Publicstory.in
ತುಮಕೂರು: ರೈತರ ದಿನಾಚರಣೆಯನ್ನು ಸರ್ಕಾರಿ ದಿನಾಚರಣೆಯಾಗಿ ಸರ್ಕಾರ ಆಚರಿಸಬೇಕು. ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ರೈತರ ಬೇಡಿಕೆಗಳನ್ನು ಆಲಿಸುವ, ಕೃಷಿ ನೀತಿ ನಿರೂಪಣೆಗಳಿಗೆ ಚರ್ಚೆ ಮಾಡಬೇಕು ಎಂದು ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್ ಹೇಳಿದರು.ತುಮಕೂರು ನಗರದ ಶ್ರೀ ಶಿರಡಿ ಸಾಯಿ ವೃದ್ಧಾಶ್ರಮ ಆವರಣದಲ್ಲಿ ಭಾರತೀಯ ಕೃಷಿಕ ಸಮಾಜ ತುಮಕೂರು ಜಿಲ್ಲೆ ರವರು ರೈತ ದಿನಾಚರಣೆ ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮಾಜಿ ಪ್ರಧಾನಿಗಳಾದ ಶ್ರೀ ಚರಣ್ ಸಿಂಗ್ ರವರ ಜನ್ಮದಿನದ ಅಂಗವಾಗಿ ರೈತ ದಿನಾಚರಣೆ ಆಚರಿಸುತ್ತೇವೆ. ಅವರು ರೈತರ ಬಗ್ಗೆ ಅಪಾರ ವಾದಂತಹ ಕಾಳಜಿ ಹೊಂದಿದ್ದರು. ಈಗಿನ ಚುನಾಯಿತ ಪ್ರತಿನಿಧಿಗಳು ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬರುತ್ತಾರೆ ಆದ್ರೆ ಅಧಿಕಾರದ ಮದದಲ್ಲಿ ರೈತರನ್ನು ಮರೆತಿದ್ದಾರೆ ಎಂದು ಕಿಡಿಕಾಡಿದರು.
ಸರ್ಕಾರ ರೈತರ ದಿನವನ್ನು ಆಚರಣೆ ಮಾಡುವ ಮೂಲಕ ರೈತರಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು.
ಇವತ್ತಿನ ಪರಿಸ್ಥಿತಿಯಲ್ಲಿ ರೈತರ ಗಳಾದ ನಾವು ಪೂರ್ವಜರು ಅಳವಡಿಸಿಕೊಂಡಿದ್ದ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ನಮ್ಮ ಉದ್ದೇಶ ವಿಷಮುಕ್ತ ಬೆಳೆಗಳನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು.
ವಕೀಲರಾದ ಮಹೇಂದ್ರ ಕೃಷ್ಣಮೂರ್ತಿ ಅವರು ಮಾತನಾಡಿ, ಭಾರತೀಯ ಕೃಷಿಕ ಸಮಾಜ ಪವರ್ ಗ್ರಿಡ್ ವಿಚಾರವಾಗಿ, ಕೈಗಾರಿಕೆಗಳ ವಿಚಾರವಾಗಿ ಬಹಳ ದೊಡ್ಡಮಟ್ಟದ ಹೋರಾಟವನ್ನು ಮಾಡಿದ್ದರು. ಕೆಲವು ಕಾಣದ ಕೈಗಳು ಹೋರಾಟವನ್ನು ಹತ್ತಿಕ್ಕದ್ದವು ಎಂದರು.
