಿರ್ದೇಶಕರು ಗಳಾಗುತ್ತಿದ್ದಾರೆ .
ಹುಚ್ಚಮಾಸ್ತಿಗೌಡರು ವೈ ಕೆ ರಾಮಯ್ಯನವರು ಭೈರಪ್ಪ ಜಿಯವರು ಕೆ ಲಕ್ಕಪ್ಪನವರ.ಆರ್ ನಾರಾಯಣ್ ರವರು ಇನ್ನೂ ಹಲವಾರು ಹಿರಿಯ ರಾಜಕಾರಣಿಗಳು ಸಮಾಜಕ್ಕಾಗಿ ದುಡಿದಿದ್ದಾರೆ .ಆದರೆ ಇಂದು ಅಕ್ಷರಶಃ ನಾವುಗಳು ನಮ್ಮನ್ನು ಹಾಗೂ ನಮ್ಮ ಸಮಾಜವನ್ನು ಮುನ್ನಡೆಸಬಲ್ಲ ಎಂಬ ಭರವಸೆಯುಳ್ಳ ಒಬ್ಬ ನಾಯಕರು ಸಹ ನಮಗೆ ಕಾಣುತ್ತಿಲ್ಲ ಇದು ವಿಪರ್ಯಾಸ.
ಅನ್ಯ ಸಮಾಜದ ರಾಜಕಾರಣಿಗಳಿಂದ ನಮ್ಮ ಸಮಾಜದ ಅಧಿಕಾರಿಗಳಿಗೆ ಆಗುತ್ತಿರುವ ತೊಂದರೆಗಳನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ .ಜಿಲ್ಲಾ ಕೇಂದ್ರದಲ್ಲಿದ್ದು ಸಮಾಜಕ್ಕಾಗಿ ದುಡಿಯುವ ಯಾವೊಬ್ಬ ನಿರ್ದೇಶಕರನ್ನು ಸಹ ನಾವು ಕಾಣಲು ಸಾಧ್ಯವಾಗುತ್ತಿಲ್ಲ..ಎಲ್ಲರೂ ಸಹ ನಾವು ಅದನ್ನು ಮಾಡಿದ್ದೇವೆ, ಇದನ್ನು ಮಾಡುತ್ತವೆಂದು ಸುಳ್ಳು ಭರವಸೆಗಳ ಸರಮಾಲೆಯನ್ನು ಬಿಚ್ಚಿಡುತ್ತಾರೆ ಆದರೆ ಇಲ್ಲಿಯವರೆಗೂ ಯಾರಿಂದಲು ಸಮಾಜದ ಉದ್ಧಾರಕ್ಕೆ ಏನು ಮಾಡಲು ಸಾಧ್ಯವಾಗಿಲ್ಲ ..
ಇವತ್ತಿನ ಯುವ ಜನತೆಗೆ ಸಮಾಜಕ್ಕೆ ತನ್ನನ್ನು ತಾನು ಸಮರ್ಪಣೆ ಮಾಡಿಕೊಳ್ಳುವಂತ ನಾಯಕನ ಅವಶ್ಯಕತೆ ಇದೆ. ಪ್ರತಿದಿನ ನೂರಾರು ಜ್ವಲಂತ ಸಮಸ್ಯೆಗಳು ಸಮಾಜದ ವಿದ್ಯಾರ್ಥಿಗಳು, ಅಧಿಕಾರಿಗಳು, ರೈತರ ಪರವಾಗಿ ದೃಢ ನಿಲುವುಗಳನ್ನು ತೆಗೆದುಕೊಂಡು ಅವರಿಗೆ ನ್ಯಾಯ ಒದಗಿಸುವಂತಹ ಕೆಲಸವನ್ನು ಮಾಡುವಂತಹ ನಿರ್ದೇಶಕರುಗಳು ಸಮಾಜಕ್ಕೆ ಬೇಕಾಗಿದೆ.
