ಡಾ//ರಜನಿ ಎಂ
ಹೃದಯದಲ್ಲಿ
ಮೂಡಿ…
ಕವಿತೆಯಾಗದೇ ಉಳಿದ
ಅನೇಕ ಭಾವ
ಹೇಳಲಾಗದ ಮಾತುಗಳು
ಕವಿತೆಗಳಾಗುತ್ತವೆ
ಅವರವರ ಭಾವಕ್ಕೆ
ಭಾಷೆಯ ಭಗೆಯಿಲ್ಲ
ಛಂದಸ್ಸಿನ ಗೋಜಿಲ್ಲ
ಕಾಲದ ಹ೦ಗಿಲ್ಲ
ಹಾಡಬೇಕಾದ ಹಸಿವಿಲ್ಲ
ಕಣ್ಣ ಒದ್ದೆ
ತುಟಿಯ ಮೃದು
ತುಂಟ ನೆನಪು
ಕವಿಯದೋ
ನಿನ್ನದೋ?
ಕವಿತೆಯಲಿ
ಅಡಗಿಸಿಯೂ
ಹೇಳಲಾಗದ
ಮಧುರ ಮೆಲುಕು
ಅಧರದ ಮೇಲಿನ
ಗುಲಾಬಿ ಪಕಳೆ
ನಿನ್ನದೇ ಸೆ೦ಟಿನ
ಕರ್ಚಿಫು
ಅದೇ ಹಾಡು..
ಮಿಡಿದು ನಿನ್ನ ಕವನ
ನನ್ನ ಹೃದಯದಲಿ
ಮಾರ್ಚ್ 21 ವಿಶ್ವ ಕವಿತೆಯ ದಿನದ ಅಂಗವಾಗಿ ನೀವು ಬರೆದ ಕವಿತೆಗಳನ್ನು ಪಬ್ಲಿಕ್ ಸ್ಟೋರಿಯ. ವಾಟ್ಸಪ್ ನಂಬರ್ ಗೆ ಕಳುಹಿಸಿ.



 

