ಡಾ.ರಜನಿ ಎಂ
ಸಮುದ್ರ-3
ನಿನ್ನ ಕೋಪ
ತಾಪಕ್ಕೆ ಆವಿಯಾದರೂ …
ಬಿಂದುವಾಗಿ
ಮತ್ತೆ ನಿನ್ನ ಸೇರುವೆ.
ಅಂತಾ ಸಾಗರವೇ
ಶಾಂತವಾಗುವುದಾದರೆ…
ನೀನೇಕೆ
ಶಾಂತ ವಾಗಲಾರೆ ?
ಆ ಸಮುದ್ರದಂತೆ
ನಾನೂ
ಉಪ್ಪು ಪ್ಪು.
ಸಾಗರದ
ಭೋರ್ಗರೆತ ದಂತೆ
ನಿನ್ನ ಉಸಿರಾಟವೂ.
ನನ್ನನ್ನು ಚಿಂತನೆಗೆ
ತಳ್ಳುವುದು.
ದಡದಲ್ಲಿ ನಿಂತ
ಹಡಗು ಸುರಕ್ಷಿತ….
ಹಾಗಂತ
ಪ್ರೀತಿ ಅಲೆಯಲ್ಲಿ
ತೇಲದೆ ಇರುವುದೆ?
ಸಮುದ್ರ – series 3
ಮತ್ಸ್ಯ ಕನ್ಯೆ
ತಿಮಿಂಗಿಲವಾಗಿ
ನುಂಗಿದ್ದು
ಯಾವಾಗ?
ದ್ವೀಪಗಳು
ಬರೇ ಮೇಲೆ ಕಾಣಲು
ಕೆಳಗೆ….
ಒಂದೇ ಸಮುದ್ರ
ನಮ್ಮಿಬ್ಬರ ಹಾಗೆ.
ದಣಿದು
ಬಂದರೆ
ಕಾಲು ತೊಳೆದು
ಕರೆಯುವೆಯೆಲ್ಲ….
ನನ್ನ ಪ್ರೀತಿಗೂ
ಅಲೆಯಂತೆ
ಏರಿಳಿತ ಇವೆ…
ಸಹಿಸಿಕೊ.
ಪೂರ್ಣ
ಚಂದಿರನ ನೋಡಿ…
ಉಬ್ಬದ
ಸಾಗರವೇ
ಸಮುದ್ರ / ಸಾಗರ ದಿನ ಸಾಗರ ದಿನವನ್ನು ಜೂನ್ 8 ಆಚರಿಸುತ್ತಾರೆ. ಜಲ ಸಂಪತ್ತು , ಜಲ ಮಾಲಿನ್ಯ ತಡೆಯುವಿಕೆ ಇತ್ಯಾದಿ ಇದರ ಉದ್ದೇಶ. ಆದಾಗ್ಯೂ, ಕವಿ ಮನಸ್ಸಿನವರಿಗೆ ಸಾಗರ ಬೇರೆಯದೇ ಭಾವ .