Saturday, December 21, 2024
Google search engine
Homeತುಮಕೂರ್ ಲೈವ್ವಿದೇಶಿ ಹಾಲು: ರೈತರು ಗರಂ

ವಿದೇಶಿ ಹಾಲು: ರೈತರು ಗರಂ

ತೆರಿಗೆರಹಿತ ವಿದೇಶಿ ಹಾಲು ಮತ್ತು ಹಾಲು ಉತ್ಪನ್ನಗಳ ಆಮದಿಗೆ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ಮುಕ್ತ ಆರ್ಥಿಕ ಧೋರಣೆಗಳ ಜಾರಿಯ ಭಾಗವಾಗಿ ಮುಂದಿನ ತಿಂಗಳ ಆರಂಭದಲ್ಲಿ ಬ್ಯಾಂಕಾಕ್‍ನಲ್ಲಿ ನಡೆಯುವ ಸಭೆಯಲ್ಲಿ ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದಕ್ಕೆ ಭಾರತ ಸೇರಿದಂತೆ 16 ರಾಷ್ಟ್ರಗಳು ಸಹಿ ಹಾಕುವುದರೊಂದಿಗೆ ಬರಲಿವೆ. ನೋಟು ಅಮಾನಿಕರಣ, ಅವೈಜ್ಞಾನಿಕ ಜಿಎಸ್‍ಟಿ, ನೆರೆ ಹಾವಳಿ ಬರದಿಂದ ರೈತ ಮತ್ತು ಕೃಷಿಕೂಲಿಕಾರರು ಬೀದಿಪಾಲಾಗಿದ್ದಾರೆ. ರೈತರಿಗೆ ಹಸುಗಳ ಸಾಕಾಣಿಕೆಯ ಹೈನೋದ್ಯಮ ಸಣ್ಣ ಆದಾಯದೊಂದಿಗೆ ಸಹಕಾರಿಯಾಗಿತ್ತು. ಇದನ್ನು ಸಹ ಪ್ರಧಾನಿಯವರು ಕಿತ್ತುಕೊಳ್ಳುವ ನೀತಿಗೆ ವಿರೋಧ ವ್ಯಕ್ತಪಡಿಸಿದರು..

ನಮ್ಮ ಹಾಲಿನ ಶೇಕಡ 50ಕ್ಕಿಂತ ಕಡಿಮೆ ದರದಲ್ಲಿ ನಮ್ಮಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಸಿದ್ದವಾಗುತ್ತಿದೆ. ಇಂತಹದ್ದೇ ಇನ್ನು ಹಲವು ದೇಶಗಳು ನಮ್ಮ ಮಾರುಕಟ್ಟೆಗೆ ಲಗ್ಗೆ ಹಾಕಿ ದೇಶೀಯ ಉತ್ಪಾದನೆಯನ್ನು ನಾಶ ಮಾಡಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆಯಲು ಅವಕಾಶ ಕೊಡದಂತೆ ದೇಶದ ರೈತರ ಬದುಕನ್ನು ಉಳಿಸಲು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ರಾಜ್ಯ ರೈತ ಸಂಘ ಅಧ್ಯಕ್ಷ ಎ.ಗೋವಿಂದರಾಜು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ, ಎಐಕೆಎಸ್‍ಎಸ್‍ಸಿ ಕಾರ್ಯದರ್ಶಿ ಸಿ.ಯತಿರಾಜು, ಎಐಕೆಎಸ್‍ಎಸ್‍ಸಿ ಸಂಚಾಲಕ ಬಿ.ಉಮೇಶ್, ಮುಖಂಡ ಎಚ್.ಎಂ. ರವೀಶ್, ರೈತರಾದ ಪಾಪಣ್ಣ, ಅರುಣ್‍ಕುಮಾರ್, ಚಿಕ್ಕಬೋರೇಗೌಡ, ಶಬ್ಬೀರ್ ಪಾಷ, ಈಶ್ವರಪ್ಪ, ಕೆ.ಎಸ್.ವಿ.ಗೌಡ, ವೆಂಕಟೇಗೌಡ, ಮೊದಲಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?