Publicstory.in
ತುಮಕೂರು: ಕಾರ್ಮಿಕರು, ರೈತರ ಪರ ಕಾಯ್ದೆಗಳನ್ನು ತಿದ್ದುಪಡಿ ಮಾಡಿರುವ ಬಿಜೆಪಿ ಸರ್ಕಾರದ ವಿರುದ್ಧ ಸಿಐಟಿಯು, ಪ್ರಾಂತ ರೈತ ಸಂಘ. ಕಟ್ಟಡ ಕಾರ್ಮಿಕರ ಸಂಘಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಶನಿವಾರ ಆಕ್ರೋಶಭರಿತ ಪ್ರತಿಭಟನೆ ನಡೆಯಿತು.
ಕೊರೊನಾ ಕಾರಣ ಗುಬ್ಬಿ, ತುಮಕೂರು ತಾಲ್ಲೂಕು ಸೇರಿದಂತೆ ವಿವಿಧ ತಾಲ್ಲೂಕುಗಳ ಗ್ರಾಮ ಪಂಚಾಯತಿ ಗಳ ಎದುರು ಪ್ರತಿಭಟನೆಗಳು ನಡೆದವು.
ಸಿ.ಡಬ್ಲ್ಯೂ.ಎಫ್.ಐ. ಕಟ್ಟಡ ಕಾಮಿ೯ಕರಿಂದ ಗುಬ್ಬಿ ತಾಲ್ಲೂಕು ಚೇಳೂರು ಗ್ರಾ.ಪಂ. ಮುಂದೆ ಪ್ರತಿಭಟನೆ ನಡೆಸಲಾಯಿತು.
ಸಿ.ಡಬ್ಲ್ಯೂ.ಎಫ್.ಐ. ಕಟ್ಟಡ ಕಾಮಿ೯ಕರಿಂದ ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಗ್ರಾ.ಪಂ. ಮುಂದೆ ಪ್ರತಿಭಟನೆ ನಡೆಸಲಾಯಿತು.
ತುಮಕೂರು ತಾಲ್ಲೂಕು ನಿಡವಳಲು ಗ್ರಾ.ಪಂ. ಮುಂದೆ ತೊಂಡಗೆರೆ ಘಟಕದವತಿಯಿಂದ ಪ್ರತಿಭಟನೆ ನಡೆಸಲಾಯಿತು.
ತುಮಕೂರು ತಾಲ್ಲೂಕು ಬೆಳ್ಳಾವಿ ಗ್ರಾ.ಪಂ. ಮುಂದೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಮುಖಂಡರಾದ ಸಯ್ಯದ್ ಮುಜೀಬ್, ಬಿ.ಉಮೇಶ್, ಕೆ.ಸುಬ್ರಹ್ಮಣ್ಯ, ಸಿ.ಅಜ್ಜಪ್ಪ ಸೇರಿದಂತೆ ಅನೇಕ ಮುಖಂಡರು ವಹಿಸಿದ್ದರು.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಜನಸಾಮಾನ್ಯರ ಮೇಲೆ ಬದುಕಿಗೆ,ಅವರ ಕುಟುಂಬಕ್ಕೆ ಭದ್ರತೆಯೇ ಇಲ್ಲದಂತೆ ಮಾಡಿದೆ ಎಂದು ಬಿ.ಉಮೇಶ್ ಕಿಡಿಕಾರಿದರು.
ಸಂಕಷ್ಟದಲ್ಲಿರುವ ಜನ ಸಾಮಾನ್ಯರ ಬದುಕನ್ನು ರಕ್ಷಿಸಲು ಐಕ್ಯ ಚಳವಳಿಯಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ *ರೈತ-ಕಾರ್ಮಿಕ-ಮಹಿಳಾ ಕೂಲಿಕಾರರ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಐಕ್ಯ ಹೋರಾಟ ನಡೆಸಬೇಕಾಗಿದೆ ಎಂದರು.
ಬೇಡಿಕೆಗಳೇನು
1) *ಪ್ರತಿಯೊಬ್ಬರನ್ನು ಉಚಿತವಾಗಿ ಕೊವಿಡ್ ಪರೀಕ್ಷೆಗೆ ಒಳಪಡಿಸಿ ಉಚಿತ ಔಷಧೋಪಚಾರ ಒದಗಿಸಬೇಕು.
2) *ಪ್ರತಿಯೊಬ್ಬರಿಗೂ ಮುಂದಿನ ೬ ತಿಂಗಳವರೆಗೆ ಮಾಸಿಕ ರೂ 7500 ಕೊವಿಡ್ ಪರಿಹಾರ ನೀಡಬೇಕು.
3) *ಕುಟುಂಬದ ಪ್ರತಿ ಸದಸ್ಯನಿಗೂ ಮಾಸಿ 10 ಕೆ.ಜಿ. ಉಚಿತ ಆಹಾರ ಧಾನ್ಯ ವಿತರಿಸಬೇಕು.
4) *ಉದ್ಯೋಗ ಖಾತ್ರಿ ವೇತನವನ್ನು ಪ್ರತಿದಿನಕ್ಕೆ ಕನಿಷ್ಟ ರೂ. 600 ಕ್ಕೆ ಹೆಚ್ಚಿಸಬೇಕು ಕನಿಷ್ಠ ೨೦೦ ದಿನ ಕೆಲಸ ನೀಡಬೇಕು ಹಾಗೂ ನಗರ ಪ್ರದೇಶಕ್ಕೂ ವಿಸ್ತರಿಸಬೇಕು.
5) *ಶಿಕ್ಷಣ-ಆರೋಗ್ಯ-ರೈಲು-ರಸ್ತೆ-ವಿದ್ಯುತ್-ದೂರಸಂಪರ್ಕ-ವಿಮಾ-ಬ್ಯಾಂಕ್ ಖಾಸಗೀಕರಣ ಪ್ರಕ್ರಿಯೆ ತಡೆಯಬೇಕು.
6) *ಭೂ ಕಾಯ್ದೆ APMC ಕಾಯ್ದೆ ತಿದ್ದುಪಡಿ ಕಾರ್ಮಿಕ ಕಾನೂನು ತಿದ್ದುಪಡಿ ಹಾಗೂ ಅಗತ್ಯ ಸೇವಾ ಸುಗ್ರೀವಾಜ್ಙೆಗಳನ್ನು ರದ್ದುಪಡಿಸಬೇಕು
7) *ಮಹಿಳಾ ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್/ ಸಹಕಾರ ಸಂಘಗಳು ಮೈಕ್ರೋ ಫೈನಾನ್ಸ್ ಮತ್ತಿತ್ತರ ಕಿರುಸಾಲ ಸಂಸ್ಥೆಗಳು ನೀಡಿರುವ ಸಾಲವನ್ನು ಬಡ್ಡಿ ಸಮೇತ ಮನ್ನಾ ಮಾಡಬೇಕು ಹಾಗೂ ಹೊಸ ಸಾಲ ನೀಡಬೇಕು.