ಆಗಸ್ಟ್ 17 ರಂದು ನಿಧನರಾದ ಖ್ಯಾತ ವೈದ್ಯೆ, ಸಾಹಿತ್ಯ ಲೇಖಕಿ ಡಾ. ಗಿರಿಜಮ್ಮ ಅವರಿ ಡಾ. ರಜನಿ ಅವರ ಕಾವ್ಯ ನಮನ.
ಸಾವು
*****
ಸಾವಿಗೆ ಕಣ್ಣಿಲ್ಲ
ಹೃದಯ ಮೊದಲೇ ಇಲ್ಲ…
ಸಾವಿಗೆ ಗೊತ್ತೆ?
ಇದು ಹೃದಯವಂತಳಾಗಿದ್ದ ಡಾಕ್ಟರ್ ಎಂದು..
ಮಧ್ಯರಾತ್ರಿ ಮಂಚದಲ್ಲಿ ಒಬ್ಬಳೇ ಕುಳಿತು
ಬರೆದಳು ಸ್ತ್ರೀಗಾಗಿ ಎಂದು …
ತನ್ನ ಚಿತ್ರವ ಬಿಟ್ಟು ನೊಂದ
ಸ್ತ್ರೀಯರ ಬದುಕ ಚಿತ್ರಿಸಿದಳೆಂದು ?
ಹೆರಿಗೆ ಬ್ಯಾನೆ ತಿಂದ ತಾಯರಿಗೆ
ತಾಯದಳೆಂದು ..
ಶ್ಯಾಮಲ ವರ್ಣದ ಸ್ತೀಯ
ಹೃದಯ ಕಾಮನ ಬಿಲ್ಲು ಆಗಿತ್ತೆಂದು …
ಕಥೆ ಬರೆದವಳ ಜೀವನ
ಮುಗಿಯದ ಕಥೆ ಆಗಿತ್ತೆಂದು…
ನೆನಪುಗಳಿಂದ ಕಾಡಿದ ಜೀವನ
ಚಿತ್ರ ಮಸುಕಾಗಲು ಬಿಟ್ಟಳೆಂದು…
ಬಿಟ್ಟಿದ್ದರೆ ಇನ್ನೂ ಬಾಡದ
ಹೂವು ಆಗಿತ್ತೆಂದು…
ಮೋಸ ಮಾಡದೇ
ಮೋಸ ಹೋದವಳೆಂದು…
ಹೇಳದೇ ಹೋದ ಕಥೆಗಳು
ನೂರಿವೆಯೆಂದು…
ಗರಿಗರಿ ಹತ್ತಿ ಸೀರೆಯಲ್ಲಿ
ಸುತ್ತಿದ್ದ ಪಿಸುಗುಡುವ ಆತ್ಮವಿತ್ತೆಂದು..
ಓದಿ ಮನಸ್ಸುಗಳನ್ನು
ಅರಿಯಲಾದಳು ಕ್ರೂರಿ ಹೃದಯಗಳನ್ನು..
ಹೋಗಿ ಬಾ, ಯಾರೂ ಹಿಂಸಿಸದ
ನೆನಪು ಉಂಟು ಮಾಡದ
ದೇವ ಸನ್ನಿದಿಗೆ
ಶ್ಯಾಮಲ ರಾಧೆ…