Saturday, July 20, 2024
Google search engine
Homeತುಮಕೂರು ಲೈವ್ಹಸಿದವರ ಪಾಲಿನ ದೇವರಾದ ಕಾನೂನು ಸೇವಾ ಪ್ರಾಧಿಕಾರ

ಹಸಿದವರ ಪಾಲಿನ ದೇವರಾದ ಕಾನೂನು ಸೇವಾ ಪ್ರಾಧಿಕಾರ

Publicstory. in


Tumkuru: ಉಚಿತ ಕಾನೂನು ಸಲಹೆ, ಜನರ ಹಕ್ಕುಗಳ ರಕ್ಷಣೆ ವಿಷಯದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಈಗ ಹಸಿದವರ ಪಾಲಿನ ದೇವರಂತೆ ಕಾಣಿಸತೊಡಗಿದೆ.

ಬುಧವಾರ ಬೆಳಿಗ್ಗೆ 11ಕ್ಕೆ Publicstory. in ನಲ್ಲಿ ಹುಳಿಯಾರಿನಲ್ಲಿ ಅಲೆಮಾರಿಗಳು ಹಸಿವಿನಿಂದ ತತ್ತರಿಸುತ್ತಿರುವ ಸುದ್ಧಿಯನ್ನು ಬಿತ್ತರಿಸಲಾಗಿತ್ತು.

ಸುದ್ಧಿ ಸಾಮಾಜಿಕ ಮಾಧ್ಯಮಗಳ ಮೂಲಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ದದರ್ಶಿ ರಾಘವೇಂದ್ರಶೆಟ್ಟಿಗಾರ್ ಅವರ ಮೊಬೈಲ್ ಗೂ ಹೋಗಿದೆ. ಸುದ್ದಿ ನೋಡಿದ ಕೂಡಲೇ ನ್ಯಾಯಾಧೀಶರು ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಅವರಿಗೆ ಕರೆ ಮಾಡಿ ಕೂಡಲೇ ಹಸಿದ ಕುಟುಂಬಗಳಿಗೆ ಆಹಾರ ನೀಡುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ:ಸಚಿವರ ಕ್ಷೇತ್ರದಲ್ಲೇ ಹಸಿವಿಗೆ ತತ್ತರ

ಯಾವಾಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೇ ಕರೆ ಮಾಡಿದರೊ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್ ಅಲ್ಲಿದ್ದ ಎಲ್ಲ ಅಲೆಮಾರಿ ಕುಟುಂಬಗಳಿಗೆ ಉಚಿತವಾಗಿ ಪಡಿತರ ವಿತರಿಸಿದ್ದಾರೆ. ಪಬ್ಲಿಕ್ ಸ್ಟೋರಿ. ಇನ್ ಜತೆ ಹಸಿವಿನ ಕಷ್ಟವನ್ನು ಹಂಚಿಕೊಂಡಿದ್ದ ಅಲೆಮಾರಿ ಮಹಿಳೆಗೂ ಪಡಿತರ ವಿತರಿಸಿದ್ದಾರೆ.

ಮಕ್ಕಳನ್ನು ಹಸಿವಿನಲ್ಲಿ ಇಡಬೇಕಾಗಿತ್ತು. ಎಲ್ಲರಿಗೂ ಚಿಂತೆಯಾಗಿತ್ತು. ಮುಂದೆ ಏನು ಮಾಡುವುದು ಎಂಬ ದೊಡ್ಡ ಪ್ರಶ್ನೆ ಎದುರಾಗಿತ್ತು, ನಮಗೆ ಆಹಾರ ಒದಗಿಸಿದ ನ್ಯಾಯಾಧೀಶರು ನಮ್ಮ ಪಾಲಿಗೆ ದೇವರೇ ಸರಿ. ಈ ಸಮಸ್ಯೆ ಮುಗಿಯುವವರೆಗೂ ನಮ್ಮಗಳಿಗೆ ಆಹಾರದ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ನಮ್ಮ ಮಾತನ್ನು ಯಾರೂ ಕೇಳುವುದಿಲ್ಲ, ಯಾರೂ ನೆರವಿಗೆ ಬರುವುದಿಲ್ಲಎಂದು ಅಲೆಮಾರಿಗಳು ತಮ್ಮ ಅನಿಸಿಕೆ, ನೋವು ಹಂಚಿಕೊಂಡರು.