ನಾನೊಬ್ಬ ರೈತ ಮುಖಂಡನಾಗಿ ರೈತರ ಚಳವಳಿ ಕಟ್ಟಬೇಕು ಎಂಬುದು ನನ್ನ ತಂದೆಯವರ ಆಸೆಯಾಗಿತ್ತು. 2004ರಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ವಿದ್ಯುತ್ ಕಳ್ಳತನ ಕಾಯ್ದೆಯಡಿ ರೈತರು ಬೋರ್ವೆಲ್ ಗೆ ವಿದ್ಯುತ್ ಸಂಪರ್ಕವನ್ನು ಮಾಡಿದರೆ ಜೈಲು ಶಿಕ್ಷೆಗೆ ಒಳಗಾಗಬೇಕಿತ್ತು. ಈ ವಿಚಾರವಾಗಿ ರೈತರು ಹೋರಾಟವನ್ನು ಮಾಡಿ ಯಶಸ್ವಿಯಾದರು ಎಂದರು.
ನಾನೊಬ್ಬ ಪತ್ರಕರ್ತನಾಗಿ ಯಶಸ್ವಿಯಾದೆ. ಯಾಕೆಂದರೆ ರೈತರ ಕಷ್ಟ ನೋವುಗಳು ನನಗೆ ತಿಳಿದಿತ್ತು. ನೀರಾವರಿ ವಿಚಾರವಾಗಿ ಆಗಿರಬಹುದು, ಕೊಬ್ಬರಿ ಹೋರಾಟಗಳು ಬಹಳಷ್ಟು ವಿಚಾರವನ್ನು ಪತ್ರಿಕೆಯಲ್ಲಿ ಬರೆದಿದ್ದೆ. ಹೊಸ ಬೀಜ ಮಸೂದೆ ಕಾಯ್ದೆ ಸರ್ಕಾರ ತರ್ಲಿಕ್ ಹೊರಟಿದೆ.ಇದು ರೈತರನ್ನು ನಿಧಾನವಾಗಿ ಒಕ್ಕಲೆಬ್ಬಿಸಲಿದೆ ಎಂದರು.
ಬೀಜ ಮಸೂದೆ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆಗಬೇಕಾಗಿತ್ತು. ಬೀಜ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದರೆ ಬೀಜ ಇರೋದಿಲ್ಲ ಭೂಮಿ ನು ಇರೋದಿಲ್ಲ. ಅಂತ ಪರಿಸ್ಥಿತಿ ಬರ್ತಾಯಿದೆ. ರೈತರು ಎಚ್ಚೆತ್ತುಕೊಂಡು ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಪ್ರಗತಿಪರ ರೈತರಾದ ಬಸವರಾಜ್, ವಕೀಲರಾದ ಮಹೇಂದ್ರ ಹಾಗೂ ಪರಿಸರ ಪ್ರೇಮಿ ವೃಕ್ಷಮಿತ್ರ ಸಂಸ್ಥಾಪಕರಾದ ಸಸ್ಯಶಾಸ್ತ್ರ ಮುಖ್ಯಸ್ಥರು ಸಿದ್ದಪ್ಪ ಅವರ ಮಗನಾದ ಅಮೋಘ್ ಅವರನ್ನು ಸನ್ಮಾನಿಸಲಾಯಿತು.
ಭಾರತೀಯ ಕೃಷಿಕ ಸಮಾಜದ ಗೌರವಾಧ್ಯಕ್ಷರಾದ ಬ್ರಹ್ಮಸಂದ್ರ, ಪುಟ್ಟರಾಜು ಉಪಾಧ್ಯಕ್ಷರಾದ ರಾಜಣ್ಣ ಬಿ.ಕೆ., ಸಂಘಟನಾ ಕಾರ್ಯದರ್ಶಿಗಳಾದ ಸಿದ್ದಪ್ಪ, ಗೌಡಿಹಳ್ಳಿ ಸಹಕಾರ್ಯದರ್ಶಿ ಆನಂದ್, ನಿರ್ದೇಶಕರಾದ ಅನು ಕುಮಾರ್, ಪೃಥ್ವಿರಾಜ್ ಗಿರೀಶ್ ವೀರಣ್ಣ, ಈಶ್ವರ್, ಖಜಾಂಚಿ ಧನಂಜಯ ಮತ್ತಿತರರು ಇದ್ದರು.