Monday, October 7, 2024
Google search engine
Homeತುಮಕೂರ್ ಲೈವ್ಪ್ರಥಮ ಅಖಿಲ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಯಾಗಿ ಕೊರಟಗೆರೆ ಪೋರಿ

ಪ್ರಥಮ ಅಖಿಲ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಯಾಗಿ ಕೊರಟಗೆರೆ ಪೋರಿ

ತುಮಕೂರು:
ಜಿಲ್ಲೆಯ ಕೊರಟಗೆರೆ ಪಟ್ಟಣದ ಕೀರ್ತನಾ ನಾಯಕ್ ಅವರು ಹಾಸನದಲ್ಲಿ ನ. 29 ಹಾಗೂ 30ರಂದು ಹಾಸನದಲ್ಲಿ ನಡೆಯಲಿರುವ ಪ್ರಥಮ ಅಖಿಲ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮೂಲತಃ ಕೊರಟಗೆರೆ ತಾಲ್ಲೂಕಿನ ಗಡಿಭಾಗದ ಬೊಮ್ಮಲದೇವಿಪುರ ಗ್ರಾಮದವರಾದ ವಿ.ಆರ್. ನರಸಿಂಹಮೂರ್ತಿ ಹಾಗೂ ಪಧ್ಮಾವತಮ್ಮ ಸದ್ಯ ಕೊರಟಗೆರೆ  ಪಟ್ಟಣದಲ್ಲಿ ವಾಸವಾಗಿದ್ದಾರೆ. ಅವರ ಮೊದಲನೇ ಮಗಳಾದ ಕೀರ್ತನಾ ನಾಯಕ್ ಮೇ. 30, 2002ರಲ್ಲಿ ಜನಿಸಿದರು. ಕೃಷಿಕ ತಂದೆತಾಯಿಯಾದರೂ ಕೀರ್ತನ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣವನ್ನು ಬೆಂಗಳೂರು 8ನೇ ಮೈಲಿಯಲ್ಲಿರುವ ಸೌಂದರ್ಯ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡಿಸಿದರು. ಪ್ರಾಥಮಿಕ ಹಂತದಿಂದ ಪ್ರೌಢಶಿಕ್ಷಣದವರೆಗೂ ಕೊರಟಗೆರೆಯಿಂದಲೇ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಪ್ರಾಯಣ ಮಾಡಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 98.08(613) ಅಂಕ ಪಡೆದು ಉತ್ತೀರ್ಣರಾದ ಕೀರ್ತನಾ ಸದ್ಯ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಐಐಟಿ ಬ್ಯಾಚಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ.
ಮೂರನೇ ತರಗತಿಯಲ್ಲಿ ಅನಾರೋಗ್ಯ ಕಾರಣದಿಂದಾಗಿ ಶಾಲೆಗೆ ಗೈರು ಹಾಜರಿಯಾದಾಗ ಶಾಲೆಯ ಶಿಕ್ಷಕರೊಬ್ಬರು ದಂಡಿಸಿದ ರೀತಿಯನ್ನು ತನಗನ್ನಿಸಿದ ಹಾಗೆ ಕಥೆ ಬರೆದು ತೋರಿಸಿದ ಸಂದರ್ಭದಲ್ಲಿ ಅದೇ ಶಿಕ್ಷಕರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಮೇಲೆ ಪ್ರೇರಣೆಗೊಂಡ ಕೀರ್ತ ಅಂದಿನಿಂದ ಭಾಷಣ, ನಿರೂಪಣೆ, ಚಿತ್ರಕಲೆ, ನಿರೂಪಣೆಯ ಗೀಳು ಹತ್ತಿಸಿಕೊಂಡರು.
ಕೃಷಿಯನ್ನೆ ಅವಲಂಭಿಸಿರುವ ಡಿಪ್ಲೋಮಾ ಓದಿರುವ ತಂದೆ, ಬಿಎ,ಬಿಇಡಿ ಮಾಡಿರುವ ತಾಯಿಯ ಪ್ರೇರಣೆಯಿಂದ ಚಿಕ್ಕಂದಿನಿಂದಲೇ ಪ್ರೇರಣೆಗೊಂಡ ಕೀರ್ತನಾ, ರಾಷ್ಟ್ರೀಯ ಹಬ್ಬ, ಧಾರ್ಮಿಕ ಜಯಂತೋತ್ಸವ, ರಾಜ್ಯೋತ್ಸವ ಹಬ್ಬ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಲ್ಲಿ 130ಕ್ಕೂ ಹೆಚ್ಚು ಬಾರಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದಾರೆ. ಖ್ಯಾತ ಹಾಗೂ ಪ್ರಮುಖ ಕಾರ್ಯಕ್ರಮಗಳ ವೇದಿಕೆಯಲ್ಲಿ 150ಕ್ಕೂ ಹೆಚ್ಚು ಬಾರಿ ಕಾರ್ಯಕ್ರಮ ನಿರೂಪಣೆಯನ್ನೂ ಮಾಡಿದ್ದಾರೆ.
