ತುಮಕೂರ್ ಲೈವ್

ತಿಪಟೂರು ಗಣೇಶೋತ್ಸವ; ಪಟಾಕಿ ಬಗ್ಗೆ ಎಚ್ಚರವಹಿಸಲು ಆಗ್ರಹ

ತಿಪಟೂರು; ತಿಪಟೂರಿನಲ್ಲಿ ಅದ್ಧೂರಿ ಗಣಪತಿ ಜಾತ್ರೆ ನ. 23 ಮತ್ತು 24 ರಂದು ನಡೆಯಲಿದ್ದು, ಜಾತ್ರೆಯಲ್ಲಿ ಪಟಾಕಿ ಸಿಡಿಸುವಾಗ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳ ಬೇಕೆಂದು ತಿಪಟೂರು ಕೆರೆ ಗುತ್ತಿಗೆದಾರರಾದ ಹೆಚ್ ಎಸ್ ದೇವರಾಜ್ ಅಗ್ರಹಿಸಿದ್ದಾರೆ.

ಕಳೆದ ಬಾರಿಯ ಜಾತ್ರೆಯಲ್ಲಿ ಸಮರ್ಪಕ ಮುಂಜಾಗೃತ ಕ್ರಮಗಳಿಲ್ಲದೆ ಅನಾಹುತವಾಗಿದ್ದು . ಈ ಬಾರಿ ಅಂತಹ ದುರಂತಗಳಿಗೆ ಅಸ್ಪದ ನೀಡಬಾರದು. ಪಟಾಕಿ ಸಿಡಿತದಿಂದ ಅನಾಹುತ ಸಂಭವಿಸಿದರೆ ಯಾರನ್ನು ಹೊಣೆ ಮಾಡುತ್ತೀದ್ದಿರಿ ಎಂದು ಸ್ಪಷ್ಟಪಡಿಸಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಕೋರಿದ್ದಾರೆ.

ಉತ್ಸವದ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಗೆ ಕೆರೆ ಗುತ್ತಿಗೆದಾರರಾದ ನನಗೆ ಆಹ್ವಾನಿಸಿಲ್ಲ. ಸರ್ಕಾರ ಕೆರೆ ಗುತ್ತಿಗೆ ನೀಡುವಾಗ ಕೆರೆಯಲ್ಲಿ ಅಥವಾ ಕೆರೆ ಏರಿಯ ಮೇಲೆ ಪಟಾಕಿ ಹೊಡೆಯ ಬಾರದೆಂದು ನಿಂಬಂಧನೆ ವಿಧಿಸಿದೆ. ಶಾಂತಿ ಸಭೆಗೆ ಸಣ್ಣ ನೀರಾವರಿ ಇಲಾಖೆ , ಮೀನುಗಾರಿಕಾ ಇಲಾಖೆ ಮತ್ತು ಮೀನು ಗುತ್ತಿಗೆದಾರರನ್ನು ಕರೆಯದೆ ಏಕಾ ಏಕಿ ನಿರ್ಧಾರ ಮಾಡಲಾಗಿದೆ. ವಿಸರ್ಜನೆ ವೇಳೆ ಯಾವುದಾದರೂ ಅನಾಹುತ ಸಂಭವಿಸಿದರೆ ಯಾರನ್ನು ಹೊಣೆಗಾರರನ್ನಾಗಿ ಮಾಡುತ್ತೀರಿ. ಯಾರಿಂದ ಮುಚ್ಚಳಿಕೆ ಪಡೆದಿದ್ದೀರಿ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ.

ಗಣೇಶೋತ್ಸವ ಹಿನ್ನೆಲೆ ಯಲ್ಲಿ ಯಾವುದೇ ಅನಾಹುತ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

Comment here