ತುಮಕೂರು ಲೈವ್

ಮಕ್ಕಳ ಹಡಿಲಿಲ್ಲವೆಂದು ಕುತ್ತಿಗೆಬಿಗಿದರು..

ತುಮಕೂರು:

ಮದುವೆಯಾಗಿ ಎರಡೂವರೆ ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಜನತಾ ಕಾಲೋನಿಯಲ್ಲಿ ಕೈ ಹಿಡಿದ ಪತಿ ಸೇರಿದಂತೆ ಆತನ ಮನೆಯವರು ಸೇರಿ ಅಮಾಯಕ ಹೆಣ್ಣು ಮಗಳ ಕುತ್ತಿಗೆಯನ್ನ ವೈರಿನಿಂದ ಬಿಗಿದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹೊಳವನಹಳ್ಳಿ ಗ್ರಾಮದ ಸುಮಲತಾ(21) ಕೊಲೆಯಾದ ಮಹಿಳೆ.

ಅನಂತಪುರ ಜಿಲ್ಲೆ ಮಡಕಶಿರಾ ತಾಲ್ಲೂಕಿನ ದಂಡಪಲ್ಲಿ ಗ್ರಾಮದಿಂದ ಸುಮಲತಾಳನ್ನು ಹೊಳವನಹಳ್ಳಿಯ ಶಿವಕುಮಾರ ಎಂಬುವರಿಗೆ ಎರಡೂವರೆ ವರ್ಷಗಳ ಹಿಂದೆ ಕೊಟ್ಟು ಮದುವೆ ಮಾಡಲಾಗಿತ್ತು.

ಮದುವೆಯಾಗಿ ಎರಡೂವರೆ ವರ್ಷಕಳೆದರೂ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿ ಆಗಿಂದ್ಹಾಗೆ ಗಂಡ ಶಿವಕುಮಾರ ಸೇರಿದಂತೆ ಅವರ ಅಣ್ಣ, ಅತ್ತಿಗೆ ಹಾಗೂ ತಾಯಿ ಗಲಾಟೆ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇದೇ ಕಾರಣಕ್ಕೆ ಜ. 19 ಭಾನುವಾರ ರಾತ್ರಿ ಸುಮಲತಾ ವಿರುದ್ಧ ಖ್ಯಾತೆ ತೆಗೆದ ಗಂಡ ಶಿವಕುಮಾರ ಹಾಗೂ ಅವರ ಅಣ್ಣ ರಮೇಶ, ಅತ್ತಿಗೆ ನಾಗಮಣಿ, ತಾಯಿ ಸರೋಜಮ್ಮ ಸುಮಲತಾ ಕುತ್ತಿಗೆಗೆ ವೈರಿನಿಂದ ಬಿಗಿದು ಕೊಲೆ ಮಾಡಿದ್ದಾರೆ ಎಂದು ಮೃತಳ ತಂದೆ ಮನೆಯವರು ಆರೋಪಿಸಿದ್ದಾರೆ.

ಕೊಲೆ ಸಂಬಂಧ ಸುಮಲತಾ ತಂದೆ ಕುಮಾರ ಲಿಂಗಪ್ಪ ಅವರು ನೀಡಿದ ಕೊಲೆ ಆರೋಪದ ದೂರಿನ ಮೇರೆಗೆ ಗಂಡ ಶಿವಕುಮಾರ, ಆತನ ಅಣ್ಣ ರಮೇಶ ಅವರನ್ನು ಬಂಧಿಸಲಾಗಿದೆ. ಅತ್ತಿಗೆ ನಾಗಮಣಿ, ತಾಯಿ ಸರೋಜಮ್ಮ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಎಂ. ಪ್ರವೀಣ್, ಕೊರಟಗೆರೆ ಪೊಲೀಸ್ ಠಾಣೆ ಸಿಪಿಐ ಎಫ್.ಕೆ.ನದಾಫ್, ಪಿಎಸೈ ಬಿ.ಸಿ.ಮಂಜುನಾಥ ಭೇಟಿ ನೀಡಿದ್ದರು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comment here