Publicstory
ತುರುವೇಕೆರೆ: ಹೊಲದಲ್ಲಿ ನೆಟ್ಟ ತೆಂಗಿನ ಸಸಿಗಳನ್ನು ಕಿತ್ತು ಅದನ್ನು ಪ್ರತಿರೋಧಿಸಿದ ಗ್ರಾಮದ ಮಹಿಳೆಯರ ಮೇಲೆ ಪೊಲೀಸರು ಲಾಠಿ ಏಟಿನ ದೌರ್ಜನ್ಯ ನಡೆಸುವಾಗ ಗುಡ್ಡೇನಹಳ್ಳ ಗ್ರಾಮಸ್ಥರ ಪರವಾಗಿ ನಿಂತ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರು ನಾಳೆ ತುರುವೇಕೆರೆಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಇಡೀ ಗ್ರಾಮಸ್ಥರೇ ಭಾಗವಹಿಸುವುದಾಗಿ ಗುಡ್ಡೇನಹಳ್ಳಿ ಗ್ರಾಮದ ಮಹಿಳೆಯರು ಒಕ್ಕೊರಲಿನಿಂದ ಹೇಳಿದರು.
ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ,
ಪೊಲೀಸರು ತೆಂಗಿನ ಸಸಿ ಕೀಳಿಸಿ ರೈತರನ್ನು ಒಕ್ಕಲೆಬ್ಬಿಸಲು ಮುಂದಾದಾಗ ಮಹಿಳೆಯರೆಲ್ಲ ತಡೆದು ಪ್ರಶ್ನಿಸಿದೆವು. ಆಗ ಮಹಿಳಾ ಪೊಲೀಸ್ ಸಿಬ್ಬಂದಿ ಇಲ್ಲದೆ ನಮ್ಮಗಳನ್ನು ಹೊಡೆದು, ಎಳೆದಾಡಿದರು. ಈ ವೇಳೆ ಎಂ.ಟಿ.ಕೃಷ್ಣಪ್ಪರು ಮಧ್ಯ ಪ್ರವೇಶಿಸದಿದ್ದರೆ ನಮ್ಮಗತಿ ಏನಾಗುತ್ತಿತ್ತು ಎಂದು ಗದ್ಗದಿತರಾದರು.
ಎಂ.ಟಿ.ಕೃಷ್ಣಪ್ಪರು ನಮಗೆ ನ್ಯಾಯ ಕೊಡಿಸಲು ಹಾಗು ಪೊಲೀಸರ ದಬ್ಬಾಳಿಕೆಯನ್ನು ಪ್ರಶ್ನಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ನಾವೆಲ್ಲ ಬದ್ಧವಾಗಿದ್ದು ಜೈಲಿಗೆ ಹೋದರೂ ಪರವಾಗಿಲ್ಲ ನಾವೆಲ್ಲ ಎಂ.ಟಿ.ಕೆ ಪ್ರತಿಭಟನೆಗೆ ಸಾಥ್ ನೀಡುತೇವೆ ಎಂದರು.
144 ಸೆಕ್ಷನ್ ನಿಷೇದಾಜ್ಞೆ ಇದೆ ಎಂದ ಮಾತ್ರಕ್ಕೆ ನಮ್ಮ ಹಕ್ಕು ಕೇಳಬಾರದೆ, ಪೊಲೀಸರ ದೌರ್ಜನ್ಯ ಖಂಡಿಸಿಬಾರದೇ ಎಂದು ಮರು ಪ್ರಶ್ನಿಸಿದರು.
ಮುಖಂಡ ಬಸವರಾಜು ಮಾತನಾಡಿ, ಇಲ್ಲಿನ ಆರ್ ಐ, ಕಂದಾಯ ತನಿಖಾಧಿಕಾರಿಯೆ ಈ ಪ್ರಕರಣಕ್ಕೆ ನೇರ ಹೊಣೆ. ಗುಡ್ಡೇನಹಳ್ಳಿ ಪ್ರಕರಣದಲ್ಲಿ ಎಂ.ಟಿ.ಕೃಷ್ಣಪ್ಪರ ಪಾತ್ರವೇನಿಲ್ಲ. ಇಡೀ ಗ್ರಾಮಸ್ಥರೆಲ್ಲ ಸಾಗುವಳಿ ಭೂಮಿಯ ಬಗ್ಗೆ ಆದ ಅನ್ಯಾಯದ ಬಗ್ಗೆ ನ್ಯಾಯಕೊಡಿಸಿ ಎಂದು ಎಂ.ಟಿ.ಕೃಷ್ಣಪ್ಪರ ಬಳಿ ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಅವರು ಪ್ರತಿಭಟನೆ ಹಮ್ಮಿಕೊಂಡಿದ್ದಾರಷ್ಟೇ ಎಂದು ತಿಳಿಸಿದರು.
