Publicstory. in
ಶಿರಾ: ದಿನದಿಂದ ದಿನಕ್ಕೆ ರಂಗೇರುತ್ತಿರುವ ಶಿರಾ ಉಪಚುನಾವಣೆಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಸೊಸೆ ರಂಜಿತಾ ಸಂತೋಷ್ ಹೆಂಗಳೆಯರ ಗಮನ ಸೆಳೆಯುತ್ತಿದ್ದಾರೆ.
ಮಹಿಳೆಯರ ಗುಂಪು ಕಟ್ಟಿಕೊಂಡು ಮನೆ ಮನೆ ಸುತ್ತಿರುವ ರಂಜಿತಾ ಅವರು ಮಹಿಳೆಯರು ಸಿಕ್ಕ ತಕ್ಷಣ ಮೂರು ವರ್ಷದ ಹಿಂದಿನ ಕಷ್ಟದ ದಿನಗಳಿಗೆ ಕರೆದುಕೊಂಡು ಹೋಗಿ ಬಿಡುತ್ತಾರೆ.
ಶಿರಾ ನಗರದಲ್ಲಿ ವಿಪರೀತ ನೀರಿನ ಸಮಸ್ಯೆಗೆ ಮಹಿಳೆಯರು ಹೈರಾಣಾಗಿದ್ದರು. ಆಗಿನ ಸಮಸ್ಯೆ ನೆನಪು ಮಾಡಿಕೊಂಡರೇನೆ ಮೈಯೆಲ್ಲ ನಡುಗುತ್ತದೆ. ಒಂದು ಕೊಡ ನೀರಿಗೆ ಪರಿತಪಿಸುತ್ತಿದ್ದ ದಿನಗಳು ಬದುಕನ್ನು ಮಹಿಳೆಯರು ಮರೆಯಲು ಹೇಗೆ ಸಾಧ್ಯ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತೆ. ಅದನ್ನೇ ರಂಜಿತಾ ಅವರು ಚುನಾವಣಾ ಅಸ್ತ್ರವಾಗಿಸಿದ್ದಾರೆ. ನೀರು ಕೊಟ್ಟವರನ್ನು ಮರೆಯಲು ಹೇಗೆ ಸಾಧ್ಯ ಎಂದು ಹೋದಕಡೆಲೆಲ್ಲ ಮಹಿಳೆಯರು ಕೇಳುತ್ತಾರೆ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತೆ ರೇಖಾ.
ಜಯಚಂದ್ರ ಸರ್ ಅವರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಭಗೀರಥರು. ಅಷ್ಟೇ ಅಲ್ಲ ಶಿಕ್ಷಣ, ಆರೋಗ್ಯ, ಕೈಗಾರಿಕೆಗಳನ್ನು ಶಿರಾಗೆ ತಂದಿದ್ದಾರೆ. ಅವರು ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಶಿರಾ ಜನರಿಗೆ ಗೊತ್ತು.
ಷಣ್ಮುಖಪ್ಪ, ಕಾಂಗ್ರೆಸ್ ಹಿರಿಯ ಮುಖಂಡ
ಹನಿ ನೀರಿಗೂ ಮಹಿಳೆಯರು ಕಣ್ಣೀರು ಹಾಕುತ್ತಿದ್ದರು. ಆ ಸಮಸ್ಯೆ ಬಗೆಹರಿಸಿದರು. ಮಹಿಳೆಯರಿಗೆ ಅದನ್ನು ನೆನಪು ಮಾಡಿಕೊಡುವ ಕೆಲಸ ಮಾಡುತ್ತಿದ್ದೇವೆ. ಯಾರ ಮನೆಗೆ ಹೋದರೂ ಅದನ್ನೆ ನೆನಪು ಮಾಡಿಕೊಳ್ಳುತ್ತಾರೆ. ನೀರಿನ ವಿಷಯವನ್ನೇ ಮಹಿಳೆಯರ ಬಳಿ ಪ್ರಧಾನವಾಗಿ ಪ್ರಸ್ತಾಪಿಸಿ ಓಟು ಕೇಳುತ್ತಿದ್ದೇವೆ ಎನ್ನುತ್ತಾರೆ ಕಾಂಗ್ರೆಸ್ ನ ಹಿರಿಯ ಮುಖಂಡ ಷಣ್ಮುಖಪ್ಪ.
ಮಹಿಳಾ ಮುಖಂಡರಾದ ಸುಮಾ ಹೊನ್ನೇಶ್, ರೇಖಾ, ಮಂಜುಳಾ ಮತ್ತಿತರರು ರಂಜಿತಾ ಅವರಿಗೆ ಸಾಥ್ ನೀಡಿದ್ದಾರೆ .