Monday, October 14, 2024
Google search engine
Homeತುಮಕೂರು ಲೈವ್ಮನುಕುಲದ ಮಹಾಬೆಳಕಾದ ಬುದ್ದ: ದೊರೈರಾಜ್

ಮನುಕುಲದ ಮಹಾಬೆಳಕಾದ ಬುದ್ದ: ದೊರೈರಾಜ್

Publicstory. in


ತುಮಕೂರು: ಬುದ್ದ ಸಮ್ಮೆಲ್ಲರಂತೆ ಸಾಮಾನ್ಯ ಮನುಷ್ಯ. ಜನರೊಂದಿಗೆ ಬೆರೆತು ಮನುಕುಲದ ಮಹಾಬೆಳಕಾದ. ಆ ಕರುಣೆಯ ಬೆಳಕು ಇಡೀ ಜೀವಜಗತ್ತು ಉಳಿಸಬಲ್ಲದು ಎಂದು ಜನಪರ ಚಿಂತಕ ಕೆ.ದೊರೈರಾಜ್ ಅಭಿಪ್ರಾಯಪಟ್ಟರು.

ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಸಿಐಟಿಯ ಮತ್ತು ಸಮುದಾಯ ಕರ್ನಾಟಕದಿ ಹಮ್ಮಿಕೊಂಡಿದ್ದ ಬುದ್ದಪೂರ್ಣಿಮೆ ಮತ್ತು ರವೀಂದ್ರನಾಥ ಟ್ಯಾಗೋರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದು ಸತ್ಯ, ಯಾವುದು ಅಸತ್ಯ ಎಂಬ ಬಗ್ಗೆ ಸ್ಪಷ್ಟತೆ ಪಡೆದು ಆ ದಿಕ್ಕಿನಲ್ಲಿ ನಡೆಯಬೇಕಾಗಿದೆ. ವರ್ತಮಾನ ದಲ್ಲಿ ಸುಳ್ಳು ವಿಜೃಂಭಿಸುತ್ತಿದೆ.ಸುಳ್ಳೇ ನಮ್ಮನ್ನು ಆಳುತ್ತಿದೆ. ಸುಳ್ಳು ಮನುಷ್ಯನ ಮೆದುಳು ಸೇರಿಕೊಂಡು ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ ಎಂದರು.

ಬಹುಸಂಸ್ಕೃತಿ ಆಛಾರ ವಿಚಾರಗಳ ನಡುವೆ ನಂಬಿಕೆಗಳ ಸಂಘರ್ಷ ಹೆಚ್ಚು ಸುಳ್ಳಿಗೆ ಕಾರಣವಾಗಿದೆ. ಇದು ಸಾಮಾಜಿಕ ಸ್ಥಿತಿಯೂ ಆಗಿದೆ. ಪ್ರಭುತ್ವವೂ ಆಗಿ ನಮ್ಮನ್ನಾಳುತ್ತಿರುವುದು ದುರಂತ.ಗಳಿಗೆ ಕಾರಣವಾಗಿದೆ. ಬುದ್ದ ವೈಚಾರಿಕವಾಗಿ, ವೈಜ್ಞಾನಿಕವಾಗಿ ಮಾತನಾಡಿದ ಮತ್ತು ಬದುಕಿದ. ಆದರೆ ಬುದ್ದನ ಹುಟ್ಟಿನ ಕುರಿತು ಹೆಚ್ಚು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬುದ್ದ ಮೈತ್ರಿ, ಕರುಣೆ, ಪ್ರೀತಿಯ ಕುರಿತು ಹೇಳಿದ. ಎಲ್ಲಾ ಜೀವರಾಶಿಗಳು ಪ್ರೀತಿಸಬೇಕು. ಒಟ್ಟಿಗೆ ಬಾಳಬೇಕು ಬದುಕಬೇಕು. ಕರುಣೆ ಹೆಚ್ಚಾದರೆ ಮನುಷ್ಯನ ಸಹಜ ತಪ್ಪುಗಳನ್ನ ಮನ್ನಿಸಲು ಸಾಧ್ಯವಾಗುತ್ತದೆ. ಜೀವವನ್ನು ಉಳಿಸುವ ಶಕ್ತಿ ಬರುತ್ತದೆ ಎಂದರು.

ಪರಿಸರವಾದಿ ಸಿ.ಯತಿರಾಜು ಮಾತನಾಡಿ, ರವೀಂದ್ರನಾಥ ಟ್ಯಾಗೋರ್ ನೈಸರ್ಗಿಕ ಶಿಕ್ಷಣಕ್ಕೆ ಒತ್ತು ನೀಡಿದರು. ಇಂದಿನ ವ್ಯಾಪಾರದ ಜಗತ್ತಿನಲ್ಲಿ ಶಿಕ್ಷಣವೂ ವ್ಯಾಪಾರವಾಗಿದೆ. ಮನಸು-ಮನಸುಗಳ ನಡುವೆ ಬಾಂಧವ್ಯ ಬೆಸೆಯಬೇಕು. ಎಲ್ಲರೊಡನೆ ಪ್ರೀತಿ ಇರಬೇಕು ಎಂಬುದನ್ನು ರವೀಂದ್ರನಾಥ ಟ್ಯಾಗೋರ್ ಸಾರಿದರು ಎಂದು ಹೇಳಿದರು.

ಇಂದು ವಲಸೆ ಕಾರ್ಮಿಕರು, ಆರ್ಥಿಕತೆ, ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಆದರೆ ಮಾಧ್ಯಮಗಳಲ್ಲಿ ಬೇರೆಯದೇ ಚರ್ಚೆ ನಡೆಯುತ್ತಿದೆ. ಸರ್ಕಾರಗಳು ಕೂಡ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮುದಾಯ ಜಿಲ್ಲಾ ಕಾರ್ಯದರ್ಶಿ ಕೆ.ಈ.ಸಿದ್ದಯ್ಯ ಮಾತನಾಡಿ ಸಾವಿನ ವ್ಯಾಪಾರಿಗಳ ಸಾಮ್ರಾಜ್ಯದಲ್ಲಿ ಬದುಕುತ್ತಿರುವ ನಮಗೆ ಬುದ್ದನ ಪ್ರೀತಿ, ಕರುಣೆ ಮತ್ತು ಮೈತ್ರಿ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್, ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಖಪ್ಪ, ಕಟ್ಟಡ ಕಾರ್ಮಿಕ ಮುಖಂಡ ಶಂಕರಪ್ಪ, ಬೀದಿಬದಿ ವ್ಯಾಪಾರಿಗಳ ಮುಖಂಡ ವಸೀಂ, ಪೌರ ಕಾರ್ಮಿಕ ಕೆಂಪಣ್ಣ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?