ರಾಜ್ಯದ ಗುಲ್ಬರ್ಗಾ, ಸಿಂಧನೂರು ಸೇರಿದಂತೆ ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿನ ಪ್ರತಿಒಷ್ಟಿತ ಶಾಲಾ ಕಾಲೇಜುಗಳಲ್ಲಿ ಅನೇಕ ಬಾರಿ ಪ್ರೇರಣಾ ತರಗತಿಗಳನ್ನು ನೀಡಿ ಗಮನ ಸೆಳೆದಿದ್ದಾರೆ. ಭಕ್ತ ಮಾರ್ಕಂಡೇಯ, ಶಿವಭಕ್ತಕಣ್ಣಪ್ಪ ಹರಿಕಥೆಗಳನ್ನು ಈಗಾಗಲೇ ಸಾಕಷ್ಟು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಉತ್ತಮ ಯೋಗಪಟುವೂ ಆದ ಕೀರ್ತನ ರಾಜ್ಯ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ 2 ಭಾರಿ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಟ್ರಾಫಿಕ್ ಜಾಗೃತಿ ಬಗ್ಗೆ ಭಾಷಣ ಮಾಡಿದ ಹಿನನೆಯಲ್ಲಿ `ಬೆಂಗಳೂರು ಪೊಲೀಸ್ ಕಮಿಷನರ್’ ಅವಾರ್ಡ್ ನ್ನು ಕೂಡ ಪಡೆದಿದ್ದಾರೆ. 102ರಲ್ಲಿ ಯಲಹಂಕ ಬಳಿಯ ಜಿಕೆವಿಕೆ ಕಾಲೇಜಿನಲ್ಲಿ ಪ್ರಾಣಿಧಯೆ, ಹಾಗೂ ಪರಿಸರ ಸಂರ್ಕಣೆ ಬಗ್ಗೆ ಜಾಗೃತಿ ಬಗೆಗಿನ ವಿಚಾರಸಂಕೀರ್ಣದಲ್ಲಿ ಭಾಗವಹಿಸಿ ಅಲ್ಲಿಯೂ ಕೂಡ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
ಶಿಕ್ಷಣಕ್ಕೆ ಸಂಬಂಧಿಸಿದಂತೆ ಬೆಂಗಳೂರು 8ನೇ ಮೈಲಿಯಲ್ಲಿರುವ ಕೆನ್ನಮೆಟಲ್ ಕಂಪನಿಯವರು 2018ರಲ್ಲಿ ಶಿಕ್ಷಣ ಸಂಬಂಧಿತ ಸ್ಪರ್ಧೆಯಲ್ಲೂ ಪ್ರಥಮಸ್ಥಾನಗಳಿಸಿದರು.
2014ರಿಂದ 2018ರ ವರೆಗೆ ಇಸ್ಕಾನ್ ವತಿಯಿಂದ ನಡೆದ ಭಾಷಣ ಸ್ಪರ್ಧೆಗಳಲ್ಲಿ ನಿರಂತರವಾಗಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇದಲ್ಲದೇ ನೂರಾರು ಕಾರ್ಯಕ್ರಮಗಳನ್ನು ಅತಿ ಚಿಕ್ಕ ವಯಸ್ಸಿನಲ್ಲೇ ನಿರೂಪಣೆ ಮಾಡಿ ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
2017ರಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲೂ ಕಾರ್ಯಕ್ರಮದ ಇಡೀ ಕಾರ್ಯಕ್ರಮದ ನಿರೂಪಣೆ ಮಾಡಿ ಗಮನ ಸೆಳೆದಿದ್ದರು.
ಕೀರ್ತನಾ ಈಗಾಗಲೇ `ಅಕ್ಷರಗಳ ಕೊಯ್ಲು’, `ಇಳೆಯಂಗಳದಿ’ ಎಂಬ ಎರಡು ಕವನ ಸಂಕಲಗಳ ಪುಸ್ತಕಗಳನ್ನು ಬರೆದು ಬಿಡುಗಡೆಗೊಳಿಸಿದ್ದಾರೆ. ಅವರ ಮತ್ತೊಂದು ಕವನ ಸಂಕಲನ `ಕಾಲಬದಲಾಗುತ್ತದೆ’ ಎಂಬ ಬಿಡಿ ಲೇಖನ ಸಂಗ್ರಹ ಬಿಡುಗಡೆಗೆ ಸಿದ್ದಗೊಂಡಿದೆ. ಅತೀ ಚಿಕ್ಕವಯಸ್ಸಿನಲ್ಲೆ ಯೋಗ, ಚಿತ್ರಕಲೆ, ನಿರೂಪಣೆ, ಭಾಷಣ, ಹರಿಕಥಾ ಕೀರ್ತನೆಗಳನ್ನು ಹಾಡುವುದು ಸೇರಿದಂತೆ ಇತರೆ ಕಲೆಗಳನ್ನು ರೂಢಿಸಿಕೊಂಡಿರುವ ಕೀರ್ತನ ಈಗ ಹಾಸನ ಚಿಲ್ಲೆಯಲ್ಲಿ ನಡೆಲಿರುವ ಅಖಿಲ ಭಾರತ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕೊರಟಗೆರೆ ತಾಲ್ಲೂಕಿಗೆ ತಂದ ಕೀರ್ತಿಯಾಗಿದೆ.

ಚಿಕ್ಕಂದಿನಿಂದಲೂ ಹೊಸತನ್ನು ಹುಡುಕುವ ಅವಳ ಬೌಧಿಕತೆಗೆ ಪೂರಕವಾದನ್ನು ಒದಗಿಸಿದೆವು. ಅತಿ ಕಿರಿಯ ವಯಸ್ಸಿನಲ್ಲಿ ಸಮ್ಮೆಳನ ಅಧ್ಯೆಕ್ಷೆಯಾಗಿ ಆಯ್ಕೆಯಾಗಿರುವುದು ಖುಷಿ ತಂದಿದೆ ಎಂದು ಪೋಷಕರು ಸಂತಸ ವ್ಯಕ್ತ ಪಡಿಸುತ್ತಾರೆ.

ಹೆತ್ತವರೊಂದಿಗೆ ಕೀರ್ತನಾ ನಾಯಕ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?