ತುಮಕೂರು ಲೈವ್

ವರ್ಷದ ದಿನಚರಿ ಹೀಗಿರಲಿ

ತುಳಸೀತನಯ


ಪ್ರತೀ ವರ್ಷ ಡಿಸೆಂಬರ್ ತಿಂಗಳ ಕೊನೆಯ ದಿನಗಳು ಮುಗಿಯುತ್ತ ಬರುತ್ತಿದ್ದ ಹಾಗೆ ಹೊಸ ವರ್ಷ ಬಂತು ಎಂಬ ಹುಮ್ಮಸ್ಸು, ಹೊಸ ಉತ್ಸಾಹ ಮೈಮನ ದುಂಬುತ್ತದೆ. ಪ್ರತಿ ಬಾರಿಯೂ ಹೊಸ ವರ್ಷ ಪ್ರಾರಂಭವಾಗುವ ದಿನಗಳಲ್ಲಿ ಹೊಸದೊಂದು ಏನಾದರೂ ಮಾಡಬೇಕೆಂಬ ತುಡಿತ ಪ್ರತಿಯೊಬ್ಬರಲ್ಲೂ ಹುಟ್ಟಿಕೊಳ್ಳುತ್ತದೆ.

ಗೋಡೆ ಮೇಲಿನ ದಿನಚರಿ(ಕ್ಯಾಲೆಂಡರ್) ಬದಲಾಗುವುದರ ಜೊತೆಗೆ ಒಂದಿಡೀ ವರ್ಷದ ಹಿನ್ನೋಟ, ಮುನ್ನೋಟಗಳ ಚೆಚ್ಚೆಗಳು ಆರಂಭವಾಗತೊಡಗುತ್ತವೆ.

ಮುಂದಿನ 365 ದಿನದಲ್ಲಿ ನಾವು ಸಾಧಿಸಬೇಕಾಗಿರುವುದು ಏನು ಎಂಬ ರೆಸೆಲ್ಯೂಷನ್ ಗಳ ಪಟ್ಟಿ ಯುವ ಜನರು ಓದುವ ಮೇಜಿಗೆ ಬರುತ್ತದೆ. ಹರೆಯ ಹುಕ್ಕುವ ಪಟ್ಟಿ ಇಣುಕಿ ನೋಡಿದರೆ ಏನೇನಿರುತ್ತದೆ ಎಂಬುದು ಕೆದಕಿದಾಗ ಇವೆಲ್ಲಾ ಅಂಶಗಳು ಪ್ರತಿಯೊಬ್ಬರಲ್ಲೂ ಇರಬಹುದು ಎನಿಸುತ್ತದೆ.

ನೀವು ಈ ವರ್ಷ ಏನೆಲ್ಲಾ ಮಾಡೇಕು, ಮಾಡಾರದೆಂಬ ಪಟ್ಟಿಯನ್ನು ಒಂದೊಮ್ಮೆ ಹೋಲಿಸಿ ನೋಡಿದರೆ ಇವೆಲ್ಲಾ ಕಾಣಬಹುದು.

1. ತೂಕ ಕಡಿಮೆ/ ಹೆಚ್ಚು ಮಾಡಿಕೊಳ್ಳುವ ಹಂಬಲ.

2. ಐಪಾಡ್ ಖರೀದಿಸಿ, ಒಳ್ಳೊಳ್ಳೆ ಹಾಡು ಕೇಳಬೇಕು.

3. ನಮ್ಮಲ್ಲಿನ ಡ್ರೆಸಿಂಗ್ ಬದಲಾವಣೆ ಮಾಡುವುದರ ಜೊತೆಗೆ ಸುಧಾರಿಸಬೇಕು.

4. ಜಾತಿ/ ಧರ್ಮಗಳನ್ನೂ ಮೀರಿ ಹೆಚ್ಚೆಚ್ಚು ಸ್ನೇಹಿತರನ್ನ ಸಂಪಾಧಿಸಬೇಕು.

5. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

6. ಸಿಗರೇಟ್, ಮಧ್ಯ ಸೇವನೆಯಂತಹ ದುಶ್ಚಟಗಳಿಂದ ದೂರ ಇರಬೇಕು.

7. ನಮ್ಮನ್ನು ಹೆಚ್ಚು ಗಮನಿಸುವವರನ್ನು ಗುರುತಿಸಬೇಕು. ಅವರ ಮನಸ್ಸಿಗೆ ಘಾಸಿಯಾಗದಂತೆ ವರ್ತಿಸಬೇಕು.

8. ಜನಪ್ರಿಯ ವ್ಯಕ್ತಿಯಾಗಬೇಕು.

9. ಜನರನ್ನು ಜಡ್ಜ್ ಮಾಡುವುದನ್ನು ಬಿಡಬೇಕು. ಗೆಳೆಯರನ್ನು ಅವರು ಇರುವಂತೆ ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.

10. ನನ್ನ ಬಗ್ಗೆ ನಾನೇ ಕೀಳರಿಮೆ ಮಾಡಿಕೊಳ್ಳುವುದು, ಬೈದುಕೊಳ್ಳುವುದನ್ನು ಬಿಡಬೇಕು.

