ತುಮಕೂರ್ ಲೈವ್

ಸಚಿವ ಸ್ಥಾನದಿಂದ ಮಾಧುಸ್ವಾಮಿ ಕೈ ಬಿಡಲು ಆಗ್ರಹ: ಹುಳಿಯಾರು ಬಂದ್ ಯಶಸ್ವಿ

ಹುಳಿಯಾರು; ಈಶ್ವರಾನಂದಪುರಿ ಸ್ವಾಮಿಗಳ ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಕುರುಬ ಸಮುದಾಯ ಮತ್ತು ಇತರೆ ಸಂಘಟನೆಗಳ ಕರೆ ನೀಡಿದ್ದ ಹುಳಿಯಾರ್ ಬಂದ್ ಯಶಸ್ವಿಯಾಗಿದೆ.

ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ನೂರಾರು ಮಂದಿ ಕುರುಬರು ಕಾನೂನು ಸಚಿವರು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.

ಬಂದ್ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತವಾಗಿತ್ತು. ಬಸ್ ಸಂಚಾರ ಸ್ಥಬ್ದವಾಗಿತ್ತು. ಕನಕ ವೃತ್ತ ನಾಮಕರಣ ಮಾಡುವ ವಿಚಾರದಲ್ಲಿ ಎದ್ದ ವಿವಾದ ದ ಹಿನ್ನೆಲೆಯಲ್ಲಿ ಇಂದು ಬಂದ್ ನಡೆಸಿ ಮಾಧುಸ್ವಾಮಿ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.

ಕುರುಬ ಸಮುದಾಯದ ಸ್ವಾಮೀಜಿಗೆ ಅವಮಾನ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಯಿತು. ಸಚಿವರು ಕ್ಷಮೆ ಕೇಳಬೇಕೆಂಬ ಕೂಗು ಬಲವಾಗಿ ಕೇಳಿಬಂತು.

ಮಾಜಿ ಶಾಸಕ ಸುರೇಶ್ ಬಾಬು ಮಾತನಾಡಿ, ಸಚಿವರ ಉದ್ದಟತನವೇ ಪ್ರತಿಭಟನೆಗೆ ಕಾರಣ. ಶಾಂತಿ ಸಭೆ ಕರೆ ಗಲಭೆಯನ್ನು ಹುಟ್ಟುಹಾಕಿದ್ದಾರೆ. ಗುರುಗಳು ಮತ್ತು ಜನಪ್ರತಿನಿಧಿಗಳನ್ನು ತುಚ್ಛವಾಗಿ ಕಂಡ ಪರಿಣಾಮ ಸಚಿವರ ವಿರುದ್ಧ ಜನ ಬೀದಿಗೆ ಬಂದಿದ್ದಾರೆ. ಸಭೆಯಲ್ಲೇ ಎಲ್ಲರನ್ನು ಸಮಾಧಾನ ಮಾಡಿದ್ದರೆ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಇನ್ನು ಮುಂದಾದರೂ ಸಚಿವರು ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಕಾನೂನು ಪಾಲಕರೇ ದುರ್ವತನೆಯಿಂದ ನಡೆದುಕೊಂಡರೆ ಸಾಮಾನ್ಯರು ಏನು ಮಾಡಬೇಕು. ಸಂವಿಧಾನದ ಹೆಸರರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಈಗ ತಾರತಮ್ಯ ಮಾಡುವುದು ಸರಿಯಲ್ಲ. ಸಮ್ಮ ಸಮುದಾಯದ ಸ್ವಾಮೀಜಿಗೆ ಅವಮಾನ ಮಾಡಿದ್ದು ನೋವಾಗಿದೆ. ಹೀಗಾಗಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಬಸವಣ್ಣ ಮತ್ತು ಕನಕದಾಸರು ಅನಿಷ್ಠ ಜಾತಿಪದ್ದತಿ ವಿರುದ್ಧ ಪ್ರತಿಭಟನೆ ನಡೆಸಿದರು.

ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯದೆ ಜಾತಿಗೆ ಅಂಟಿಕೊಂಡು ಸಚಿವರು ಕೂತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರರು.

ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಮ್ಮ ಸ್ಥಾನವನ್ನು ಅರಿತು ಮಾತನಾಡಬೇಕು. ಸಾಮಾನ್ಯನಂತೆ ಮಾಡಿ ಸಮಾಜದಲ್ಲಿ ಪ್ರಚೋದನೆ ನೀಡಿದರೆ ಜನ ಸುಮ್ಮನೆ ಕೂರುವುದಿಲ್ಲ. ಇದನ್ನು ಮಾಧುಸ್ವಾಮಿ ಅವರು ಅರ್ಥ ಮಾಡಿಕೊಳ್ಳಬೇಕು. ಸಚಿವರ ಧೋರಣೆಯಿಂದಾಗಿ ಮುಖ್ಯಮಂತ್ರಿಗಳು ಕ್ಷೇಮೆ ಕೇಳಿದ್ದಾರೆ. ಅವರು ಕ್ಷಮೆ ಕೇಳುವ ಬದಲಿಗೆ ಸಚಿವರೇ ಕ್ಷಮೆ ಕೇಳಬೇಕು ಕುರುಬ ಸಮುದಾಯದ ಮುಖಂಡು ಆಗ್ರಹಿಸಿದರು

Comment here