Friday, September 13, 2024
Google search engine
Homeತುಮಕೂರು ಲೈವ್ತುರುವೇಕೆರೆ ಪ್ರಸಾದ್, ಭವಾನಿಗೌಡ ಸೇರಿ ಏಳು ಮಂದಿಗೆ ಸಾಹಿತ್ಯ ಪ್ರಶಸ್ತಿ ಪುರಸ್ಕಾರ

ತುರುವೇಕೆರೆ ಪ್ರಸಾದ್, ಭವಾನಿಗೌಡ ಸೇರಿ ಏಳು ಮಂದಿಗೆ ಸಾಹಿತ್ಯ ಪ್ರಶಸ್ತಿ ಪುರಸ್ಕಾರ

Publicstory. in


ತುರುವೇಕೆರೆ: ಭಾಷೆ ಮತ್ತು ಸಾಹಿತ್ಯ ನಮ್ಮನ್ನು ಸಂಸ್ಕಾರಗೊಳಿಸುತ್ತದೆ. ಇಂತಹ ವಿಷಯಗಳಲ್ಲಿ ರಾಜಕಾರಣಿಗಳಂತೆ ಬೆಂಕಿ ಹಚ್ಚುವ ಕೆಲಸ ಮಾಡದೆ ಸಾಹಿತಿಗಳು ದೀಪ ಹಚ್ಚುವ ಕೆಲಸ ಮಾಡಬೇಕು ಎಂದು ಖ್ಯಾತ ಸಾಹಿತಿ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಸಲಹೆ ನೀಡಿದರು.

ಪಟ್ಟಣದ ರೋಟರಿ ಭವನದಲ್ಲಿ ಕೇಂದ್ರ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕನ್ನಡ ಅಭಿವೃದ್ಧಿಯ ಮಾತನಾಡುವ ಸರ್ಕಾರಗಳು ಹಿಂದಿನಿಂದ ಕನ್ನಡದ ಕತ್ತು ಹಿಸುಕುವ ಕೆಲಸ ಮಾಡುತ್ತಿವೆ. ಮಹಾರಾಜರು ನಡೆಸಿಕೊಂಡು ಬರುತ್ತಿದ್ದ ಕನ್ನಡ ಪಂಡಿತ ಪರಿಷತ್ತನ್ನು ಸರ್ಕಾರಗಳು ಮುಚ್ಚಿದವು. ಆಗಲೂ ಕನ್ನಡ ಸಾಹಿತ್ಯ ಪರಿಷತ್ತಾಗಲೀ, ರಾಜಕಾರಣಿಗಳಾಗಲೀ, ಕನ್ನಡ ಪರ ಸಂಘಟನೆಗಳಾಗಲೀ ಪ್ರತಿಭಟಿಸಲಿಲ್ಲ, ರಾಜ್ಯಾದ್ಯಂತ ಸುಮಾರು 20 ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ಮುಚ್ಚಿದಾಗಲೂ ಕನ್ನಡಿಗರ ಸ್ವಾಭಿಮಾನ ಜಾಗೃತವಾಗಲಿಲ್ಲ ಎಂದು ವಿಷಾಧಿಸಿದ ಅವರು ಈಗಲಾದರೂ ನಾವು ಎಚ್ಚೆತ್ತು ಕನ್ನಡತನವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.

ಕೇಂದ್ರ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಕೊಟ್ರೇಶ್. ಎಸ್. ಉಪ್ಪಾರ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಕೇವಲ ಬರೆಯುವವರಿಂದಷ್ಟೇ ಕನ್ನಡದ ಕೆಲಸ ಸಾಧ್ಯವಿಲ್ಲ, ಸಂಘಟಕರು ಸಹ ಕನ್ನಡ ಪೋಷಣೆಯಲ್ಲಿ ಸಮಾನ ಪಾತ್ರ ವಹಿಸುತ್ತಾರೆ. ಇಂದಿನ ಕನ್ನಡ ಕಾರ್ಯಕ್ರಮಗಳು ಸರ್ಕಾರದ ಅನುದಾನವನ್ನೇ ನೆಚ್ಚಿವೆ. ಹಾಗಾಗಿ ಲಕ್ಷಾಂತರ ರೂಪಾಯಿಗಳು ಸಾಹಿತ್ಯದ ಹೆಸರಲ್ಲಿ ದುಂದುವೆಚ್ಚವಾಗುತ್ತಿದೆ. ಅಂತಹುದೇ ಮೌಲಿಕ ಕಾರ್ಯಕ್ರಮಗಳನ್ನು ಸಾಹಿತ್ಯ ವೇದಿಕೆ ಅಲ್ಪ ಖರ್ಚಿನಲ್ಲಿ ಮಾಡಿ ಅಜ್ಞಾತ ಪ್ರತಿಭಾವಂತರನ್ನು ಸಾಹಿತ್ಯದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದೆ ಎಂದರು.

