ಜನಮನ

ಕರೊನಾ: ಹಳ್ಳಿಗಳಿಗೆ ಬರಬೇಡಿ ಪ್ಲೀಸ್… ಗ್ರಾ.ಪಂ.ಅಧ್ಯಕ್ಷ್ಯೆ ಬರೆದ ಮನಕಲಕುವ ಪತ್ರದಲ್ಲಿ‌ ಏನಿದೆ…

ಪಬ್ಲಿಕ್ ಸ್ಟೋರಿ.ಇನ್


ತುಮಕೂರು: ಬೆಂಗಳೂರು ಸೇರಿದಂತೆ ಯಾವುದೇ ನಗರದಿಂದ ಜನರು ಹಳ್ಳಿಗಳಿಗೆ ಬರದಿರುವಂತೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಗ್ರಾಮ ಪಂಚಾಯತಿ ಅಧ್ಯಕ್ಷ್ಯೆ ಗೀತಾ ರಾಮಕೃಷ್ಣ ಮನ ಕಲಕುವ ಪತ್ರ ಬರೆದಿದ್ದಾರೆ.

ಕರೊನಾ ಕಾರಣ ಹಳ್ಳಿಗಳು ಸೇಫ್ ಎಂದು ಯಾರೂ ಭಾವಿಸವಾರದು. ಹಳ್ಳಿಗಳಿಗಿಂತ ನಗರಗಳೇ ಹೆಚ್ಚು ಸುರಕ್ಷಿತ ಎಂದು ಹೇಳಿದ್ದಾರೆ.


ಹಳ್ಳಿಯಲ್ಲಿ ವೈರಸ್ ಸೋಂಕು ಬಂದರೆ‌ ಅವರನ್ನು ಆಸ್ಪತ್ರೆಗೆ ತೋರಿಸಲು ನಗರಕ್ಕೆ ಹೋಗಬೇಕು. ಇಲ್ಲಿನ ಆ‌ಸ್ಪತ್ರೆಗಳಲ್ಲಿ ಯಾವುದೇ ಸೌಲಭ್ಯ ಇಲ್ಲ. ವೆಂಟಿಲೇಟರ್, ಏಸೊಲೇಷನ್ ವಾರ್ಡ್ ಇಲ್ಲ. ಅವರನ್ನು ಕರೆದುಕೊಂಡು‌ ಹೋಗಲು ವಾಹನಗಳು ಇರುವುದಿಲ್ಲ. ಹೆದರಿಕೆಗೆ ಬಾಡಿಗೆ ವಾಹನ ಸವಾರರು ಬರುವುದಿಲ್ಲ ( ಅವು ಸಹ ಊರಿಗೆ‌ ಒಂದು ಇರಬಹುದು, ಕೆಲವು ಕಡೆ ಇಲ್ಲದೆಯು ಇರಬಹುದು) ರೋಗಿಯನ್ನು ಮನೆಯಿಂದ ಕರೆದುಕೊಂಡು ಹೋಗಬೇಕಾದರೆ ಅನುಸರಿಸಬೇಕಾದ ಸುರಕ್ಷಾ ಸಾಧನಗಳು ಇಲ್ಲಿಲ್ಲ. ಹೀಗಾಗಿ ನಿಮ್ಮೊಂದಿಗೆ ಇನ್ನು ಕೆಲವರಿಗೂ ವೈರಸ್ ತಗುಲಿ ಹಳ್ಳಿಗಳಲ್ಲಿ ಮರಣ ಮೃದಂಗ ಆಗಲಿದೆ.


ಕರೊನಾ ತಡೆಗಟ್ಟಬೇಕಾದರೆ ಮನೆಯೊಳಗೆ ಇದ್ದರೆ ಸಾಕು. ಹಳ್ಳಿಗೆ ಬಂದರೂ ಮನೆಯೊಳಗೆ ಇರಬೇಕು. ಹಬ್ಬ, ಹರಿದಿನ, ದೇವಸ್ಥಾನಗಳಲ್ಲಿ ಪೂಜೆ ಯಾವೊಂದು ಹಳ್ಳಿಗಳಲ್ಲಿ ಇಲ್ಲವಾಗಿದೆ. ತೋಟ ತುಡಿಕೆಗಳಿಗೆ ದೈರ್ಯವಾಗಿ ನಮ್ಮ ಜನರು ಓಡಾಡಯತ್ತಿದ್ದಾರೆ. ಈಗ ಬೇಸಿಗೆ ಕಾರಣ ತೋಟಗಳಿಗೆ ನೀರು ಕೊಡುವುದು ಅನಿವಾರ್ಯ. ಒಂದು ವೇಳೆ ಕರೊನಾ ಹಳ್ಳಿಗೂ ಬಂದರೆ ಮನುಷ್ಯನ ಪ್ರಾಣ ಮಾತ್ರ ಹೋಗುವುದಿಲ್ಲ ಕುಟುಂಬದ ಬದುಕೇ ಸರ್ವನಾಶ ಆಗಲಿದೆ.

ಈಗಾಗಲೇ ಹಳ್ಳಿಗಳಿಂದ ವಿದೇಶಕ್ಕೆ ಕೆಲಸಕ್ಕೆ ಹೋಗಿದ್ದವರು ಬಂದಿದ್ದಾರೆ. ಇದು ಹಳ್ಳಿಗಳಲ್ಲಿ ನಡುಕ ತಂದಿದೆ. ಮತ್ತೇ ನಗರಗಳಿಂದ ಬಂದರೆ ಮತ್ತಷ್ಟು ಕ್ರೌಡ್ ಆಗಲಿದೆ.

ಹಳ್ಳಿಗಳಲ್ಲಿ ಉಡಾಫೆ ಹೆಚ್ಚು. ಅದರಲ್ಲೂ ಬೆಂಗಳೂರಿನಿಂದ ಬಂದವರಲ್ಲಿ ಕೆಲವರು ಉಡಾಫೆಯ ಮಾತುಗಳನ್ನಾಡುತ್ತಾರೆ.‌ ಪಟ್ಟಣ ವಾಸಿಗಳ ತಿಂಡಿ ಆಸೆ ಪೂರೈಸಲು ಅಂಗಡಿ, ಬೇಕರಿಗಳ ಅವಲಂಬನೆ ಹೆಚ್ಚಲಿದೆ. ಇದರಿಂದ ಜನ ಸಂದಣಿ ನಿರ್ವಹಣೆ ಕಷ್ಟವಾಗಲಿದೆ.

Comment here