ತುಮಕೂರು ಲೈವ್

ಪಾಲಿಕೆ ವಿರುದ್ಧ ಮುಗಿಬಿದ್ದ ಸೊಗಡು ಶಿವಣ್ಣ

Tumkuru: ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು ಅವರನ್ನು ಆಯುಕ್ತರು ನಿಯಂತ್ರಿಸುತ್ತಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.

ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವು ಆರ್.ಟಿ.ಐ ಕಾರ್ಯಕರ್ತರು ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.

ತುಮಕೂರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ವ್ಯಾಪಕ ಅವ್ಯವಹಾರವಾಗಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಸ್ಮಾರ್ಟ್ ಸಿಟಿಯಲ್ಲಿ 45 ಇಂಜಿನಿಯರ್ ಗಳು ಕೆಲಸ ನಿರ್ವಹಿಸುತ್ತಿದ್ದು ಎಲ್ಲರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.

ಹಿಂದಿನ ಅವಧಿಯ ಶಾಸಕರು 35 ಸಾವಿರ ಖಾತೆಗಳನ್ನು ಮಾಡಿಸಿದ್ದಾರೆ. ಅವರೆಲ್ಲರೂ ತಮ್ಮ ಹಿಂಬಾಲಕರೇ ಆಗಿದ್ದಾರೆ. ಬಸವೇಶ್ವರ ರಸ್ತೆಯಲ್ಲಿರುವ ಹೋಟೆಲ್ ಮಾಲಿಕರು ತೆರಿಗೆ ಕಟ್ಟಿಲ್ಲ. ಅದರ ಬಗ್ಗೆಯೂ ಗಮನಹರಿಸಬೇಕು ಎಂದು ವಿವರಿಸಿದರು.

ನೀರು ಪೂರೈಕೆ ವಿಭಾಗದಲ್ಲಿ 9 ಮಂದಿ, ಪಿಡಬ್ಲ್ಯೂಡಿ ವಿಭಾಗದಲ್ಲಿ 8 ಸೇರಿದಂತೆ 45 ಎಂಜಿನಿಯರ್ ಗಳು ತುಮಕೂರು ನಗರದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಟೀಕಿಸಿದರು.

ತುರ್ತುಪರಿಸ್ಥಿತಿ ಮತ್ತು ಜೆಪಿ ಚಳವಳಿ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿ ಹೋಗಿದ್ದರು. ಸಿದ್ದರಾಮಯ್ಯ ಅಂಡ್ ಕಂಪನಿ ದ್ರೋಶದ್ರೋಹಿಗಳು. ನಾವು ದೇಶಭಕ್ತರು ಎಂದು ಯತ್ನಾಳ್ ಹೇಳಿಕೆಯನ್ನು ಸಮರ್ಥಿಸಿಕೊಂಡರು.

Comment here