ತುಮಕೂರು ಲೈವ್

ಭಗತ್ ಸಿಂಗ್ ಸಮಾನತೆಯ ಆಶಯ ಈಡೇರಿಲ್ಲ: ಮುಜೀಬ್

Publicstory. in


Tumkuru: ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಿ ಸಮಾನತೆಯನ್ನು ತರಲು ಹೋರಾಡಿದ ವೀರಸೇನಾನಿ ಭಗತ್ ಸಿಂಗ್ ಅವರ ತಮ್ಮ 23ನೇ ವರ್ಷಕ್ಕೆ ನೇಣಿಗೇರಿದರು. ಸ್ವಾತಂತ್ರ್ಯ ಬಂದು ಏಳು ದಶಕಗಳು ಸಂದರೂ ಭಗತ್ ಸಿಂಗ್ ಅವರ ಸಮಾನತೆಯ ಆಶಯ ಇನ್ನೂ ಕೈಗೂಡಿಲ್ಲ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಕಳವಳ ವ್ಯಕ್ತಪಡಿಸಿದರು.

ಸಾಮಾಜಿಕ. ಆರ್ಥಿಕ ಅಸಮಾನತೆ ಇನ್ನೂ ಆಳವಾಗಿ ಬೇರೂರುತ್ತಿರುವ ಸಂದರ್ಭದಲ್ಲಿ ಯುವಜನರು ಭಗತ್‍ಸಿಂಗ್ ಅವರ ಚಿಂತನೆಗಳತ್ತ ಗಮನಹರಿಸುವುದು ಅಗತ್ಯವೆಂದರು. ಪ್ರಭುತ್ವ ಕ್ರಾಂತಿಕಾರಿ ಹೋರಾಟಗಳು ಭಾರತದ ಸ್ವಾತಂತ್ರ್ಯ ಚಳವಳಿಗೆ ಕೊಟ್ಟ ಕೊಡುಗೆಯನ್ನು ಸರಿಯಾಗಿ ದಾಖಲಿಸಿಲ್ಲ ಎಂದು ಆರೋಪಿಸಿದರು.

ಅವರು ಮಾರ್ಚ್ 23ರಂದು ಜನಚಳಿ ಕೇಂದ್ರದಲ್ಲಿ ಸಿಐಟಿಯು ಸರಳವಾಗಿ ಆಚರಿಸಿದ ಹುತಾತ್ಮ ದಿನಾಚರಣೆಯಲ್ಲಿ ಮಾತನಾಢಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ತುಮಕೂರು ತಾಲೂಕು ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ 12ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಚಳವಳಿಗೆ ಆಕರ್ಷಿತರಾದ ಭಗತ್ ಸಿಂಗ್ ತನ್ನ ಸಂಗಾತಿಗಳೊಡನೆ ಕ್ರಾಂತಿಕಾರಿ ಮಾರ್ಗ ಹಿಡಿದು ಬ್ರಿಟೀಷರ ವಿರುದ್ಧ ಕ್ರಾಂತಿಕಾರಿ ಹೋರಾಟಕ್ಕೆ ಇಳಿದ ಪರಿಣಾಮ ಇಂದಿಗೆ 89 ವರ್ಷಗಳ ಹಿಂದೆ ಭಗತ್‍ಸಿಂಗ್, ರಾಜ್‍ಗುರು ಮತ್ತು ಸುಖ್‍ದೇವರನ್ನು ನೇಣಿಗೇರಿಸಲಾಗಿದೆ ಎಂದು ಇತಿಹಾಸವನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ರಫೀಕ್, ಲಕ್ಷ್ಮೀಕಾಂತ್ ಮೊದಲಾಧವರು ಹಾಜರಿದ್ದರು.

Comment here