Saturday, June 22, 2024
Google search engine
Homeಜನಮನಮುಟ್ಟಿನ ವೇಳೆ ಹೆಂಗಸರನ್ನು ಮುಟ್ಟಬಾರದು ಏಕೆ?

ಮುಟ್ಟಿನ ವೇಳೆ ಹೆಂಗಸರನ್ನು ಮುಟ್ಟಬಾರದು ಏಕೆ?

ಶಿಲ್ಪಾ ಎಂ ತಾರೀಕಟ್ಟೆ


ಮುಟ್ಟು ಆಗಿರುವ ಹೆಣ್ಣು ಮಕ್ಕಳನ್ನು ಮುಟ್ಟಬಾರದು. ಈ ಕಾರಣಕ್ಕೆ ಇದನ್ನು ಮುಟ್ಟು ಎನ್ನುತ್ತಾರೆಯೆ ?

ಸ್ವಲ್ಪ ಯೋಚಿಸಿ .ವ್ಯೆಜ್ಞಾನಿಕವಾಗಿ ಹೇಳುವುದಾದರೆ,
ಪ್ರಾಯದ ಹೆಣ್ಣಿಗೆ ಗಭಾ೯ಶಯದಿಂದ ಆಗುವ ರಕ್ತ ಸ್ರಾವವೇ ಮುಟ್ಟು. ಇದೊಂದು ನ್ಯೆಸಗಿ೯ಕ ಕ್ರಿಯೆ. ಮುಟ್ಟಿನ ಸಮಯದಲ್ಲಿ ದ್ಯೆಹಿಕ ಮತ್ತು ಮಾನಸಿಕ ಬದಲಾವಣೆ ಆಗುತ್ತವೆ.

ಮುಟ್ಟು ಸಹಜ ಕ್ರಿಯೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಇದನ್ನು ಅಸಹಜ ಪ್ರಕ್ರಿಯೆ ಎಂದೆ ಬಿಂಬಿಸಿಕೊಳ್ಳತ್ತಿರುವುದಕ್ಕೆ ಕಾರಣ ತಿಳಿಯುತ್ತಿಲ್ಲ.

ಮುಟ್ಟು ದೇಹದ ಒಂದು ಸಹಜ ಕ್ರಿಯೆ ಅಷ್ಟೇ. ಇಂದಿಗೂ ಜನ ಮುಟ್ಟು ಆಗಿರುವ ಹೆಣ್ಣನ್ನು ಮುಟ್ಟದೆ ಮುಟ್ಟಾದ ದಿನವಾಗಿಸಿದ್ದಾರೆ.

ಈ ವಿಚಾರದಲ್ಲಿ ಹೆಣ್ಣನ್ನು ದ್ವೇಷಿಸುತ್ತಿದ್ದಾರೊ ಅಥವಾ ಮುಟ್ಟನ್ನು ದ್ವೇಷಿಸುತ್ತಿದ್ದಾರೊ ತಿಳಿಯುತ್ತಿಲ್ಲ.
ಮುಟ್ಟಾಗಲಿಲ್ಲವೆಂದರೆ ಜನನವೇ ಇಲ್ಲ. ಈ ಸತ್ಯವೂ ಗೊತ್ತಿದೆ. ಆದರೆ ಇದನ್ನು ಗೌರವಿಸುತ್ತಿಲ್ಲ.

ಸಹಜತೆಯನ್ನು ಮೂಡನಂಬಿಕೆ ಅಪವಿತ್ರತೆಗೆ ತಳುಕುಹಾಕಿದ್ದಾರೆ .

ಚಿಕ್ಕ ವಯಸ್ಸಿನಲ್ಲೆ ಅಂದರೆ ೧೦ ವರ್ಷ ಅನ್ನುವಾಗಲೆ ದೇಹದಲ್ಲಿ ಬದಲಾವಣೆಗಳಾಗುತ್ತವೆ. ಅದನ್ನು ಗಮನಿಸಿದ ಪೊಷಕರು ೧೦ ವರ್ಷದೊಳಗೆ ಮೊದಲ ಅನುಭವ ಮತ್ತು ಮುಟ್ಟಿನ ಬಗ್ಗೆ ಸಹಜವಾಗಿ ಅರಿವು ಮೂಡಿಸಬೇಕಾಗುತ್ತದೆ. ಮುಕ್ತವಾಗಿ ಮಾತಾಡಬೇಕಾಗುತ್ತದೆ. ಅವಳನೊಬ್ಬಳನ್ನೆ ಕೂರಿಸಿ ಮಾತಾಡುವುದಲ್ಲ, ಮನೆಯೊವರೊಟ್ಟಿಗೆ ಇದ್ದಾಗ.

ಅವಳಲ್ಲಿ ಪ್ರಶ್ನೆ ಗಳು ಮೂಡಬಹುದು, ಪ್ರಶ್ನೆ ಗಳಿಗೆ ಸಹನೆ ಯಿಂದ ಉತ್ತರಿಸಬೇಕಾಗುತ್ತದೆ. ಇದು ಮನೆಯಲ್ಲಿರುವ ಗಂಡು ಮಕ್ಕಳಿಗೂ ತಿಳಿದಿರಬಾರದು ಅಂತೇನಿಲ್ಲ, ಅವರಿಗೂ ಅರಿವಿರಬೇಕು.ಮುಟ್ಟು ಸಹಜವಾಗಿರುವಾಗ ವಿಷಯವೂ ಮುಕ್ತವಾಗಿರಬೇಕು.

ಪೋಷಕರು ಅರಿವು ಮೂಡಿಸುವ ಬದಲು ಆಕೆಯನ್ನು ಹಿಂಸಿಸುತ್ತಾರೆ ಎನಿಸುತ್ತದೆ. ಹಳ್ಳಿಗಳಲ್ಲಿ ತೀರಾ ಕೆಟ್ಟ ವಿಚಾರವಿದು ಎಂಬಂತೆ ಬಿಂಬಿಸುತ್ತಾರೆ . ಆಕೆ ೧೦ ವರ್ಷದ ಮಗುವಾಗಿರಲಿ ಮುಟ್ಟಾದರೆ ಹೊರಗಡೆ ಕೂರಿಸಿ ಹಿತ್ತಲಲ್ಲಿ ನೀರಾಕಿ ಅವಳಿಗೆಂದೆ ತಟ್ಟೆ ಲೋಟಗಳನ್ನು ಇಟ್ಟು ೨ ದಿನ ಹೊರಗಿಟ್ಟು ಯಾರು ಮುಟ್ಟದ ಪದ್ದತಿಯಾಗಿ ಆಚರಿಸುತ್ತಾರೆ.

ಸರಾಸರಿ ಪ್ರಮಾಣದಲ್ಲಿ ಇದು ಈಗ ಸ್ವಲ್ಪ ಕಡಿಮೆ ಆಗಿರಬಹುದು. ಇನ್ನೂ ಸಂಪ್ರದಾಯದ ಹೆಸರಲ್ಲಿ ಖಂಡಿತ ಈ ಆಚರಣೆ ಇದೆ .ನಗರಗಳಲ್ಲಿ ಕಡಿಮೆ ಇರಬಹುದೆಂದು ಭಾವಿಸಿದ್ದೆ, ಖಂಡಿತ ಇಲ್ಲ ಸಗಣಿ ನೀರಾಕಿಯಾದರು ಮುಟ್ಟು ಅಪವಿತ್ರವೆಂದೆ ಭಾವಿಸಿದ್ದಾರೆ.

ಮಕ್ಕಳಿಗೆ ಅದರ ನೋವು ಸುರಕ್ಷತೆ ,ಸ್ವಚ್ಛತೆ, ಮಾನಸಿಕವಾಗಿ ಆಗುವ ಬದಲಾವಣೆಗಳ ಕಾಳಜಿ ಮಾಡದೆ ಇದಕ್ಕೆ ವಿರುದ್ದವಾಗಿರುವುದೆಲ್ಲ ಮಾಡುತ್ತೇವೆ .

ಹಿಂದೆಲ್ಲ ಹೊರಗಿಡುವುದರ ಕಾರಣ ತಿಂಗಳಿಗೆ ಒಮ್ಮೆಯಾದರೂ ಸ್ವಲ್ಪ ವಿಶ್ರಾಂತಿ ಸಿಗಲೆಂದು ಎನ್ನುತ್ತಾರೆ. ಆದರೆ ಈ ಹೇಳಿಕೆಯನ್ನು ಸುಲಭವಾಗಿ ಒಪ್ಪಲೂ ಸಾಧ್ಯವಿಲ್ಲ ಹೊರಗಡೆಯ ಕೆಲಸವನ್ನೂ ಮಾಡುತ್ತಿದ್ದರು ವಿಶ್ರಾಂತಿಯೇನು ಇರುತ್ತಿರಲಿಲ್ಲ!

ಮನೆಗಳಲ್ಲಿ ಅರಿವು ಸಿಕ್ಕಿಲ್ಲ ವಾದರೆ ಅರಿವು ಮೂಡಿಸುವ ಜವಾಬ್ದಾರಿ ಶಿಕ್ಷಕರದ್ದು ಆಗಿರುತ್ತದೆ. ಇದು ಶಿಕ್ಷಣದ ಮತ್ತು ಕಲಿಕೆಯ ಒಂದು ಭಾಗವೆ ಆಗಿರುತ್ತದೆ ಪಠ್ಯದಲ್ಲೂ ಇರುತ್ತದೆ ಆದರೆ ಫ್ರೌಡಶಾಲೆಯ ಮಟ್ಟದಲ್ಲಿ ಶಿಕ್ಷಕರೂ ಈ ಪಾಠವನ್ನು ಸ್ಕಿಪ್ ಮಾಡುತ್ತಾರೆ ಅಥವಾ ಅದರಲ್ಲಿರುವುದನ್ನೆ ಹೇಳಿ ಪಾಠ ಮುಗಿಸುತ್ತಾರೆ .

