ತುಮಕೂರು ಲೈವ್

ಬಯಲಾಟದ ಭೀಮಣ್ಣನಲ್ಲಿ ಪ್ರಭುತ್ವದ ವಿರೋಧಿ ದನಿಗಳೇ ಹೆಚ್ಚು: ಬರಗೂರು

Publicstory. in


Tumukuru: ಕಲಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಸರ್ಕಾರ ಮಿನಿ ಥಿಯೇಟರ್ ಗಳನ್ನು ನಿರ್ಮಾಣ ಮಾಡಬೇಕು ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದರು.

ತುಮಕೂರಿನ ಬಾಲಭವನದಲ್ಲಿ ಸಮುದಾಯದತ್ತ ಸಿನಿಮಾ-ಚಿತ್ರಯಾತ್ರೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕಲಾತ್ಮಕ ಚಿತ್ರಗಳನ್ನು ಜನರು ನೋಡಲು ಅನುಕೂಲವಾಗುವಂತೆ ಮಿನಿ ಚಿತ್ರಮಂದಿರಗಳನ್ನು ನಿರ್ಮಿಸಿದರೆ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.

ಪ್ರಸಕ್ತ ಸನ್ನಿವೇಶದಲ್ಲಿ ಕವಿ, ಕಲಾವಿದನೊಬ್ಬ ಮಾತನಾಡುವುದೇ ಕಷ್ಟವಾಗಿದೆ. ಮಾತನಾಡುವಾಗ ತುಂಬಾ ಯೋಚಿಸಬೇಕಾದಂತಹ ಪರಿಸ್ಥಿತಿ ಇದೆ. ತನ್ನ ಅಭಿಪ್ರಾಯಗಳನ್ನು ಹೇಳಿದ್ದಕ್ಕಾಗಿಯೇ ದೇಶದ್ರೋಹದ ಪ್ರಕರಣಗಳನ್ನು ಎದುರಿಸಬೇಕಾಗಿದೆ. ಅಂಥಾದ್ದರಲ್ಲಿ ಬಯಲಾಟದ ಭೀಮಣ್ಣ ಸಿನಿಮಾದಲ್ಲೂ ಕೂಡ ಪ್ರಭುತ್ವದ ದನಿ ಹೆಚ್ಚಾಗಿದೆ. ಪ್ರಭುತ್ವವನ್ನು ಪ್ರಶ್ನಿಸುವ ಪಾತ್ರಗಳಿವೆ ಎಂದು ತಿಳಿಸಿದರು.

ಏಕವ್ಯಕ್ತಿ ಸಿನಿಮಾಗಳನ್ನು ಮಾಡಿದ ಜಗತ್ತಿ ಮೂವರು ನಿರ್ದೇಶಕರ ಪೈಕಿ ನಾನು ಸೇರಿದ್ದೇನೆ. ಏಕವ್ಯಕ್ತಿಯನ್ನಿಟ್ಟುಕೊಂಡು ಸಿನಿಮಾ ಮಾಡುವುದು ಸವಾಲಿನ ಕೆಲಸ. ಆ ಸಿನೆಮಾಕ್ಕೂ ಪ್ರಶಸ್ತಿ ಲಭಿಸಿತು ಎಂದು ಹೇಳಿದರು.

ವಿಶ್ರಾಂತ ನ್ಯಾಯಾಧೀಶ ಎಚ್.ಎನ್.ನಾಗಮೋಹನ ದಾಸ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಕಲಾವಿದರಾದ ಸುಂದರರಾಜ್, ಪ್ರಮೀಳಾ ಜೋಷಾಯ್, ಮೊದಲಾದವರು ಉಪಸ್ಥಿತರಿದ್ದರು.

Comment here