ಯುವ ವೃತ್ತಿಪರರೂ ಸೇರಿದಂತೆ ದೇಶದ ನಾಗರಿಕರು ಸೇನಾಧಿಕಾರಿಗಳು ಹಾಗೂ ಸೇನೆಯ ಇನ್ನಿತರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಮೂರು ವರ್ಷಗಳ ಮಟ್ಟಿಗೆ ಅವಕಾಶ ನೀಡುವ ಕುರಿತು ಭಾರತೀಯ ಸೇನೆ ಗಂಭೀರ ಪರಿಶೀಲನೆ ನಡೆಸಿದೆ.
ಮೊದಲ ಹಂತದಲ್ಲಿ 100 ಅಧಿಕಾರಿಗಳು ಹಾಗೂ ಒಂದು ಸಾವಿರ ವ್ಯಕ್ತಿಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ಉದ್ದೇಶ ಹೊಂದಿದೆ.
ಮೂರು ವರ್ಷಗಳ ಅವಧಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಸಿಗುವ ಈ ಅವಕಾಶವನ್ನು ‘ಟೂರ್ ಆಫ್ ಡ್ಯೂಟಿ’ ಎಂದು ಕರೆಯಲಾಗುತ್ತದೆ.
ಸೇನೆಯನ್ನು ಆಯ್ಕೆ ಮಾಡಿಕೊಳ್ಳದ ಆದರೆ ತಾತ್ಕಾಲಿಕ ಅವಧಿಗೆ ಸೇನಾ ಜೀವನವನ್ನು ಅನುಭವಿಸಲು ಬಯಸುವ ಆಸಕ್ತಿ ಹೊಂದಿರುವ ಯುವಕರನ್ನು ಸೆಳೆಯಲು ಸೇನೆ ಈ ರೀತಿಯ ತೀರ್ಮಾನ ಕೈಗೊಳ್ಳಲು ಮುಂದಾಗಿದೆ.
Yes nanu senege sidda sir call madi sir deshakagi kelasa madalu senege sidda sir plz help me sir plz ph no 6363846663