ವಿಪರ್ಯಾಸವೆಂದರೆ ಜಿಲ್ಲೆಯ ಕೇಂದ್ರ ಸ್ಥಾನದಲ್ಲಿ ಸಮಾಜದ ಒಂದು ಭವನವಿಲ್ಲದಿರುವುದು ಜಿಲ್ಲೆಯಲ್ಲಿ ನಾವು ಎಷ್ಟು ಒಗ್ಗಟ್ಟಾಗಿದ್ದೇವೆ ಎಂಬುದನ್ನು ತೋರಿಸುತ್ತದೆ.
ಸಮಾಜದ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಕ್ಕಾಗಿ ನಗರಪ್ರದೇಶವನ್ನು ಆಶ್ರಯಿಸಬೇಕಾದ ಇಂಥ ಪರಿಸ್ಥಿತಿಯಲ್ಲಿ ಅವರುಗಳಿಗೆ ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸುವುದು..ಈಗಾಗಲೇ ಸಮಾಜದ ಹಿರಿಯರು ಸಮಾಜಕ್ಕೆ ಅರ್ಪಿಸಿರುವ ಹಾಸ್ಟೆಲ್ ಗಳನ್ನು ಉನ್ನತ ದರ್ಜೆಗೇರಿಸಿ ಹಲವಾರು ಕ್ರಿಯಾಶೀಲ ಸಮಾಜದ ಯುವಕ ಯುವತಿಯರನ್ನು ಅವರು ಇಷ್ಟಪಡುವಂಥ ಉನ್ನತ ಶಿಕ್ಷಣವನ್ನು ಕೊಡಿಸಿ ನಂತರ ಆಯಕಟ್ಟಿನ ಜಾಗಗಳಲ್ಲಿ ಉತ್ತಮ ದರ್ಜೆ ಅಧಿಕಾರಿಗಳನ್ನಾಗಿ ನೋಡುವಂತಹ ಸಮಾಜವನ್ನು ನಿರ್ಮಾಣ ಮಾಡುವಂತಹ ನಿರ್ದೇಶಕನನ್ನು ಚುನಾಯಿಸಬೇಕಾಗಿದೆ.
ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಕಟ್ಟಕಡೆಯ ಸಮಾಜದ ಬಡ ಮಕ್ಕಳಿಗೆ ಲ್ಯಾಪ್ ಟಾಪ್ ಗಳನ್ನು ಒದಗಿಸುವಂತೆ ಕಾರ್ಯಕ್ರಮಗಳನ್ನು ಆಯೋಜಿಸ ಬೇಕಾದಂತಹ ಅನಿವಾರ್ಯ ಇರುವುದರಿಂದ ಅಂತಹ ಯೋಜನೆಗಳನ್ನು ನಿರೂಪಿಸಬೇಕಾಗಿರುವ ತಕ್ಕಂತ ನಿರ್ದೇಶಕರ ಆಯ್ಕೆ ನಮಗೆ ಬೇಕಾಗಿದೆ
ಕೊನೆಯದಾಗಿ ಹೇಳುವುದಿಷ್ಟೆ ನಾವು ಒಕ್ಕಲಿಗರು ಒಕ್ಕಲುತನವನ್ನು ಕುಲಕಸುಬಾಗಿ ಸ್ವೀಕರಿಸಿರುವವರು. ಈ ಸಮಾಜ ಎಂದಿಗೂ ಕೂಡ ಯಾರಿಗೂ ಸಹ ಮೋಸ ಅನ್ಯಾಯ ಮಾಡುವುದಿಲ್ಲ. ಎಲ್ಲರನ್ನೂ ಸಹ ಸರಿಸಮನಾಗಿ ನೋಡುವಂಥ ಸಮಾಜ ನಮ್ಮ ಒಕ್ಕಲಿಗ ಸಮಾಜ ..ಆದ್ದರಿಂದ ಒಕ್ಕಲಿಗರಾದ ನಾವು ಅತ್ಯಂತ ಜಾಗರೂಕತೆಯಿಂದ ಎಚ್ಚರಿಕೆಯಿಂದ ನಮ್ಮ ಸಮಾಜದ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಗಾಢವಾಗಿ ಆಲೋಚನೆ ಮಾಡಿ ಆಯ್ಕೆ ಮಾಡಬೇಕಾಗಿದೆ.