Publicstory. in
ತುರುವೇಕೆರೆ: ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ 61 ನೇ ಹುಟ್ಟುಹಬ್ಬವನ್ನು ಜೆ.ಡಿ.ಎಸ್ ಕಾರ್ಯಕರ್ತರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಆಚರಿಸಲಾಯಿತು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ತಾಲ್ಲೂಕಿನ ಬಹುತೇಕ ಜೆ.ಡಿ.ಎಸ್ ಮುಖಂಡರುಗಳು, ಚುನಾಯಿತ ಪ್ರತಿನಿಧಿಗಳು ಸಮಾವೇಶಗೊಂಡು, ಕುಮಾರಸ್ವಾಮಿಯವರ ಹುಟ್ಟುಹಬ್ಬದ ಅಂಗವಾಗಿ ದೀಪ ಬೆಳಗಿಸಿ, ಕೇಕ್ ಕತ್ತರಿಸಿ ಸಿಹಿ ಹಂಚಿ ಶುಭ ಹಾರೈಸಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕೆಯವರು ಜನಸಾಮಾನ್ಯರಿಗೆ ಹತ್ತಿರವಾದ ಆಡಳಿತ ನೀಡುವ ಮೂಲಕ ಇಡೀ ರಾಜ್ಯದ ಜನಮನದಲ್ಲಿ ಪ್ರೀತಿಯ ಕುಮಾರಣ್ಣನೆನಿಸಿದ್ದಾರೆ ಎಂದರು.
ಲಾಟರಿ, ಸಾರಾಯಿ ನಿಷೇದ, ರೈತರ ಸಾಲಮನ್ನಾ, ಹಲವು ಕೃಷಿಪರವಾದ ಯೋಜನೆಗಳ ಅನುಷ್ಟಾನ, ಗ್ರಾಮವಾಸ್ತವ್ಯದೊಂದಿಗೆ ಹಳ್ಳಿಗರಲ್ಲಿ ಬೆರೆತು, ಸಾಮಾನ್ಯರ ದುಗುಡ ದುಮ್ಮಾನಗಳಿಗೆ ತುರ್ತು ಪರಿಹರಿಸುವ ಮೂಲಕ ಅಪರೂಪದ ಮುಖ್ಯಮಂತ್ರಿ ಎನಿಸಿದ್ದರು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಜೆ.ಡಿ.ಎಸ್. ಪ್ರಧಾನಕಾರ್ಯದರ್ಶಿ ದೊಡ್ಡಾಘಟ್ಟಚಂದ್ರೇಶ್, ಎ.ಪಿ.ಎಂ.ಸಿ ಅಧ್ಯಕ್ಷ ಮಧುಸೂಧನ್, ಸದಸ್ಯರುಗಳಾದ ವಿಜಯೇಂದ್ರ, ಹಿಂಡಮಾರನಹಳ್ಳಿನಾಗರಾಜ್, ನರಸಿಂಹರಾಜು, ಪ.ಪಂ. ಸದಸ್ಯರುಗಳಾದ ಎನ್.ಆರ್.ಸುರೇಶ್, ಮಧು, ಮುಖಂಡರುಗಳಾದ ಮುಂಗಿಕುಪ್ಪೆ ಬಸವರಾಜ್, ಸೋಮೇನಹಳ್ಳಿಶಿವಾನಂದ್, ಶಿವರಾಮ್, ರಂಗನಾಥ್, ಚೇತನ್ ಮತ್ತಿತರಿದ್ದರು.