Publicstory.in
ವಿಜ್ಞಾನ ಪರಿಷತ್ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತುಮಕೂರು ನಗರದ ಬಿಎಚ್.ರಸ್ತೆಯಲ್ಲಿರುವ ಸಿದ್ದಗಂಗಾ ಹೈಸ್ಕೂಲ್ ವಿದ್ಯಾರ್ಥಿ ಸಿದ್ದಾರ್ಥ ಕೆ.ಶೆಟ್ಟಿ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕು ಕಾತ್ರಿಕೆಹಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿ ಪುನೀತ್ ಈ ಸಮಾವೇಶದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.
ಸಿದ್ದಗಂಗಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಸಿದ್ದಾರ್ಥ ಕೆ ಶೆಟ್ಟಿ ತರಕಾರಿಯಿಂದ ಉತ್ಪಾದನೆಯಾಗುವ ಸಿಪ್ಪೆ ಮುಂತಾದ ತ್ಯಾಜ್ಯವನ್ನು ಬೆಳೆಗಳಿಗೆ ಹಾಕಿದರೆ ಅದು ಫಲವತ್ತತೆ ಹೆಚ್ಚುತ್ತದೆ ಎಂಬುದನ್ನು ಸಂಶೋಧಿಸಿದ್ದಾರೆ. ಇವರು ಮಂಡಿಸಿದ ವಿಷಯ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಅದೇ ರೀತಿ ಕಾತ್ರಿಕೆಹಾಳ್ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿ ಪುನೀತ್ ಗ್ರಾಮೀಣ ಪ್ರದೇಶದ ಬಡ ರೈತ ಕುಟುಂಬದಿಂದ ಬಂದಿದ್ದು ಆತ ಮತ್ತೆ ಬಾ ಮುತ್ತುಗ ವಿಷಯ ಕುರಿತು ಸಂಶೋಧನೆ ನಡೆಸಿ ಪ್ಲಾಸಿಟ್ ಗೆ ಬದಲಾಗಿ ಮುತ್ತುಗದ ಎಲೆಯನ್ನು ಬಳಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಮುತ್ತುಗದ ಎಲೆ ಬಳಸಿ ಬಿಸಾಕಿದರೂ ಅದು ಗೊಬ್ಬರವಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಮುತ್ತುಗವನ್ನು ಬಳಸಬಹುದು ಎಂದು ಹೇಳಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳು ತಮ್ಮ ವಿಷಯವನ್ನು ತಿರುವನಂತಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಸಮಾವೇಶದಲ್ಲಿ ಮಂಡಿಸಲಿದ್ದಾರೆ.
ತುಮಕೂರು ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ ಸಮಾವೇಶಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಇವರು ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ವಿಜ್ಞಾನ ಪರಿಷತ್ ಸಮನ್ವಯ ಎಂ.ಎಸ್ ಅಧಿಕಾರಿ ಪರಮೇಶ್ವರಯ್ಯ ತಿಳಿಸಿದ್ದಾರೆ.
ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ ಸಮಾವೇಶಕ್ಕೆ ಕರ್ನಾಟದಿಂದ 10 ಮಂದಿ ಎಸ್ಕಾರ್ಟ್ ಗಳಾಗಿ ಆಯ್ಕೆಯಾಗಿದ್ದು ಅವರ ಪೈಕಿ ತುಮಕೂರು ಜಿಲ್ಲೆಯ ವಿಜ್ಞಾನ ಪರಿಷತ್ ಸಮನ್ವಯ ಅಧಿಕಾರಿ ಪರಮೇಶ್ವರಯ್ಯ ಎಂ.ಎಸ್. ಕೂಡ ಒಬ್ಬರಾಗಿದ್ದಾರೆ.
azithromycin antibiotic class zithromax antibiotic azithromycin uses zithromax z-pak https://azithromaxww.com/ – zithromax covid