Publicstory.in
ತುರುವೇಕೆರೆ: ತಾಲೂಕಿನ ಡಿ.ಕಲ್ಕೆರೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ಬಿಜೆಪಿ ಬೆಂಬಲಿತ ನೂತನ ಅದ್ಯಕ್ಷರಾಗಿ ಆಯರಹಳ್ಳಿಪಾಂಡು ಉಪಾಧ್ಯಕ್ಷರಾಗಿ ಜಿ.ವಿ.ಪ್ರಕಾಶ್ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.
13 ನಿರ್ದೇಶಕರ ಸ್ಥಾನಗಳನ್ನು ಹೊಂದಿರುವ ಸಹಕಾರ ಸಂಘದ ಅದ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನೆಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಆಯರಹಳ್ಳಿಪಾಂಡು ಉಪಾಧ್ಯಕ್ಷ ಸ್ಥಾನಕ್ಕೆ ಜಿ.ವಿ.ಪ್ರಕಾಶ್ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಎಂದು ಚುನಾವಣಾಧಿಕಾರಿ ಘೋಷಿಸಿದರು. ಚುನಾವಣಾಧಿಕಾರಿಯಾಗಿ ಬಿಇಒ ಕಚೇರಿ ಬಿ.ಆರ್.ಪಿ ನರಸಿಂಹಮೂರ್ತಿ ಕರ್ತವ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷ ಅಯರಹಳ್ಳಿ ಪಾಂಡು ಮಾತನಾಡಿ ಶಾಸಕ ಮಸಾಲಜಯರಾಮ್ ಹಾಗೂ ಜನರ ಸಹಕಾರದಿಂದ ಸುಮಾರು ವರ್ಷಗಳ ನಂತರ ನಮಗೆ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಸಹಕಾರ ಸಂಘದ ಅಧಿಕಾರ ಹಿಡಿದಿದೆ ಅದ್ಯಕ್ಷನಾಗಿ ಎಲ್ಲ ರೈತರಪರವಾಗಿ ಹಲವು ಯೋಜನೆಗಳನ್ನು ಕೈಗೊಂಡಿದ್ದು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಬದಲ್ಲಿ ನಿರ್ದೇಶಕರಾದ ಬಿ.ಕೆ.ಪುಟ್ಟಸ್ವಾಮಿ, ಚಂದ್ರಯ್ಯ, ಜಯಮ್ಮ, ದಾಸಪ್ಪ, ಡಿ.ಡಿ ನಟರಾಜು, ಮೃತ್ಯಂಜಯ, ರಂಗೇಗೌಡ, ಕೆ.ಎಸ್.ಹಾಲಪ್ಪಕುಮಾರ್ ಪಾಲ್ಗೊಂಡಿದ್ದರು.
ನೂತನ ಅಧ್ಯಕ್ಷ ಹಾಗೂ ಉಫಾಧ್ಯಕ್ಷರ ಮೆರವಣಿಗೆ ನೆಡೆಸಿ ಅವರ ಬೆಂಬಲಿಗರು ಸಿಹಿ ಹಂಚಿ ಸಂಬ್ರಮಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎನ್.ಆರ್.ಜಯರಾಮ್ ಸೇರಿದಂತೆ ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿದರು.