ತುಮಕೂರ್ ಲೈವ್

ಸರಗಳವು ಆರೋಪಿ ಬಂಧನ

ತುಮಕೂರು: ಜಿಲ್ಲೆಯ ಪಾವಗಡ,  ಆಂಧ್ರದ ಮಡಕಶಿರಾದಲ್ಲಿ ಸರಗಳವು ಮಾಡಿರುವ ಆರೋಪದಡಿ     ಪೊಲೀಸರು ಮಂಗಳವಾರ ಆರೋಪಿಯನ್ನು ಬಂಧಿಸಿದ್ದಾರೆ.

ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿಯ ಬಾಬು(33) ಆರೋಪಿ. ಬಂಧಿತನಿಂದ  ಸುಮಾರು 2 ಲಕ್ಷ ಮೌಲ್ಯದ 60 ಗ್ರಾಂ ಚಿನ್ನದ ಸರಗಳು, ಕೃತ್ಯಕ್ಕೆ ಬಳಸಿದ್ದ   ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯನ್ನು ಪೊಲೀಸರು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್, ಡಿವೈಎಸ್ ಪಿ ಎಸ್.ಪಿ.ಧರಣೇಶ್ ಮಾರ್ಗದರ್ಶನದಲ್ಲಿ,   ಸರ್ಕಲ್ ಇನ್ ಸ್ಪೆಕ್ಟರ್ ಸಿ.ವೆಂಕಟೇಶ್, ಸಬ್ ಇನ್ ಸ್ಪೆಕ್ಟರ್ ರಾಘವೇಂದ್ರ, ಎ.ಎಸ್.ಐ ರಾಮಚಂದ್ರ, ಸಿಬ್ಬಂದಿ ಸೋಮಶೇಖರ, ಶ್ರೀನಿವಾಸ್, ನವೀನ್, ಭರತ್, ಶಶಿಕುಮಾರ್, ರಾಮಕೃಷ್ಣ, ಗೋಪಾಲಕೃಷ್ಣ, ಸುಜಾತ, ಜಾವಿದ್ ಶ್ರೀನಿವಾಸ ಪತ್ತೆ ಕಾರ್ಯಕ್ಕೆ ಶ್ರಮಿಸಿದ್ದಾರೆ.

Comment here