ತುಮಕೂರ್ ಲೈವ್

ನೀಲಿಬಣ್ಣದ ಮೊಬೈಲ್ ನಲ್ಲಿ ಪ್ರಾಂಶುಪಾಲ ವೀಕ್ಷಿಸುವುದಾದರೂ ಏನು?

ಪ್ರಾಂಶುಪಾಲ  ಕಾಲೇಜಿಗೆ ಬರೋದೇ ಇಲ್ಲ. ಬೇಕೆಂದಾಗ ಬಂದರೂ ಮೊಬೈಲ್ ವೀಕ್ಷಣೆಯಲ್ಲಿ ಮಗ್ನರಾಗುತ್ತಾರೆ ಎಂಬುದು ವಿದ್ಯಾರ್ಥಿಗಳ ಆರೋಪ.

ಮಕ್ಕಳಿಗೆ ಸಂಸ್ಕಾರ ಕಲಿಸಬೇಕಾದವರು ಸದಾ ಮೊಬೈಲ್ ನಲ್ಲಿ ನೋಡಬಾರದ್ದು ನೋಡಿಕೊಂಡು ಕೂರುತ್ತಾರೆ.  ಇಷ್ಟ ಬಂದಾಗ ಬರುವ ಈತನಿಂದ ಕಾಲೇಜಿನ ವಾತಾವರಣ ಹದಗೆಟ್ಟಿದೆ. ಶೌಚಾಲಯದಲ್ಲಿ ನೀರಿಲ್ಲ, ಸ್ವಚ್ಚತೆ ಇಲ್ಲದೆ ದುರ್ನಾತ ಬೀರುತ್ತಿದೆ. ಕುಡಿಯಲು ನೀರಿಲ್ಲ, ಕಸದ ತೊಟ್ಟಿಯಂತಾಗಿರುವ ತರಗತಿ ಕೊಠಡಿಗಳು. ಇಷ್ಟೆಲ್ಲ ಅವ್ಯವಸ್ಥೆಯ ನಡುವೆ ತಾನಾಯಿತು, ನೀಲಿ ಬಣ್ಣದ ಮೊಬೈಲ್ ಆಯಿತು ಎಂಬಂತೆ ಈತ ಕೂತಿರುತ್ತಾನೆ ಎಂದು ತುಮಕೂರು ಜಿಲ್ಲೆ ಪಾವಗಡ  ವೈ.ಇ.ಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ವಿದ್ಯಾರ್ಥಿ ವೇತನ, ಘಟಿಕೋತ್ಸವ ಪ್ರಮಾಣಪತ್ರ, ವರ್ಗಾವಣೆ ಪ್ರಮಾಣಪತ್ರ ಇತ್ಯಾದಿಗಳನ್ನು ಪಡೆಯಲು ಪ್ರಾಂಶುಪಾಲರ ಸಹಿ ಬೇಕು. ಆದರೆ ಪ್ರಾಂಶುಪಾಲ  ಸಕಾಲಕ್ಕೆ ಕಾಲೇಜಿಗೆ ಬರುವುದಿಲ್ಲ. ಸತತ ಮೂರರಿಂದ ನಾಲ್ಕು ದಿನ ಕಾಲೇಜಿಗೆ ಬರುವುದಿಲ್ಲ ಈ ಬಗ್ಗೆ ಕೇಳಿದರೆ ಬೇ ಜವಬ್ಧಾರಿ ಉತ್ತರ ನೀಡುತ್ತಾರೆ. ಇತರೆ ಉಪನ್ಯಾಸಕರನ್ನು ಸಹಿ ಹಾಕುವಂತೆ ಕೇಳಿದರೆ ಪ್ರಭಾರ ವಹಿಸಿಲ್ಲ ಹೀಗಾಗಿ ಪ್ರಾಂಶುಪಾಲರ ಸಹಿ ಹಾಕಲಾಗುವುದಿಲ್ಲ ಎನ್ನುತ್ತಾರೆ. ಇದರಿಂದ ಹತ್ತಾರು ಬಾರಿ ಕಾಲೇಜಿಗೆ ಅಲೆಯುಬೇಕಿದೆ ಎಂಬುದು ವಿದ್ಯಾರ್ಥಿಗಳ ಅಳಲು.

ಸಾರ್ವಜನಿಕ ಹಿತದೃಷ್ಟಿಯಿಂದ ಕಾಲೇಜು ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳು ಪ್ರಾಂಶುಪಾಲ  ನಾರಾಯಣ ಅವರನ್ನು ಹೊಸದುರ್ಗ ಕಾಲೇಜಿಗೆ ನಿಯೋಜನೆ  ಮಾಡಿ ಆದೇಶಿಸಿದ್ದಾರೆ. ಆದರೆ ಇವರು  ಕಾಲೇಜಿಗೂ ಬಾರದೆ,  ಪ್ರಭಾರ ವಹಿಸಿಕೊಡದ ಕಾರಣ ಜಂಟಿ ನಿರ್ದೇಶಕರು ಕೂಡಲೇ ಬೇರೊಬ್ಬರಿಗೆ ಪ್ರಭಾರ ವಹಿಸಿಕೊಟ್ಟು ನಿಯೋಜಿತ ಕಾಲೇಜಿಗೆ ಹೋಗಿ ವರದಿ ಮಾಡಿಕೊಳ್ಳಿ ಎಂದು ಮತ್ತೊಂದು ಆದೇಶ ನೀಡಿದ್ದಾರೆ. ಆದರೆ ಪ್ರಾಂಶುಪಾಲ ಇಲಾಖೆಯ ಆದೇಶಗಳನ್ನು ಪಾಲಿಸದೆ  ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ವಿದ್ಯಾರ್ಥಿನಿ ಅನಿತಾ, ಲಕ್ಷ್ಮಿ, ಮಮತಾ ಇತರರು ಅಳಲನ್ನು ತೋಡಿಕೊಂಡರು.

ಕಾಲೇಜಿನ ಪ್ರಾಂಶುಪಾಲರನ್ನು ಭೇಟಿ ಮಾಡಲು ಕಾಲೇಜಿಗೆ  ಆಗಮಿಸಿದರೂ ಅವರು ಸಿಗುತ್ತಿಲ್ಲ. ಕಾಲೇಜಿನ ಆವರಣ, ತರಗತಿ ಕೊಠಡಿಗಳಲ್ಲಿ ಕಸದ ರಾಶಿ ಬಿದ್ದಿದೆ. ಶೌಚಾಲಯಗಳಲ್ಲಿ ನೀರಿಲ್ಲ ಸ್ವಚ್ಚತೆ ಕಾಣದೆ ದುರ್ಗಂಧ ಬೀರುತ್ತಿದೆ.  ಕುಡಿಯುವ ನೀರಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇಷ್ಟೆಲ್ಲ ಅವ್ಯವಸ್ಥೆ ಇದ್ದರೂ ಪ್ರಾಂಶುಪಾಲ ನಿರ್ಲಕ್ಷ  ವಹಿಸುತ್ತಿದ್ದಾರೆ. ಸದಾ ಚೆಕ್ ಪುಸ್ತಕವನ್ನು ಜೇಬಿನಲ್ಲಿಟ್ಟುಕೊಂಡು ಇಷ್ಟ ಬಂದಂತೆ ಕಾಲೇಜಿನ ಹಣ ಡ್ರಾ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳಿವೆ. ವಾರಕ್ಕೊಮ್ಮೆ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವ ಇವರು ವಿದ್ಯಾರ್ಥಿಗಳಿಗೆ  ಏನು ಕಲಿಸುತ್ತಾರೆ. ಈ ಬಗ್ಗೆ ಜಂಟಿ ನಿರ್ದೇಶಕರು, ನಿರ್ದೇಶಕರು, ಆಯುಕ್ತರಿಗೆ ದೂರವಾಣಿ ಕರೆ ಮಾಡಿ ದೂರು ನೀಡುತ್ತೇನೆ ಎಂದು ತುಮಕೂರು ವಿಶ್ವವಿದ್ಯಾಲಯ ಮಾಜಿ ಸಿಂಡಿಕೇಟ್ ಸದಸ್ಯ ಪಿ.ಗೋಪಾಲ್ ತಿಳಿಸಿದರು.

Comment here