ಕರೊನಾ, ಲಾಕ್ ಡೌನ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಬಡವರು, ವಯಸ್ಸಾದವರು, ಆಶಕ್ತರು,‌ ರೋಗಿಗಳು, ಔಷಧ ಕೊಳ್ಳಲಾಗದವರು ದಿನನಿತ್ಯದ ಜೀವನದ ಸಮಸ್ಯೆಗಳನ್ನು ಪ್ರಾಧಿಕಾರದ ಬಳಿ ಹೇಳತೊಡಗಿದ್ದಾರೆ.ಪ್ರಾಧಿಕಾರದ ಸಹಾಯವಾಣಿಗೆ ದಿನನಿತ್ಯ ಇಂಥ ಕರೆಗಳು ಬರುತ್ತಲೇ ಇರುತ್ತವೆ ಎಂದು ಸದಸ್ಯರಾದ ಓಬಯ್ಯನವರು ತಿಳಿಸಿದರು.

ಅಲೆಮಾರಿಗಳು, ಆಶಕ್ತರಿಗೆ ಆಹಾರವನ್ನು ಒದಗಿಸುವ ಕೆಲಸವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಾಡುತ್ತಿದೆ, ಪ್ರಾಧಿಕಾರದ ಸಹಾಯವಾಣಿಗೆ ಹಲವಾರು ಜನರು ಕರೆ ಮಾಡಿ ಸಹಾಯವನ್ನು ಯಾಚಿಸುತ್ತಿದ್ದಾರೆ. ಅಂಥವರಿಗೆಲ್ಲ ಸಹಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹುಳಿಯಾರಿನ ಅಲೆಮಾರಿಗಳ ಸಂಕಷ್ಟವನ್ನು ಪಬ್ಲಿಕ್ ಸ್ಟೋರಿ.ಇನ್ ನಲ್ಲಿ ಓದಿದ ಕ್ಷಣವೇ ಅದನ್ನು ಜಿಲ್ಲಾ ಕಾನೂನು ಪ್ರಾಧಿಕಾರದ ಗೌರವಾನ್ವಿತ ನ್ಯಾಯಾಧೀಶರು, ಸದಸ್ಯ ಕಾರ್ಯದರ್ಶಿಯವರಾದ ರಾಘವೇಂದ್ರ ಶೆಟ್ಟಿಗಾರ್ ಅವರ ಮೊಬೈಲ್ ನಂಬರಿಗೆ ರವಾನಿಸಿದೆ. ಅದನ್ನು ಓದಿ ಕೂಡಲೇ ಅವರು ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಅವರಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಒಂದೆರೆಡು ಗಂಟೆಗಳಲ್ಲಿ ಅಲೆಮಾರಿಗಳಿಗೆ ಪಡಿತರವನ್ನು ತಹಶೀಲ್ದಾರ್ ವಿತರಿಸಿ ವರದಿಯನ್ನು ಪ್ರಾಧಿಕಾರಕ್ಕೆ ನೀಡಿದರು ಎಂದು ಮಾಹಿತಿ ನೀಡಿದರು.

ಅಲೆ‌ಮಾರಿಗಳು, ಬುಡಬುಡಕರು ಇನ್ನಿತರ ದುರ್ಬಲ ವರ್ಗದರ ಪಟ್ಟಿ ಮಾಡಿಸಿ ಅವರಿಗೆ ಆಹಾರ, ಔಷಧಿ ನೀಡುವ ಕೆಲಸವನ್ನು ಜಿಲ್ಲಾಡಳಿತ ತುರ್ತಾಗಿ ಮಾಡುವ ಅಗತ್ಯವಿದೆ ಎಂದು ಓಬಯ್ಯ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?