‘ಒಂದು ವೇಳೆ ಹಾಲಿ ಶಾಸಕರು ತಹಶೀಲ್ದಾರ್, ಕಂದಾಯಧಿಕಾರಿಗಳು, ಅರಣ್ಯಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಅಗತ್ಯ ದಾಖಲೆಗಳನ್ನು ಕೂಲಂಕಶವಾಗಿ ಪರಿಶೀಲಿಸಿ ಅವರು ನನಗೆ ಮನವಿ ನೀಡಿದ್ದಾರೆ ಊರಿನವರೆಲ್ಲ ಸಮನಾಗಿ ಭೂಮಿ ಹಂಚಿಕೊಳ್ಳುತ್ತಿದ್ದಾರೆ. ನೀವು ಅವರಿಗೆ ತೊಂದರೆ ಕೊಡಬೇಡಿ ಎಂದು ಅಧಿಕಾರಿಗಳಿಗೆ ಹೇಳಿದ್ದರೆ ಇಂದು ಪ್ರತಿಭಟನೆ ನಡೆಯುತ್ತಿರಲಿಲ್ಲ. ಹಾಗು ತಾಲ್ಲೂಕಿಗೆ 144 ಸೆಕ್ಷನ್ ಜಾರಿಯಾಗುತ್ತಿರಲೂ ಇಲ್ಲ ಎಂದರು.
‘ಗುಡ್ಡೇನಹಳ್ಳಿ ಪ್ರಕರಣ ಬಿಟ್ಟು ಎಂ.ಟಿ.ಕೆ ತಮ್ಮ ರಾಜಕೀಯ ಅಸ್ಥಿತ್ವಕ್ಕಾಗಿ ಇಲ್ಲಿನ ರೈತರನ್ನು ಬಳಸಿಕೊಳ್ಳುತ್ತಿದ್ದಾರೆಂಬ ಆರೋಪ ಸತ್ಯಕ್ಕೆ ದೂರವಾದದು’. ಏನೇ ಎಡರುಗಳೂ ಬಂದರೂ ಗ್ರಾಮಸ್ಥರೆಲ್ಲೂ ಒಗ್ಗಟ್ಟಿನಿಂದ ಪಟ್ಟಣದಲ್ಲಿ ನಡೆಯುವ ಪ್ರತಿಭಟನೆಗೆ ಭಾಗವಹಿಸುವುದು ಖಚಿತ ಎಂದು ಸ್ಪಷ್ಟಪಡಿದರು.
ಗ್ರಾಮದ ಯುವಕ ಗಂಗಾಧರ್ ಮಾತನಾಡಿ, ಭೂ ಸಂಬಂಧವಾಗಿ ಪೊಲೀಸರಿಂದ, ಅಧಿಕಾರಿಗಳಿಂದ ಗುಡ್ಡೇನಹಳ್ಳಿ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ಶಾಸಕ ಮಸಾಲಜಯರಾಂರಿಂದ ಒಂದೂ ಸಕರಾತ್ಮಕ ಹೇಳಿಕೆಗಳಿಲ್ಲ. ಅವರಿಂದಲೇ ನಮಗೆ ಅನ್ಯಾಯವಾಗಿದೆಂದು ದೂರಿದರು.
ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರಾದ ಚಿಂತಾಮಣಿ, ರಾಜಮ್ಮ, ಚಂದ್ರಮ್ಮ, ಗೀತ, ಮಲ್ಲಪ್ಪ. ಮುಕುಂದ, ಕೆಂಚಯ್ಯ, ರಮೇಶ್, ಹರೀಶ್ ಇದ್ದರು.