ತುಮಕೂರಿನಲ್ಲಿ ಸೋಮವಾರ ಎಸ್.ಎಸ್. ಸರ್ಕಲ್ ಅಂಬುಲೆನ್ಸ್ ವಾಹನ ಚಾಲಕರ, ಮಾಲೀಕರ ಸಂಘದಿಂದ ನಟ ಪುನಿತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಿವೃತ್ತ ಪ್ರಾಂಶುಪಾಲರಾದ ಸಿದ್ದಲಿಂಗಪ್ಪ, ಎಂ.ಹೆಚ್. ನಾಗರಾಜ್, ವಕೀಲರಾದ ಮಹೇಂದ್ರ ಕೃಷ್ಣಮೂರ್ತಿ, ಸಂಘದ ಪದಾಧಿಕಾರಿಗಳಾ ಸಂದೀಪ, ಮಂಜು, ವಿಶ್ವಾಸ್, ಇನ್ಫ್ಯಾಂಟ್ ಸಂದೀಪ್. Venktesh, ಸಂತೋಷ್ ಇತರರು ಇದ್ದಾರೆ.
ತುರುವೇಕೆರೆ: ಚಿತ್ರನಟ ಪುನಿತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ತಾಲ್ಲೂಕಿನ ಪುನಿತ್ ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಮಂಗಳವಾರ ಅನ್ನದಾನ ಮತ್ತು ನೇತ್ರದಾನ ಕಾರ್ಯಕ್ರವನ್ನು ಆಯೋಜಿಸಲಾಗಿದೆ ಎಂದು ಕಾಸ್ಮೋಪಾಲಿಟನ್ ಕ್ಲಬ್ ನ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಹಾಗೂ ಕಲಾವಿದ ವಿ.ಬಿ.ಸುರೇಶ್ ತಿಳಿಸಿದರು.
ಪಟ್ಟಣದ ಹೊರವಲಯದ ಕಾಸ್ಮೋಪಾಲಿಟನ್ ಕ್ಲಬ್ ನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,
ಕೊಡುಗೈ ದಾನಿಯಾಗಿದ್ದ ಪುನಿತ್ ಸಾವಿರಾರು ಮಕ್ಕಳ ವಿದ್ಯಾರ್ಜನೆಗೆ ಕಾರಣಕರ್ತರಾಗಿದ್ದರು. ಅನಾಥಾಶ್ರಮ, ವೃದ್ದಾಶ್ರಮದ ಬೆಳವಣಿಗೆಗೆ ಅವರು ಸಾಕ್ಷಿಯಾಗಿದ್ದರು. ಇಂತಹ ನಟನನ್ನು ಕಳೆದುಕೊಂಡ ರಾಜ್ಯದ ಕನ್ನಡ ಚಿತ್ರರಂಗ ಅನಾಥವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿ.ಬಿ.ಸುರೇಶ
ಪುನಿತ್ ಅವರ ಸ್ಮರಣಾರ್ಥ ಅವರ ಆತ್ಮಕ್ಕೆ ಶಾಂತಿ ದೊರಕಲೆಂದು ಹಾರೈಸಿ ತಾಲ್ಲೂಕಿನ ವಿವಿಧ ಸಂಘಟನೆಗಳು ಮಂಗಳವಾರ ಪಟ್ಟಣದ ರಂಗಮಂದಿರದ ಬಳಿ ಅನ್ನದಾನವನ್ನು ಏರ್ಪಡಿಸಲಾಗಿದೆ.
ಮಾಂಸಾಹಾರಿ ಮತ್ತು ಶಾಖಾಹಾರಿ ಊಟದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 11.30 ರಿಂದ ಸು. 15 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನದಾನವನ್ನು ಏರ್ಪಡಿಸಲಾಗಿದೆ.
ಪುನಿತ್ ಅವರ ಸ್ಮರಣಾರ್ಥ ನಡೆಯಲಿರುವ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ತಾಲ್ಲೂಕಿನ ಎಲ್ಲ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ತಾಲ್ಲೂಕಿನ ನೂರಾರು ಮಂದಿ ತಮ್ಮ ನೇತ್ರವನ್ನು ದಾನ ಮಾಡಲು ಮುಂದೆ ಬಂದಿದ್ದಾರೆ.
ಕಾಸ್ಮೋಪಾಲಿಟನ್ ಕ್ಲಬ್ ವತಿಯಿಂದ 46 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ನೀಡಲಾಗುತ್ತಿದೆ ಎಂದರು.
ಸಮಾರಂಭಕ್ಕೆ ಜ್ಯೂನಿಯರ್ ಪುನಿತ್ ರಾಜಕುಮಾರ್, ಜ್ಯೂನಿಯರ್ ರಾಜಕುಮಾರ್ ಮತ್ತು ಮಿಮಿಕ್ರಿ ಗೋಪಿ ಆಗಮಿಸಲಿದ್ದಾರೆ. ಅಂದು ಪುನಿತ್ ರಾಜ್ ಕುಮಾರ್ ರವರ ಹಲವಾರು ಚಲನ ಚಿತ್ರಗಳ ಹಾಡುಗಳನ್ನು ಕಲಾವಿದರು ಹಾಡಲಿದ್ದಾರೆ ಕಲಾವಿದ ವಿ.ಬಿ.ಸುರೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಈಡಿಗರ ಸಮಾಜದ ಅಧ್ಯಕ್ಷ ಎಸ್ ಎಲ್.ಎನ್.ರಾಜಣ್ಣ, ಉಮೇಶ್, ಗೋಪಾಲ್, ಶ್ರೀನಿವಾಸ್, ಮುಖಂಡರಾದ ಗುಡ್ಡೇನಹಳ್ಳಿ ಗಿರೀಶ್, ಅರಳೀಕೆರೆ ಲೋಕೇಶ್, ಹಾವಾಳ ಶಿವಕುಮಾರ್, ಹೊಸಹಳ್ಳಿ ದೇವರಾಜು, ಬಾವಿಕೆರೆ ಅಶೋಕ್, ಹುಲಿಕಲ್ ಶಂಕರೇಗೌಡ, ಶ್ರೀರಾಮ್ ಪುರ ಜನಾರ್ಧನ್ ಮೊದಲಾದವರು ಇದ್ದರು.