Publicstory.in
Turuvekere: ತಾಲ್ಲೂಕಿನ ಮಲ್ಲಾಘಟ್ಟ ತುಂಬಾ ನೀರು.ಹೇಮಾವತಿ ನೀರಿನಿಂದ ತುಂಬಿರುವ ಕೆರೆಯನ್ನು ನೋಡುವುದೇ ಚೆಂದ.
ಇಂತ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಮಸಾಲ ಜಯರಾಮ್ ಕೆರೆಯನ್ನು ಜಿಲ್ಲೆಯ ಅತ್ಯುತ್ತಮ ಪ್ರವಾಸಿತಾಣವನ್ನಾಗಿಸಲು ಹಾಗು ಗಂಗಾಧರೇಶ್ವರ ದೇವಾಲಯಕ್ಕಾಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ 1 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗುವುದೆಂದು ತಿಳಿಸಿದರು.
ತಾಲ್ಲೂಕಿನ ಮಲ್ಲಾಘಟ್ಟಕೆರೆಗೆ ಭಾಗಿನ ಅರ್ಪಿಸಿ ಮಾತನಾಡಿದರು. ಮಲ್ಲಾಘಟ್ಟಕೆರೆ ಮೈದುಂಬಿ ಹರಿಯುತ್ತಿದ್ದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದು. ಅದಕ್ಕೆ ಪೂರಕವಾದ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕಿದೆ ಎಂದರು.
ಕೆರೆಯ ಹಿಂಭಾಗದಲ್ಲಿರುವ ಗಂಗಾಧರೇಶ್ವರ ದೇವಾಲಯದ ಪಕ್ಕದಲ್ಲಿ ಹೊರಾಂಗಣ ಸ್ಟೇಜ್ ಹಾಗು ಚೌಟರಿ ಭವನ ನಿರ್ಮಿಸಿ ಗ್ರಾಮಸ್ಥರು ಹಾಗು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಆನೇಕೆರೆ ಪಂಚಾಯಿತಿ ಅಧಿಕಾರಿಗಳು ಮಲ್ಲಾಘಟ್ಟಕೆರೆಗೆ ಬರುವ ಪ್ರವಾಸಿಗರ ವಾಹನಗಳಿಗೆ ಪಾರ್ಕಿಂಗ್, ತುಂಗುದಾಣ ಸೇರದಂತೆ ಹಲವು ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟು ಅದರಿಂದ ಬರವ ಶುಲ್ಕದ ಹಣದಿಂದ ಕೆರೆ ನೈರ್ಮಲ್ಯ ಹಾಗೂ ನಿರ್ವಹಣೆಯನ್ನು ಮಾಡಲೆಂದು ಸಲಹೆ ನೀಡಿದರು.
ಕೆರೆ ಏರಿಯ ಮೇಲಿರುವ ಗಿಡಗೆಂಟೆಗಳನ್ನು ತೆರವುಗೊಳಿಸುವುದು ಹಾಗು ಉತ್ತಮ ರಸ್ತೆ ನಿರ್ಮಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಇದೇ ವೇಳೆ ಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಚಿದಾನಂದ್, ರವಿ, ಆಶಾರಾಣಿ, ಮುಂಖಡರುಗಳಾದ ಕೊಂಡಜ್ಜಿವಿಶ್ವನಾಥ್, ಬಿ.ಎಸ್.ದೇವರಾಜ್, ವಿ.ಟಿ.ವೆಂಕಟರಾಂ, ಸೋಮಣ್ಣ, ಸುರೇಶ್, ದಿನೇಶ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.