Saturday, December 21, 2024
Google search engine
Homeಸಾಹಿತ್ಯ ಸಂವಾದಕವನಜಂಗಮವಾಣಿ ಜಾಗದೊಳ್ ಮೂಕಪ್ರೇಕ್ಷಕ ನಾವಿಂದು

ಜಂಗಮವಾಣಿ ಜಾಗದೊಳ್ ಮೂಕಪ್ರೇಕ್ಷಕ ನಾವಿಂದು

ಶಂಕರ್ ಬರಕನಹಾಲ್


ಜಾಗತಿಕ ಕರೊನಾ ಭಯದಲ್ಲಿ
ಬದುಕುಳಿಯುವ
ಯೋಚನೆಯ ಅಡಿಯಲ್ಲಿ
ಸಾಗಲಾರದೆ ಸಾಗುತಿದೆ
ನೀರಸ ಪಯಣ.

ಬಣ್ಣ ಬಣ್ಣದ ಜಗತ್ತಿನಲ್ಲಿ
ಕಪ್ಪು ಬಿಳುಪಿನ ಬದುಕಿನಲ್ಲಿ
ಗುರಿಗಳಿಗೆ ಗುರುಗಳಿಲ್ಲ
ಗುರುಗಳಿಗೂ ಮಾರ್ಗವಿಲ್ಲ
ಅರ್ಥವಾಗದ ಜಗತ್ತಿನಲ್ಲಿ
ಮೂಕಪ್ರೇಕ್ಷಕ ನಾವಿಂದು.

ಮನಸಿನ ಮಾತುಗಳಿಗೆ
ಬೆಲೆಗಳಿಲ್ಲ,ಅರ್ಥಗಳಿಲ್ಲ
ಜಂಗಮವಾಣಿ ಜಾಗದೊಳ್
ಜಂಗಮರು ನಾವಿಂದು
ಜಂಗಮವಾಣಿಯ ಅಡಿಯೊಳಗೇ.

ಯಾಂತ್ರಿಕ ಮನುಷ್ಯನಾ
ತಾಂತ್ರಿಕತೆಯ ಬದುಕಿನಲ್ಲಿ
ಖುಷಿಯಲ್ಲಿ ನಿರ್ಮಿಸಿದ ಆ ಮನೆಯೊಳಗೆ ಸುಖ ಶಾಂತಿಯೇ ಸಾಮಾಜಿಕ ಜಾಲತಾಣಗಳು.

EMI ನಲ್ಲಿ ತಂದ ಬರ್ಮೋಡ ಚಡ್ಡಿ,
ಅಪ್ಪ ಹಾಕಿಸಿದ ಪೆಟ್ರೋಲ್
ಖುಷಿಯಾಗಿ ಚಲಿಸಲೆಂದು ತಂದ
ವಾಹನಗಳಿಗೆ ಚಲಿಸುವ ಮಾರ್ಗವಿಲ್ಲ.

ಅಂತದ್ರಲ್ಲಿ ಇಂದಿನ ಯುವಪೀಳಿಗೆ
ತುಂಬಾ ಉತ್ಸಾಹದಿಂದ
ಸಾಮಾಜಿಕ ಜಾಲತಾಣದ
ಭ್ರಮೆಯಲ್ಲಿ ತೇಲುತ್ತಿರುವ ಮಹನೀಯರೇ ಅದು
ಅಮಲು ಪದಾರ್ಥವೋ ಅಥವಾ ಔಷಧಿಯೋ ಎಂದು
ಮೊದಲು ಯೋಚಿಸಿ.

RELATED ARTICLES

1 COMMENT

  1. ಮನೆ ಮುರುಕ ಯುವಕರು ಸಾಮಾನ್ಯ ಜ್ಞಾನ ಇಲ್ಲದೆ ಸಾಮಾಜಿಕ ಜಾಲ ತಾಣಗಳಲ್ಲಿ ಮುಳುಗಿ ಹೋಗುವಂತೆ ಆಗಿದೆ..

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?