ತುಮಕೂರು ಲೈವ್

ನಾಟಕ: ಝೆನ್ ಟೀಂಗೆ ಪ್ರಶಂಸೆ

Tumkur: ತುಮಕೂರಿನಲ್ಲಿ ಸದಭಿರುಚಿ ನಾಟಕಗಳು ಪ್ರದರ್ಶನಗೊಳ್ಳುತ್ತಿದೆ ಎಂದು ಖ್ಯಾತ ಕಿರುತೆರೆ ನಟ ಹನುಮಂತಗೌಡ ಪ್ರಶಂಸಿಸಿದರು.
ಅವರು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಝೆನ್ ಟೀಮ್ ಆಯೋಜಿಸಿದ್ದ `ಅಂತರಂಗ’ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಳೆದ ಹಲವಾರು ವರ್ಷಗಳಿಂದ ತುಮಕೂರಿನಲ್ಲಿ ನಾಟಕಗಳ ಮೂಲಕ ಸಾಂಸ್ಕøತಿಕ ವಾತಾವರಣ ನಿರ್ಮಾಣವಾಗುತ್ತಿದೆ ಇದು ಶ್ಲಾಘನೀಯ ಎಂದರು.

ಕೇರಳದ ವೆಂಕಟೇಶ್ವರನ್ ಅವರು ಪ್ರತಿಭಾನ್ವಿತ ನಿರ್ದೇಶಕ ಎಂದ ಬಣ್ಣಿಸಿದ ಅವರು ಸಂಕೇತವಾದಿ ನಾಟಕಗಳ ಮೂಲಕ ಗಮನಸೆಳೆಯುತ್ತಿರುವ ನಿರ್ದೇಶಕ ಎಂದರು.

ಪ್ರತಿ ಸಂಜೆ ತುಮಕೂರು ನಾಟಕ ಮತ್ತಿತರೆ ಸಾಂಸ್ಕತಿಕ ಕಾರ್ಯಕ್ರಮಗಳಿಂದ ಸದಾ ಚಲನಶೀಲವಾಗುತ್ತಿದ್ದು ಇದು ಶ್ಲಾಘನೀಯ ಎಂದರು. ತುಮಕೂರಿನಲ್ಲಿ ಹೊಸ ಅಲೆಯ ನಾಟಕಗಳು ಆಯೋಜನೆಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆರ್.ವಿ ಪುಟ್ಟಕಾಮಣ್ಣ ಅವರು ನಾಟಕಗಳು ಜೀವಂತಿಕೆಯ ಸಂಗೀತ. ಎಲ್ಲಾ ಕಲೆಗಳಿಗೂ ರಂಗಭೂಮಿ ಸೇತುವೆ ಎಂದರು.

ಪ್ರಾಸ್ತಾವಿಕವಾಗಿ ಝೆನ್ ಟೀಮ್‍ನ ಉಗಮ ಶ್ರೀನಿವಾಸ್ ಮಾತನಾಡಿದರು. ರವಿ ನಿರೂಪಿಸಿದರು. ಬಳಿಕ ಅಂತರಂಗ ನಾಟಕ ಪ್ರದರ್ಶನಗೊಂಡಿತು.

Comment here