11. ಯೋಗ್ಯ ಗರ್ಲ್ ಫ್ರೆಂಡ್/ ಬಾಯ್ ಫ್ರೆಂಡ್ ಆಯ್ಕೆ ಮಾಡಿಕೊಳ್ಳಬೇಕು.

12. ರಾತ್ರಿ ಹೊತ್ತು ಬೊಬೈಲ್ ಆಫ್ ಮಾಡಿ ನಿಶ್ಚಿಂತೆಯಾಗಿರುವುದು.

13. ಹಣ ಉಳಿಸಲು ಕೂಡಿಡುವುದನ್ನು ರೂಢಿಸಿಕೊಳ್ಳಬೇಕು.

14. ಬಾಲ್ಯದ ಸ್ನೇಹಿತರನ್ನು ಹುಡುಕಿ ಭೇಟಿಯಾಗುವುದು.

15. `ನಾಳೆ ಮಾಡೋಣ ಬಿಡು’ ಎಂಬ ಕೆಟ್ಟ ಮನಸ್ಥಿತಿಯಿಂದ ಹೊರಗೆ ಬರುವುದು.

16. ಇಂಗ್ಲೀಷ್, ಹಿಂದಿ ಚೆನ್ನಾಗಿ ಓದಿ ಕರಗತ ಮಾಡುವುದು.

17. ಮೊಬೈಲ್ ಗಳಲ್ಲಿ ಗೇಮ್ ಆಡುವುದು ನಿಲ್ಲಿಸಿ ದೈಹಿಕ ಶ್ರಮದ ಆಟಗಳ ಕಡೆ ಗಮನ ಹರಿಸುವುದು.

18. ಅಪ್ಪ, ಅಮ್ಮನೊಂದಿಗೆ ಹೆಚ್ಚು ಸಮಯ ಕಳೆಯೋದು. ಅವರ ಭಾವನೆಗಳಿಗೆ ಬೆಲೆಕೊಟ್ಟು ಅದರಂತೆ ನಡೆದುಕೊಳ್ಳುವುದು.

19. ಮೊಬೈಲ್, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್‌ ನಲ್ಲಿರುವ ಪ್ರತಿಯೊಂದನ್ನೂ ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳುವುದು.

20. ಯೋಗಾ, ಜಿಮ್, ವಾಕಿಂಗ್ ಮಾಡುವುದನ್ನು ಆರಂಭಿಸಿ ಸೋಮಾರಿತನ ದೂರ ಇಡುವುದು.

21. ಮೂಗಿನಲ್ಲಿ ಬೆರಳಿಡುವುದನ್ನ, ಉಗುರು ಕಚ್ಚುವುದನ್ನ, ಸದಾ ಮೊಬೈಲ್ ನೋಡುವುದನ್ನು ಬಿಡುವುದು.

22. ಅಡುಗೆ ಕಲಿಯೋದು.

23. ಶೀಘ್ರ ಕೋಪಕ್ಕೆ ಕಡಿವಾಣ ಹಾಕಿ ಸಮಾಧಾನ ಚಿತ್ತತೆ ಬೆಳೆಸಿಕೊಳ್ಳುವುದು.

24. ಹೊಸಹೊಸ ಅವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಸದಾ ಕ್ರಿಯಾಶೀಲವಾಗಿರುವುದು.

25. ಹಳೇ ಗರ್ಲ್ ಫ್ರೆಂಡ್ಸ್/ ಬಾಯ್ ಫ್ರೆಂಡ್ಸ್ ಗಳ ನೆನಪಿನಿಂದ ದೂರ ಉಳಿಯುವುದು.

26. ತಿಂಗಳಿಗೆ ಒಂದು ದಿನವಾದರೂ ಮೊಬೈಲ್ ಬಳಸದೇ ಇರುವುದು.

27. ಈ ವರ್ಷದ ಪರೀಕ್ಷೆಗಳಲ್ಲಿ ಶಿಸ್ತು ಬದ್ಧವಾಗಿ ಓದಿ ಹೆಚ್ಚು ಅಂಕ ಪಡೆಯುವುದು.

28. ಪದವಿ ಮುಗಿದ ಮೇಲೆ ಕೆಲಸ ಹುಡುಕಿ ದುಡಿದು ಮನೆ ಕಡೆ ನೋಡಿಕೊಳ್ಳುವುದು.

ಹೀಗೆ ಹತ್ತು ಹಲವು ಆಲೋಚನೆಗಳು, ಯೋಜನೆಗಳನ್ನು ಪ್ರತಿಯೊಬ್ಬರು ಹೊಸ ವರ್ಷದ ಹೊಸ್ತಿಲಲ್ಲಿ ಹಾಕಿಕೊಳ್ಳುವುದು ಸಹಜ. ಆದರೆ ಅವುಗಳಲ್ಲಿ ಅದೆಷ್ಟು ಪರಿಪೂರ್ಣಗೊಳ್ಳುವವು ಎಂಬುದು ಮಾತ್ರ ಅವರವರ ಭಾವಕ್ಕೆ ಬಿಟ್ಟಿದ್ದು. ಇಂತಹ ಯೋಜನೆಗಳನ್ನು ರೂಪಿಸಿಕೊಳ್ಳುವುದರಲ್ಲಿ ಯಾರೂ ಹೊರತಾಗಿಲ್ಲ.

Comment here