ಸಮಾರಂಭದಲ್ಲಿ ಬರಹಗಾರ ತುರುವೇಕೆರೆ ಪ್ರಸಾದ್, ಶಿವಮೊಗ್ಗದ ಕುಮುದ.ಬಿ.ಸುಶೀಲಪ್ಪ ( ಸಾ.ಶಿ. ಮರುಳಯ್ಯ ಸಾಹಿತ್ಯ ಪ್ರಶಸ್ತಿ), ಹಾಸನದ ಗಂಗಮ್ಮ ನಂಜುಂಡಪ್ಪ, ಬಳ್ಳಾರಿಯ ಶಫೀಉಲ್ಲಾ ಎಸ್.ಎಚ್( ಬಿ.ಎಂ.ಶ್ರೀ ಪ್ರಶಸ್ತಿ), ಉಡುಪಿಯ ವಾಸಂತಿ ಅಂಬಲಪಾಡಿ, ಬೆಂಗಳೂರಿನ ಡಾ.ಆರ್.ಶೈಲಜಾ ಶರ್ಮಾ( ಡಾ.ದೊಡ್ಡರಂಗೇಗೌಡ ಪ್ರಶಸ್ತಿ), ಚಿತ್ರದುರ್ಗದ ಡಿ.ಶಬ್ರಿನಾ ಮಹಮದ್ ಆಲಿ, ವಿಜಯಪುರದ ಭವಾನಿಗೌಡ ( ಡಾ.ಕವಿತಾಕೃಷ್ಣ ಕಾವ್ಯ ಪುರಸ್ಕಾರ) ಇವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕೇಂದ್ರ ಕ.ಸಾ.ವೇ ಜಿಲ್ಲಾಧ್ಯಕ್ಷ ಜಿ.ಸಿ.ಪ್ರಮೋದ್ ಪದಗ್ರಹಣ ವಿಧಿ ನೆರವೇರಿಸಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷೆ ಎಂ.ಕೆ. ಲತಾಮಣಿ ಅವರಿಗೆ ಶುಭ ಕೋರಿದರು.

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬದರಿಕಾಶ್ರಮದ ಸಂಸ್ಥಾಪಕರಾದ ಶ್ರೀ ಸ್ವಾಮಿ ಓಂಕಾರಾನಂದ ಮಹಾರಾಜ್ ಆಶೀರ್ವಚನ ನೀಡಿದರು. ತಾಲ್ಲೂಕ ಘಟಕದ ಗೌರವಾಧ್ಯಕ್ಷ ಎಂ.ಶ್ರೀನಿವಾಸ್ ಹೊಣಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ಸಹಾಯಕಿ ಡಾ.ಎಚ್.ಕೆ. ಹಸೀನಾ, ರಾಜ್ಯ ಸಂಚಾಲಕ ಹೊಸಮನೆ ಗಿರೀಶ್ ಬಾಬು, ಗೌರವ ಸಲಹೆಗಾರ ಸಾ.ಶಿ.ದೇವರಾಜ್, ಎಚ್.ಎಸ್.ಬಸವರಾಜ್, ನಾಗರಾಜ್ ದೊಡ್ಡಮನಿ,ಸಿ.ಜಿ.ವೆಂಕಟೇಶ್ವರ್ ಇತರರು ಉಪಸ್ಥಿತರಿದ್ದರು. ಟಿ.ಸುಷ್ಮಾ ಪ್ರಾರ್ಥಿಸಿದರು. ಟಿ. ಎನ್. ಅನುಪಮಾ ಸ್ವಾಗತಿಸಿದರು, ಟಿ.ಎಲ್.ಸೌಮ್ಯ ವಂದಿಸಿದರು. ಇಬ್ರಾಹಿಂ ಪಾಷಾ ನಿರೂಪಿಸಿದರು. ಸಮಾರಂಭದ ನಂತರ ಕವಿಗೋಷ್ಠಿ ಏರ್ಪಡಿಸಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?