Publicstory. in
ತುಮಕೂರು: ಗ್ರಾಮಾಂತರ ಕ್ಷೇತ್ರವ್ಯಾಪ್ತಿಯ ಅರೆಯೂರು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಶಾಸಕ ಡಿ ಸಿ ಗೌರೀಶಂಕರ್ ಆದೇಶದ ಮೇರೆಗೆ ಜೆಡಿಎಸ್ ಮುಖಂಡರು ಲೋಡುಗಟ್ಟಲೆ ಹಣ್ಣು ತರಕಾರಿ ಹಂಚಿದರು.
ಅರೆಯೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಚನ್ನಿಗಪ್ಪನಪಾಳ್ಯ,ಗುರಗಂಜಿಹಳ್ಳಿ,ಸಮುದ್ರನಹಳ್ಳಿ,ಆಚಾರಪಾಳ್ಯ,ಕೋಡಿಪಾಳ್ಯ,ಸಿದ್ದಪ್ಪನಪಾಳ್ಯ,ದೇವರಹಟ್ಟಿ,ಕೆಬ್ಬೆಪಾಳ್ಯ,ಕರಡಿಗೆರೆ,ಬೋವಿಪಾಳ್ಯ,ಮಾಕನಹಳ್ಳಿ,ಮಾಕನಹಳ್ಳಿ ಕಾಲೋನಿಗೆ ತೆರಳಿ ಕರೋನ ವೈರಸ್ ನಿಂದ ಸಂಕಷ್ಟಕ್ಕೀಡಾಗಿರುವ ಜನಸಾಮಾನ್ಯರಿಗೆ ತರಕಾರಿಗಳನ್ನು ವಿತರಿಸಲಾಯಿತು.
ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ ಶಾಸಕ ಡಿ ಸಿ ಗೌರೀಶಂಕರ್ ಆದೇಶದಂತೆ ಸ್ತಳೀಯ ಜೆಡಿಎಸ್ ಮುಖಂಡರ ಸಹಯೋಗದಲ್ಲಿ ಗೂಳೂರು ವ್ಯಾಪ್ತಿಯಲ್ಲಿ ರೈತರು ಬೆಳೆದಿರುವ ಟಮೋಟೋ.ಕುಂಬಳಕಾಯಿ.ಹುರಳೀಕಾಯಿ,ಎಲೆಕೋಸ್,ಕಲ್ಲಂಗಡಿ ಹಣ್ಣನ್ನು ಮಾರುಕಟ್ಟೆ ದರದಲ್ಲಿ ಖರೀದಿಸಿ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ. ರೈತರಿಗೆ ನೆರವಾಗುವುದರ ಜೊತೆಗೆ ರೈತರಿಂದ ಖರೀದಿಸದ ತರಕಾರಿಗಳನ್ನು ಜನರ ಮನೆಬಾಗಿಲಿಗೆ ತಲುಪಿಸಿ ಜನಸಾಮಾನ್ಯರ ಕಷ್ಟಕ್ಕೆ ನೆರವಾಗಿದ್ದಾರೆ.
ಅರೆಯೂರು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ತರಕಾರಿ ವಿತರಿಸಿ ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ ಮಾತನಾಡಿ ಲಾಕ್ ಡೌನ್ ನಿಂದ ರೈತರು ಬೆಳೆದ ಉತ್ಪನ್ನಗಳನ್ನು ಮಾರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದನ್ನು ಮನಗಂಡು ಶಾಸಕರಾದ ಡಿ ಸಿ ಗೌರಿಶಂಕರ್ ಅವರು ರೈತರ ನೆರವಿಗೆ ದಾವಿಸುವಂತೆ ಜೆಡಿಎಸ್ ಮುಖಂಡರಿಗೆ ಸೂಚನೆ ನೀಡಿದ್ದರು. ಅವರ ಸೂಚನೆಯಂತೆ ರೈತರ ತೋಟಗಳಿಗೆ ತೆರಳಿ ತರಕಾರಿ ಖರೀದಿಸಲಾಗುತ್ತಿದೆ ಎಂದರು.
ಈಗಾಗಲೇ ಶಾಸಕರು ಎರಡು ಲಕ್ಷ ಮಾಸ್ಕ್,ಒಂದು ಲಕ್ಷ ಸಾನಿಟೈಸ್ ಹಂಚಿದ್ದಾರೆ, 70 ಸಾವಿರ ಕುಟುಂಬಳಿಗೆ ಆಹಾರದ ಕಿಟ್ ಹಂಚಲು ಸಿದ್ದತೆ ನಡೆಸಿದ್ದಾರೆ., ಬಡವರ ಕಷ್ಟವನ್ನು ತಮ್ಮ ಕಷ್ಟ ಎಂದು ಭಾವಿಸಿ ನೆರವಿಗೆ ನಿಂತಿರುವ ಶಾಸಕರ ಜೊತೆ ಕೆಲಸ ಮಾಡುವುದೇ ಪುಣ್ಯ ಎಂದರು.
ಜೆಡಿಎಸ್ ಮುಖಂಡರಾದ ವಿಜಯ್ ಕುಮಾರ್, ದಕ್ಷಿಣಾಮೂರ್ತಿ,ಹರಳೂರು ಪ್ರಕಾಶ್,ಲೋಕೇಶ್,ಸ್ವಾಮಿ,ಉಮಣ್ಣ,ಗುರು,ಸೀನಪ್ಪ ಇತರರು ಉಪಸ್ತಿತರಿದ್ದರು