ಪ್ರತಿಯೊಂದು ವಿಷಯದಲ್ಲೂ ಅರಿವು ಮೂಡಿಸುವುದು ಬಹಳ ಮುಖ್ಯ ಮತ್ತು ಎಲ್ಲವೂ ತಿಳಿಯುವ ವಿಚಾರವೇ ಆಗಿರುತ್ತದೆ. ಮುಕ್ತವಾಗಿ ಮಾತಾಡಿದಾಗ ಮಕ್ಕಳಲ್ಲಿ ಅದರ ಬಗೆಗಿನ ಭಯ ಮತ್ತು ಸಂಕೋಚ, ಕುತೂಹಲಗಳು ಕಡಿಮೆಯಾಗುತ್ತವೆ.

ಗಭ೯ ಕ್ಯಾನ್ಸರ್‌ ಗಳು ಹೆಚ್ಚು ಆಗಲು ಕಾರಣ ಹಿಂದಿನಿಂದ ಮುಟ್ಟಿನ ಬಗ್ಗೆ ಅರಿವು ಇಲ್ಲದಿರುವುದು. ಮುಕ್ತವಾಗಿ ಮಾತಾನಾಡದೆ ಇರುವುದು. ಅಪವಿತ್ರವೆಂದು ಭಾವಿಸಿರುವುದು ಹೆಣ್ಣು ಮಕ್ಕಳಲ್ಲಿ ಸಂಕೋಚದ ಮನೊಭಾವನೆ ಹುಟ್ಟಿ ವ್ಯೆದ್ಯೆರೊಟ್ಟಿಗೂ ಸರಿಯಾಗಿ ಹೇಳಿಕೊಳ್ಳದೆ ಇರುವುದು. ಹೆಣ್ಣು ಮಕ್ಕಳಿಲ್ಲದ ತಾಯಂದಿರು ಗಂಡು ಮಕ್ಕಳ ಹತ್ತಿರ ಹೇಳಿಕೊಳ್ಳಲಾಗದೆ ಸಮಸ್ಯೆಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ತೆಗೆದುಕೊಳ್ಳದೆ ಕ್ಯಾನ್ಸರ್‌ ಗೆ ತುತ್ತಾಗುತ್ತಿದ್ದಾರೆ.

ಈ ಕಾರಣಗಳಿಗಾದರೂ ಹೆಣ್ಣು, ಗಂಡು ಎನ್ನದೆ ಈ ವಿಚಾರವಾಗಿ ಮುಕ್ತವಾಗಿ ಮಾತಾನಾಡಬೇಕಾಗುತ್ತದೆ.

ಅಣ್ಣ ತಮ್ಮ ಯಾರಾದರೂ ಏನಾಗಿದೆ ನಿನಗೆ ಅಪ್ಪಿ ತಪ್ಪಿ ಪ್ರಶ್ನೆ ಹಾಕಿದರೆ ಸಹಜ ವೆನ್ನುವಂತೆ ಅವಳು ಮುಟ್ಟಾಗಿದ್ದಾಳೆ ಎಂದರೆ, ಓಹ್, ಕ್ಷಮಿಸಿ ಎನ್ನುತ್ತಾರೆ. ಕ್ಷಮೆ ಕೇಳುವಷ್ಟು ಅದು ಅಪರಾಧವೆ ?

ಮುಟ್ಟಿಗೆ ಮೂಢನಂಬಿಕೆಗಳು ತಳುಕು ಹಾಕಿಕೊಂಡಿವೆ.ದೇವರು ಪೂಜಿಸಬಾರದು ದೇವಸ್ಥಾನಕ್ಕೆ ಹೊಗಬಾರದು ಮುಂತಾದವುಗಳು ಈ ವಿಚಾರಗಳೆಲ್ಲ ತುಂಬಾ ಚಚೆ೯ಗೆ ಬಂದಿವೆ. ಇವೆಲ್ಲ ಮೂಢನಂಬಿಕೆ ಎಂದು ಹೆಣ್ಣು ಮಕ್ಕಳೆ ಒಪ್ಪುತ್ತಿಲ್ಲ .ಈ ವಿಚಾರದಲ್ಲಿ ಎಲ್ಲರು ಬದಲಾಗಬೇಕಾಗಿದೆ. ಒಬ್ಬರಿಂದ ಸಮಾಜವನ್ನು ಕೆಣಕಲು ಸಾಧ್ಯವಿಲ್ಲ. ಎಲ್ಲರೂ ಸಹಜತೆಯನ್ನು ಸಹಜ ವೆಂದು ಒಪ್ಪಿಕೊಳ್ಳಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?