ತುರುವೇಕೆರೆ, ಮಾರ್ಚ್-19; ಪಟ್ಟಣದ ಹಿರಿಯ ಸಾಹಿತಿ ಚಂದ್ರಶೇಖರ.ಚಿ.ತೋಟದ ಅಲ್ಪಕಾಲದ ಅಸ್ವಸ್ಥತೆಯಿಂದ ಇಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಶ್ರೀಯುತರು ಮೂಲತಃ ಗದಗ ಜಿಲ್ಲೆಯ ನರಗುಂದದವರಾಗಿದ್ದು ಕಳೆದ 25 ವರ್ಷಗಳಿಂದ ಪಟ್ಟಣದಲ್ಲೇ ನೆಲೆಸಿದ್ದರು. ವೃತ್ತಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಹಿರಿಯ ಸಹಾಯಕರಾಗಿ ಸೇವೆ ಸಲ್ಲಿಸಿದ್ದ ಅವರು ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು. ತೋಟದ ಅವರು 3 ಕಥಾ ಸಂಕಲನ, ಒಂದು ಕವನ ಸಂಕಲನ, ಒಂದು ಪ್ರಬಂಧ ಸಂಕಲನ, 4ಮಕ್ಕಳ ನಾಟಕಗಳು ಹೀಗೆ ಹಲವಾರು ಕೃತಿಗಳನ್ನು ರಚಿಸಿದ್ದರು.
ಅವುಗಳಲ್ಲಿ ನಂದಗೋಕುಲದಲ್ಲೊಂದು ಪಾಪಪ್ರಜ್ಞೆ ( ಕಥಾ ಸಂಕಲನ), ತೆಂಗಿನಮರ(ಕವನ ಸಂಕಲನ) ಕೃತಿಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು. ಇಳಿವಯಸ್ಸಿನಲ್ಲೂ ತೀವ್ರ ಪರಿಶ್ರಮದಿಂದ ಹಲವು ದಾಖಲೆಗಳನ್ನು ಸಂಗ್ರಹಿಸಿ ಸಮೀಪದ ತಾವರೆಕೆರೆಯ ಇತಿಹಾಸ ಪ್ರಸಿದ್ಧ ‘ಅಚ್ಛರಿಯ ಅಘೋರೇಶ್ವರ ಚರಿತೆ’ ಬರೆಯುವ ಮೂಲಕ ತಾಲ್ಲೂಕಿನ ಶಿಲ್ಪಕಲಾವೈಭವ, ದೇವಾಲಯಗಳ ಮಹಿಮೆ, ಇತಿಹಾಸ ಇವುಗಳ ಪರಿಚಯ ಮಾಡಿಕೊಟ್ಟಿದ್ದರು.
ಹಲವು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದರು. ತಾಲ್ಲೂಕಿನ 5ನೇ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ತೋಟದ ಅವರನ್ನು ಸನ್ಮಾನಿಸಲಾಗಿತ್ತು. ಶೀಯುತರು ಪತ್ನಿ ಜಯಶ್ರೀ, ಪುತ್ರರಾದ ವಿಜಯಕುಮಾರ್, ಶಿವಯೋಗಿ, ಮಂಜುನಾಥ್ ಹಾಗೂ ಅಪಾರ ಬಂಧುಬಳಗ,ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.ಶ್ರೀಯುತರ ಅಂತ್ಯಕ್ರಿಯೆ ಶನಿವಾರ ತಿಪಟೂರಿನಲ್ಲಿ ನಡೆಯಲಿದೆ.
ಚಂದ್ರಶೇಖರ ತೋಟದ ಅವರ ನಿಧನಕ್ಕೆ ಕಸಾಪ ಅಧ್ಯಕ್ಷ ನಂ.ರಾಜು, ಬರಹಗಾರ ತುರುವೇಕೆರೆ ಪ್ರಸಾದ್, ಕಸಾಪ ನಿಕಟಪೂರ್ವ ಅಧ್ಯಕ್ಷ ಸಾ.ಶಿ.ದೇವರಾಜು, ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ವೆಂಕಟೇಶ್ ಹಾಗೂ ಸಾಹಿತ್ಯಾಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಚಂದ್ರಶೇಖರ. ಚಿ.ತೋಟದ ಇನ್ನಿಲ್ಲ
RELATED ARTICLES
Recent Comments
ಗುರು on
ಕೊಳಲ ಕರೆ on
ಕೊಳಲ ಕರೆ on
ಕೋರೋಣ on
ಸರಗಳವು on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on