ಕುಣಿಗಲ್: ಇಲ್ಲಿ ರೈಲ್ವೆ ಹಳಿಗಳ ಮೇಲೆ ಹೋಗುತ್ತಿದ್ದ ಕುರಿಗಳನ್ನು ಪಾರು ಮಾಡಲು ಹೋದ ವ್ಯಕ್ತಿಯ ಮೇಲೆ
ಗೂಡ್ಸ್ ರೈಲು ಹರಿದು, ಆತನ ಸಮೇತ 13 ಕುರಿಗಳು ಸತ್ತಿವೆ.
ಪ್ರಕರಣ ದಾಖಲಾಗುವ ಭೀತಿಯಿಂದ ಬೆದರಿದವರು , ಕುರಿ ಕಾಯುತ್ತಿದ್ದವನ ಶವವನ್ನು
ಕ್ಷಣಾರ್ದದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಮೃತಪಟ್ಟವನು ನೇಪಾಳ ಮೂಲದ ಧನ್ ವೀರ್ (50) ಎಂದು ಹೇಳಲಾಗುತ್ತಿದೆ.ಕಳೆದ ಐದುವರ್ಷದಿಂದ ತನ್ನ
ಸಹೋದರನ ಮನೆಯಲ್ಲಿದುಕೊಂಡು ಕುರಿಗಳನ್ನು ಮೇಯಿಸುತ್ತಿದ್ದನು.
ಆಶ್ರಯ ಕಾಲೊನಿಯ ಬಳಿಯ ರೈಲ್ವೆ ಹಳಿಗಳ
ಮೇಲೆ ಕುರಿಗಳು ಹೋಗುತ್ತಿದ್ದ ಸಮಯದಲ್ಲಿ ಗೂಡ್ಸ್ ಗಾಡಿ ಬಂದಿದ್ದು, ಕುರಿಗಳನ್ನು
ಪಾರು ಮಾಡಲು ಹೋದ ಧನವೀರ್ ಮತ್ತು ಕುರಿಗಳು ಗಾಲಿಗಳಿಗೆ ಸಿಕ್ಕಿ ತುಂಡು ತುಂಡಾಗಿ
ಹಳಿಗಳ ಮೇಲೆ ಬಿದ್ದು ಮೃತಪಟ್ಟರು.
ವಿಷಯ ತಿಳಿಯುತ್ತಿದ್ದಂತೆ ಬಂದ ಕೆಲ ಗ್ರಾಮಸ್ಥರು ಬಾಡಿನ ಆಸೆಗೆ ಸತ್ತು ಬಿದ್ದಿದ್ದ
ಕುರಿಗಳ ಬಗ್ಗೆ ಗಮನ ಹರಿಸಿದರೇ ಹೊರತು ಮೃತಪಟ್ಟಿದ್ದ ಧನವೀರ್ ಬಗ್ಗೆ ಗಮನ
ಹರಿಸಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ನೋವು ತೋಂಡಿಕೊಂಡರು.
ರೈಲ್ವೆ ಹಳಿ ನಿಷೇದಿತ ಪ್ರದೇಶವಾಗಿದ್ದು, ಕುರಿ ಮೇಯಿಸಲು ಬಂದಿದ್ದು ಅಪರಾಧ.
,ಇಲಾಖೆಯವರು ನಿಷೇದಿತ ಪ್ರದೇಶಕ್ಕೆ ಪ್ರವೇಶ ಮಾಡಿದ ಕಾರಣ ಮೃತನ ಮೇಲೆ ಮತ್ತು ಸಂಬಂದಿಕರ ಮೇಲೆ ಪ್ರಕರಣ ದಾಖಲಿಸಿವುದಾಗಿ ತಿಳಿಸಿದ ಕಾರಣ ಬೆದರಿದ ಮೃತನ ಸಂಬಂಧಿಗಳು
ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಅಂತ್ಯಕ್ರಿಯೆ ನಡೆಸಿದರು ಎಂದು
ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ .