ಕೆ.ಇ.ಸಿದ್ದಯ್ಯ
Tumkur: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಫೆಬ್ರವರಿ 23ರಂದು ಚುನಾವಣೆ ನಡೆಯಲಿದೆ.
ಈ ಚುನಾವಣೆಗೆ ಸ್ಪರ್ಥಿಸಿರುವ ಸದಸ್ಯರು ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದಾರೆ.
ಪ್ರಚಾರಕ್ಕೆ ಈ ಬಾರಿ ಫೇಸ್ಬುಕ್, ವಾಟ್ಅಪ್, ಇನ್ಸಾಗ್ರಾಂ ಹಾಗೂ ಮೆಸೇಜ್ ಮಾಡುವ ಮೂಲಕ ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಒಟ್ಟು 9500 ಸಾವಿರ ಮತದಾರರಿದ್ದಾರೆ. ಬೆಂಗಳೂರು ವಿಭಾಗದಲ್ಲಿ 2201, ಮೈಸೂರು ವಿಭಾಗದಲ್ಲಿ 1500, ಕಲ್ಬುರ್ಗಿ ವಿಭಾಗದಲ್ಲಿ 2900 ಹಾಗೂ ಬೆಳಗಾವಿ ವಿಭಾಗದಲ್ಲಿ 2000 ಮತದಾರರಿದ್ದಾರೆ. ಪ್ರತಿ ವಿಭಾಗದಲ್ಲೂ ಎರಡು ತಂಡಗಳು ಸದಸ್ಯರಾಗಿ ಆಯ್ಕೆಯಾಗಲು ಪರಸ್ಪರ ಪೈಪೋಟಿ ನಡೆಸಿವೆ.
ಹೀಗೆ ಒಟ್ಟು ಎಂಟು ತಂಡಗಳಿದ್ದು ಈ ತಂಡಗಳಿಂದ ಒಟ್ಟು 24 ಸದಸ್ಯರು ಮಾತ್ರ ಆಯ್ಕೆಗೊಳ್ಳಬೇಕಾಗಿದೆ.
ಬೆಂಗಳೂರು ವಿಭಾಗದಲ್ಲಿ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಸೇರಿ 9 ಜಿಲ್ಲೆಗಳು ಬರಲಿವೆ.
ಮೈಸೂರು ವಿಭಾಗದಲ್ಲಿ ಮಂಡ್ಯ, ಚಾಮರಾಜನಗರ, ಮಡಿಕೇರಿ, ಉಡುಪಿ, ಹಾಸನ, ಮೈಸೂರು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಸೇರಿ 8 ಜಿಲ್ಲೆಗಳು, ಕಲ್ಬುರ್ಗಿ ವಿಭಾಗದಲ್ಲಿ ಬೀದರ್, ರಾಯಚೂರು, ಯಾದಗಿರಿ, ಗುಲಬರ್ಗ ಸೇರಿ 7 ಜಿಲ್ಲೆಗಳು ಮತ್ತು ಬೆಳಗಾವಿ ವಿಭಾಗದಲ್ಲಿ, ಗದಗ, ಧಾರವಾಡ, ಉತ್ತರ ಕನ್ನಡ ಸೇರಿ 7 ಜಿಲ್ಲೆಗಳು ಬರುತ್ತವೆ.
ಮತದಾನ ಫೆಬ್ರವರಿ 23ರಂದು ನಡೆಯಲಿದೆ. ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತಿದ್ದು , ಪ್ರತಿಯೊಬ್ಬ ಸ್ಪರ್ಧಿಗೂ ಒಂದೊಂದು ಚಿಹ್ನೆಯನ್ನು ನೀಡಲಾಗುವುದು. ಪ್ರತಿಯೊಂದು ವಿಭಾಗದಲ್ಲೂ ಓರ್ವ ಮತದಾರ ಒಟ್ಟು ಆರು ಮತಗಳನ್ನು ಚಲಾಯಿಸಲು ಅವಕಾಶವಿದೆ. ತನಗೆ ಸರಿಕಂಡ ಅಭ್ಯರ್ಥಿಯನ್ನು ಕಾರ್ಯ ಕಾರಿ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಬಹುದು. .
ಪ್ರತಿ ಮೂರು ವರ್ಷಗಳಿಗೊಮ್ಮೆ ರಾಜ್ಯ ವಿಜ್ಞಾನ ಪರಿಷತ್ ಗೆ ಚುನಾವಣೆ ನಡೆಯುತ್ತದೆ. ಹಿಂದಿನ ಕಾರ್ಯಕಾರಿ ಸಮಿತಿ ಸದಸ್ಯರ ಅವಧಿ ಫೆಬ್ರವರಿ ಅಂತ್ಯದೊಳಗೆ ಮುಕ್ತಾಯವಾಗಲಿದೆ. ಆದ್ದರಿಂದ ಚುನಾವಣೆ ನಡೆಯುತ್ತಿದೆ. ಅಧ್ಯಕ್ಷರು ಮತ್ತು ಕಾರ್ಯದರ್ಶಿಯ ಅವಧಿಯೂ ಮುಗಿಯುತ್ತಿದೆ. ಕಾರ್ಯಕಾರಿ ಸಮಿತಿಗೆ ಸದಸ್ಯರು ಆಯ್ಕೆಯಾದ ನಂತರ ಎಲ್ಲಾ ಸದಸ್ಯರು ಮುಂದಿನ ಅವಧಿಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಅವರನ್ನು ಆಯ್ಕೆ ಮಾಡಲಿದ್ದಾರೆ.
Comment here