ತುಮಕೂರ್ ಲೈವ್

ಶಿರಾದಲ್ಲಿ ಡಿ.ಕೆ.ಶಿಗೆ ಅದ್ಧೂರಿ ಸ್ವಾಗತ

ತುಮಕೂರು:
ಕಳೆದ 55 ದಿನಗಳ ಹಿಂದೆ ಶಾಸಕ ಡಿ.ಕೆ.ಶಿವಕುಮಾರ್ ಇಡಿ ಬಂಧನಕ್ಕೆ ಒಳಗಾದ ಸಂದರ್ಭದಲ್ಲಿ  ಜಿಲ್ಲೆಯ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧಿಪತಿ ನಂಜಾವಧೂತ ಸ್ವಾಮೀಜಿ ಬಂಧನ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಯಲ್ಲಿ ಜೈಲಿನಿಂದ  ಜಾಮೀನು ಪಡೆದು ಹೊರಬಂದಿರುವ ಡಿ.ಕೆ.ಶಿ ಭಾನುವಾರ ಸ್ವಾಮೀಜಿ ಭೇಟಿ ಮಾಡಲು ಬಂದರು..
ಶಿವಕುಮಾರ್‌ ಅವರು 7.50ರ ಹೊತ್ತಿಗೆ ಶಿರಾ ಪಟ್ಟಣಕ್ಕೆ ಬಂದರು. ಕಾಂಗ್ರೆಸ್‌ ಮುಖಂಡ ಟಿ.ಬಿ.ಜಯಚಂದ್ರ ಅವರು ಶಿವಕುಮಾರ್‌ ಅವರನ್ನು ಸ್ವಾಗತಿಸಿದರು.
ಸಾವಿರಾರು ಜನ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು
ಶಿರಾ ಶಾಸಕ ಬಿ.ಸತ್ಯನಾರಾಯಣ, ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅವರು ಶಿವಕುಮಾರ್‌ ಅವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ  ಉಬಯಕುಶಲೋಪರಿ ವಿಚಾರಿಸದರು.
ಡಿ.ಕೆ.ಶಿವಕುಮಾರ್‌ ಅವರನ್ನು ಬರಮಾಡಿಕೊಳ್ಳಲು ಅಭಿಮಾನಿಗಳು ನಗರದ ವೃತ್ತದಲ್ಲಿ ಸಂಜೆ 5 ಗಂಟೆಯಿಂದಲೂ ಕಾಯುತ್ತಿದ್ದರು.
ಡಿ.ಕೆ.ಶಿ. ಬಂಧನವಾದಾಗ ಒಕ್ಕಲಿಗ ಸಮುದಾಯ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತ್ತು. ಆ ಪ್ರತಿಭಟನೆಯಲ್ಲಿ ನಂಜಾವಧೂತ ಸ್ವಾಮೀಜಿ ಪ್ರಮುಖ ಪಾತ್ರ ವಹಿಸಿ ಬಂಧನದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಡಿ.ಕೆ.ಶಿ ಶೀರಾ ಪಟ್ಟಣಕ್ಕೆ ಬಂದ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಬಾವುಟಗಳ ಹಾರಾಟ ಜೋರಾಗಿತ್ತು. ೆರಡೂ ಪಕ್ಷದ ಕಾರ್ಯಕರ್ತರು, ಮುಖಂಡರಿಂದ ಡಿ.ಕೆ.ಶಿ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್ ಗಳು ಪಟ್ಟಣದ ತುಂಬಾ ರಾರಾಜಿಸುತ್ತಿದ್ದವು.
ಪಟ್ಟಣದಲ್ಲಿ ಅದ್ದೂರು ಮೆರವಣಿಗೆ ನಡೆದ ನಂತರ ಡಿ.ಕೆ.ಶಿವಕುಮಾರ್ ಹಾಗೂ ಮುಖಂಡರು ಪಟ್ಟಣನಾಯಕನಹಳ್ಳಿ ಗುರುಗುಂಡಬ್ರಹ್ಮೇಶ್ವರ ಮಠಕ್ಕೆ ಭೇಟಿ ನೀಡಿ ನಂಜವಾಧೂತ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಕೆಲಕಾಲ ಸ್ವಾಮೀಜಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿದ್ದರು.

Comment here