ತುರುವೇಕೆರೆ : ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಬಸ್ ನಿಲ್ಲಾಣದಲ್ಲಿ ಭಾನುವಾರ ನೂತನ ಬಸ್ ಗಳನ್ನು ಶಾಸಕ ಮಸಾಲಜಯರಾಮ್ ತಾವೇ ಚಾಲನೆ ಮಾಡುವ ಮೂಲಕ ಸಾರ್ವಜನಿಕರ ಸೇವೆಗೆ ಅರ್ಪಿಸಿದರು.
ತುರುವೇಕೆರೆ ಕೆಎಸ್ಆರ್ಟಿಸಿ ಘಟಕಕ್ಕೆ ಎರಡು ನೂತನ ಬಸ್ ಮಂಜೂರಾಗಿದ್ದವು. ಇಂದು ಆ ಬಸ್ ಗಳನ್ನು ಡಿಪೋ ಸಿಬ್ಬಂದಿ ತಳಿರು ತೋರಣಗಳಿಂದ ಸಿಂಗರಿಸಿದ್ದರು. ಅದನ್ನು ಶಾಸಕರು ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ವೇಳೆ ಶಾಸಕ ಮಸಾಲಜಯರಾಮ್ ಅವರು ಪಕ್ಷದ ಕಾರ್ಯಕರ್ತರ ಒತ್ತಾಯದ ಮೇರೆಗೆ ನೂತನ ಬಸ್ ಏರಿ ತಾವೇ ಬಸ್ ಓಡಿಸುವ ಮೂಲಕ ಚಾಲನೆ ನೀಡಿದಾಗ ಅಲ್ಲಿ ನೆರೆದಿದ್ದ ಶಾಸಕರ ಬೆಂಬಲಿಗರು ಚಪ್ಪಾಳೆ ಹಾಕಿದರು.
ಎಪಿಎಂಸಿ ನಿರ್ದೇಶಕ ವಿ.ಟಿ.ವೆಂಕಟರಾಮ್, ಕಾಳಂಜಿಹಳ್ಳಿ ಸೋಮಣ್ಣ, ನಾಗಲಾಪುರಮಂಜಣ್ಣ, ತಿಮ್ಮೇಗೌಡ, ಡಿಪೋ ವ್ಯವಸ್ಥಾಪಕರು ಹಾಗು ಬಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಸರ್ಕಾರಿ ಬಸ್ ಓಡಿಸುವ ಮೂಲಕ ಶಾಸಕರು ನಿಯಮ ಉಲ್ಲಂಘಿಸಿದ್ದಾರೆ ಎಂಬ ಟೀಕೆಯು ವ್ಯಕ್ತವಾಗಿದೆ.