ತುಮಕೂರು: ತುಮಕೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವನೆ ಎರಡೂ ಹಂತಗಳಲ್ಲೂ ನಡೆಯಲಿದೆ.
ಡಿಸೆಂಬರ್ 26 ಮತ್ತು 27ರಂದು ಚುನಾಚಣೆ ನಡೆಯಲಿದೆ. ಡಿಸೆಂಬರ್ 26ರಂದು ಐದೂ ತಾಲ್ಲೂಕುಗಳಲ್ಲಿ, ಡಿ.27ರಂದು ಉಳಿದ ಐದು ತಾಲ್ಲೂಕುಗಳಲ್ಲಿ ಚುನಾವನೆ ನಡೆಯಲಿದೆ.
ಮೊದಲ ಹಂತದಲ್ಲಿ ಚುನಾವಣೆ ನಡೆಯುವ ತಾಲ್ಲೂಕುಗಳಲ್ಲಿ ಡಿಸೆಂಬರ್ 7ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಎರಡನೇ ಹಂತದ ಚುನಾವಣೆಗೆ ಡಿಸೆಂಬರ್ ಹನ್ನೊಂದರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಪಕ್ಷಗಳಲ್ಲಿ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿದ್ದು. ಟಿಕೆಟ್ ಗಿಟ್ಟಿಸಲು ಸ್ಪಧಾ ಂಕ್ಷಿಗಳು ಶಾಸಕರು, ಸಚಿವರ ಮನೆಯ ಹೊಸ್ತಿಲು ತುಣಿಯುತ್ತಿದ್ದಾರೆ. ಸ್ಥಳೀಯ ವಿಷಯಗಳನ್ನೇ ಆಧರಿಸಿ ಚುನಾವಣೆ ನಡೆಯುವುದರಿಂದ ಎಲ್ಲ ಶಾಸಕರಿಗೂ ಗೆಲ್ಲುವವರನ್ನೇ ಆಯ್ಕೆ ಮಾಡುವುದು ಕಷ್ಟವಾಗಿದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಚ್ಚರ ತಪ್ಪಿದರೆ ಅದು ವಿಧಾನಸಭೆ ಚುನಾವಣೆ ವೇಳೆ ನೇರ ಪರಿಣಾಮ ಬೀರುವುದರಿಂದ ಗ್ರಾಮ ಪಂಚಾಯತಿ ಸದಸ್ಯರನ್ನು ಗೆಲ್ಲಿಸಿಕೊಳ್ಳುವ ಸವಾಲು ಈಗ ಎಲ್ಲ ಶಾಸಕರು, ಮಾಜಿ ಶಾಸಕರ ಮುಂದೆ ಇದೆ.
ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪಣತಪಟ್ಟಿದೆ. ಶಿರಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಬೀಗುತ್ತಿರುವ ಬಿಜೆಪಿಯನ್ನು ಕಟ್ಟಿ ಹಾಕಲು ಜೆಡಿಎಸ್, ಕಾಂಗ್ರೆಸ್ ಹೇಗೆ ಕೆಲಸ ಮಾಡಲಿವೆ ಎಂಬ ಕುತೂಹಲ ಗರಿಗದೆರಿದೆ.