Tumkuru; ತುಮಕೂರು ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ ಏಳು ಜನರಿಗೆ ಕೊರೊನಾ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಸೋಂಕು ತಗ್ಗುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿತ್ತು. ಏಕಾಏಕಿ ಏಳು ಜನರಿಗೆ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.
ಇವರಲ್ಲಿ ಒಂದೇ ಕುಟುಂಬದ ಆರು ಜನರು ಸೋಂಕು ಪೀಡಿತರಾಗಿದ್ದಾರೆ.ಇವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ.
ಇವರೆಲ್ಲರು ಶಿರಾ ನಗರದವರು. ಲಾಕ್ ಡೌನ್ ಗೂ ಮುಂಚೆ ಕುಟುಂಬ ಸದಸ್ಯರು ಆಂಧ್ರ ಪ್ರದೇಶದ ಹಿಂದೂ ಪುರಕ್ಕೆ ತೆರಳಿದ್ದರು. ಇದೇ 2 ತಾರೀಖು ಶಿರಾಗೆ ವಾಪಸ್ ಆಗಿದ್ದರು.
ಜ್ವರ ಬಂದಿದ್ದ ಕಾರಣ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಇನ್ನೊಬ್ಬ ವ್ಯಕ್ತಿ ಮಧುಗಿರಿಯವರಾಗಿದ್ದು, ಇವರಿಗೆ ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲ.