Publicstory
ಶಿರಾ: ಆಮ್ ಆದ್ಮಿ ಪಾರ್ಟಿಯ ಸದಸ್ಯತ್ವ ಅಭಿಯಾನಕ್ಕೆಶಿರಾ ನಗರದ ಮಂಗಳವಾರ ಸಂತೆಯಲ್ಲಿ ಆಪ್ತ ಸ್ಪಂದನೆ ಸಿಕ್ಕಿದೆ ಎಂದು ತಾಲ್ಲೂಕು ಆಮ್ ಆದ್ಮಿ ಪಾರ್ಟಿ ಹರ್ಷ ವ್ಯಕ್ತಪಡಿಸಿದೆ.
ನಗರದ ಎಪಿಎಂಸಿ ಮಾರುಕಟ್ಟೆ, ಐಬಿ ಸರ್ಕಲ್, ರಂಗನಾಥ ಕಾಲೇಜು ಸರ್ಕಲ್, ಬಸ್ ಸ್ಟಾಂಡ್ ಹಾಗೂ ಮಲ್ಲಿಕಾ ರಹಾನ್ ದರ್ಗಾ ಗೇಟ್ ನಲ್ಲಿ ಎಎಪಿ ಸದಸ್ಯತ್ವ ಅಭಿಯಾನ ನಡೆಸಿದ ನಂತರ ತಾಲ್ಲೂಕು ಆಮ್ ಆದ್ಮಿ ಪಕ್ಷ ಪತ್ರಿಕಾ ಹೇಳಿಕೆ ನೀಡಿದೆ.
ಸ್ವಯಂ ಆಸಕ್ತಿಯಿಂದ ನೂರಾರು ಜನರು ಸದಸ್ಯತ್ವ ನೋಂದಣಿ ಮಾಡಿಕೊಂಡಿದ್ದಲ್ಲದೆ, ಜೆಡಿಎಸ್ ಕಾಂಗ್ರೆಸ್ ಬಿಜೆಪಿಯೆಂಬ ಜೆಸಿಬಿ ಪಕ್ಷಗಳಿಗೆ ಆಮ್ ಆದ್ಮಿ ಪಕ್ಷವೇ ಪರ್ಯಾಯ ಎಂದು ಘೋಷಿಸಿದರು.
ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತಾಲ್ಲೂಕಿನಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ತಳಮಟ್ಟದಲ್ಲಿ ಕಟ್ಟಲು ಸಂಕಲ್ಪ ತೊಡುವುದಾಗಿ ನೂತನ ಆಮ್ ಆದ್ಮಿ ಪಾರ್ಟಿ ಸದಸ್ಯರು ಭರವಸೆ ನೀಡಿದರು.
ಎಎಪಿಯ ಸದಸ್ಯತ್ವ ಅಭಿಯಾನದಲ್ಲಿ ಶಿರಾ ವಿಧಾನಸಭಾ ಕ್ಷೇತ್ರದ ವೀಕ್ಷಕ ಅಂಕಸಂದ್ರ ಪ್ರೇಮ ಕುಮಾರ್, ಜಿಲ್ಲಾ ಮಾಧ್ಯಮ ಸಂಯೋಜಕ ನಾಗೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಶಶಿಕುಮಾರ್ ಆರ್, ಕಾರ್ಯದರ್ಶಿ ಸಜೀರ್, ತಾಲ್ಲೂಕು ಮಾಧ್ಯಮ ಸಂಯೋಜಕ ಗೋಮಾರದಹಳ್ಳಿ ಪಿ ಮಂಜುನಾಥ್, ಸಾಧಿಕ್, ಉತ್ಪುಲ್ಲಾ ಮತ್ತಿತರರು ಪಾಲ್ಗೊಂಡಿದ್ದರು.