ತುಮಕೂರು ಲೈವ್

ತೊಂಡಗೆರೆಯ ತಬರನ ಮನೆಯಲ್ಲಿ ಸಂಭ್ರಮದ ನಗೆ…

ಕುಟುಂಬಕ್ಕೆ ನೆರವಾದ ಬೆಳಗುಂಬ ವೆಂಕಟೇಶ್ ಹಾಗೂ ಅವರ ಸಂಗಡಿಗರು

Publicstory.in


Tumkuru: ತುಮಕೂರು ತಾಲ್ಲೂಕಿನ ತೊಂಡಗೆರೆಯ ತಬರನ ಮನೆಯಲ್ಲಿ ಮಂಗಳವಾರ ಸಂಭ್ರಮದ ನಗೆ ಕಾಣಿಸಿತು.

ಈತನ ಹೆಸರು ತಬರ ಅಲ್ಲ. ನಿಜನಾಮ ನರಸಿಂಹಮೂರ್ತಿ. ಹೆಂಡತಿ, ಇಬ್ಬರು ಓದುವ ಮಕ್ಕಳೊಂದಿಗೆ ಈ ಗ್ರಾಮದಲ್ಲಿ ಇಪ್ಪತ್ತು ವರ್ಷಗಳಿಂದ ಮೂರು ನಾಲ್ಕು ಗರಿಗಳನ್ನು ಹಾಕಿಕೊಂಡು ಹರಿದ ಗುಡಿಸಲಿನಲ್ಲಿ ವಾಸವಿದ್ದಾನೆ.

ಮರದ ದಿಮ್ಮಿ ಹೊರುವ ಈತ ಕಳೆದ ಇಪ್ಪತ್ತು ವರ್ಷಗಳಿಂದಲೂ ಒಂದು ಮನೆಗಾಗಿ ಗ್ರಾಮ ಪಂಚಾಯತಿ ಕಂಬಗಳನ್ನು ಅಲೆದು ಅಲೆದು ಸುಸ್ತಾಗಿದ್ದಾನೆ. ಹೀಗಾಗಿ ಈ ನರಸಿಂಹಮೂರ್ತಿಯನ್ನು ಪಬ್ಲಿಕ್ ಸ್ಟೋರಿ.ಇನ್ ತಬರ ಎಂದು ಕರೆದಿದೆ.

ಈತನ ಕಷ್ಟವನ್ನು ಮೊದಲಿಗೆ ಬೆಳಕಿಗೆ ತಂದವರು ಜೆಡಿಎಸ್ ಮುಖಂಡರಾದ ಬೆಳಗುಂಬ ವೆಂಕಟೇಶ್. ಈತನಿಗೊಂದು ಸೂರು ಕಲ್ಪಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ‌.

ಇದರ ನಡುವೆಯೇ ಕರೊನಾ , ಲಾಕ್ ಡೌನ್ ಆಯಿತು. ಈ ಕುಟುಂಬಕ್ಕೆ ಊಟ ಇಲ್ಲ ಎಂಬುದು ಬೆಳಗುಂಬ ವೆಂಕಟೇಶ್ ಅವರ ಗಮನಕ್ಕೆ ಬರುತ್ತಿದ್ದಂತೆ ಮಂಗಳವಾರ ನೆರವಿನ ಆಸರೆ ಇತ್ತರು.

ಕುಟುಂಬದ ಕಷ್ಟ ಗೊತ್ತಾಗುತ್ತಿದ್ದಂತೆ ನನ್ನದೇ ಬೈಕ್ ನಲ್ಲಿ 50 kg ಅಕ್ಕಿ, ಎಣ್ಣೆ, ಬೇಳೆ, ಸಾಬೂನು, ಮಾಸ್ಕ್ ಸೇರಿದಂತೆ ಒಂದೆರಡು ತಿ‌ಂಗಳಿಗೆ ಆಗುವಷ್ಟು ಸಾಮಾಗ್ರಿ ಕೊಟ್ಟಿದ್ದೇನೆ ಎಂದು ವೆಂಕಟೇಶ್ ಹೇಳಿದರು.

ಈ ಕುಟುಂಬಕ್ಕೆ ಮನೆ ಕಟ್ಟಿಕೊಡುವ ಭರವಸೆಯನ್ನು ಅಧಿಕಾರಿಯೊಬ್ಬರು ನೀಡಿದ್ದಾರೆ. ಕರೊನಾ ಉಪಟಳ ಮುಗಿಯುತ್ತಿದ್ದಂತೆ ಈ ಕೆಲಸಕ್ಕೆ ಚಾಲನೆ ನೀಡಲಾಗುವುದು. ಆತನ ಇಬ್ಬರ ಮಕ್ಕಳ ಓದಿಗೆ ಪ್ರೋತ್ಸಾಹ, ನೆರವು ನೀಡಲಾಗುವುದು ಎಂದು ಅವರು ತಿಳಿಸಿದರು.

ದೂರವಾಣಿ ಮೂಲಕ ಮಾತನಾಡಿದ ಶಾಸಕ ಬಿ.ಸಿ.ಗೌರಿಶಂಕರ್ ಅವರು, ಸ್ಥಳಕ್ಕೆ ಭೇಟಿ ನೀಡುತ್ತೇನೆ. ಕುಟುಂಬಕ್ಕೆ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದರು.

ಕುಟುಂಬಕ್ಕೆ ನೆರವು ನೀಡುವಾಗ ವೆಂಕಟೇಶ್ ಜತೆ ಪ್ರಸಾದ್ ಬೆಳಗೆರೆ, ರಾಜಣ್ಣ ನಿಡುವಳಲು, ಶ್ರೀನಿವಾಸ್ ದಾದಾಪೀರ್ , ರವಿ ತೊಂಡಗೆರೆ ಇದ್ದರು‌.

Comment here