ತುಮಕೂರು: ಗುಬ್ಬಿ ಹಾಗೂ ಶಿರಾದಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಶಿರಾ ಗ್ರಾಮದ ಹೊಸೂರು ಗ್ರಾಮದ ಮಹಿಳೆಗೆ ಸೋಕು ಪತ್ತೆಯಾಗಿದೆ. ಜ್ವರ, ಗಂಟಲಿನ ನೋವಿನಿಂದ ಗೋಮಾದರನಹಳ್ಳಿ ಆಸ್ಪತ್ರೆಗೆ ತೆರಳಿದ್ದ ಈತನನ್ನು ಶಿರಾ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ಯಾಬ್ ಪರೀಕ್ಷೆ ಮಾಡಲಾಗಿತ್ತು.
ಇನ್ನೂ ಚೇಳೂರಿನಲ್ಲಿ 28 ವರ್ಷದ ಯುವಕನಿಗೆ ಸೋಂಕು ತಗುಲಿದೆ. ಈತ ಮೊದಲಿಗೆ ಚೇಳೂರು ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದ್ದ, ನಂತರ ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 52ಕ್ಕೇರಿದೆ.