ತುಮಕೂರು; ಜಿಲ್ಲೆಯಲ್ಲಿ ಬುಧವಾರ 32 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 597 ಆಗಿದೆ.
ತುಮಕೂರು ನಗರದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ನಗರದ ನಾಗರಿಕರನ್ನು ಭಯಭೀತರಾಗಿಸಿದೆ. ಒಂದೇ ದಿನ 17ಮಂದಿಗೆ ಸೋಂಕು ತಗುಲಿದೆ.
ಇದನ್ನು ಓದಿ:ಕೊರೊನಾ: ತುಮಕೂರು ಜಿಲ್ಲಾಡಳಿತಕ್ಕೆ ಪ್ರಶ್ನೆಗಳಿವೆ ಎಂದ ಮಂಜುನಾಥ್
ತುಮಕೂರು ತಾಲ್ಲೂಕಿನ ಚಿಕ್ಕಸಾರಂಗಿಯ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ.
ಮಧುಗಿರಿಯಲ್ಲಿ ಎಂಟು, ಚಿಕ್ಕನಾಯಕನಹಳ್ಳಿಯಲ್ಲಿ ಏಳು ಹಾಗೂ ಕೊರಟಗೆರೆ ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ಹರಡಿದಿದೆ.