Publicstory. in
ಕೊರಟಗೆರೆ: ತಾಲ್ಲೂಕಿನ ಜನರ ಬಹಳ ದಿನಗಳ ನಿರೀಕ್ಷೆ ಕೊರಟಗೆರೆ ಪೊಲೀಸ್ ಠಾಣೆ ಕಟ್ಟಡ ಜೂ.10 ಲೋಕಾರ್ಪಣೆಗೆ ಸಿದ್ಧ ಗೊಂಡಿದೆ.
ಸುಮಾರು 80 ವರ್ಷ ಹಳೆಯ ಕಟ್ಟಡದಲ್ಲಿದ್ದ ಪೊಲೀಸ್ ಠಾಣೆ ಬಹಳ ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿತ್ತು. ಈಗ ಅದೇ ಜಾಗದಲ್ಲಿ ₹.1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಗಣ್ಯರಿಂದ ಉದ್ಘಾಟನೆಗೆ ಸಿದ್ಧಗೊಂಡಿದೆ.
ಇದರೊಂದಿಗೆ ಇಲ್ಲಿನ ಸಿಬ್ಬಂದಿಗಾಗಿ ₹2.25 ಕೋಟಿ ವೆಚ್ಚದಲ್ಲಿ 12 ವಸತಿಗೃಹಗಳು ಕೂಡ ಉದ್ಘಾಟನೆಯಾಗಲಿವೆ.
ಸಮಿಶ್ರ ಸರ್ಕಾರದ ಅವದಿಯಲ್ಲಿ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಾಗಿದ್ದ ಡಾ.ಜಿ. ಪರಮೇಶ್ವರ್ ಅವರ ಕೊಡುಗೆಯಾಗಿ ಪಟ್ಟಣ ಸೇರಿದಂತೆ ಕೋಳಾಲ ಪೊಲೀಸ್ ಠಾಣೆಗಳು ಅನುಮೋದನೆಗೊಂಡು ಕೆಲವೇ ದಿನಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿವೆ.
ಇವರು ಅತ್ಯಂತ ಜನಪ್ರಿಯರು
ಇಲ್ಲಿನ ಠಾಣೆಯ ಇತಿಹಾಸವನ್ನು ನೋಡಿದಾಗ ಹಲವು ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ.
ಅತ್ಯಂತ ಜನಾನುರಾಗಿಯಾಗಿ, ಜನ ಸ್ನೇಹಿಯಾಗಿ ಜನಪ್ರಿಯರಾದವರು ಸಿಪಿಐ ಚಂದ್ರಶೇಖರ್.
ತಾಲ್ಲೂಕಿನ ಯಾವ ಗ್ರಾಮಕ್ಕೆ ಹೋದರು ಜನರು ಇವರ ಹೆಸರನ್ನು ನೆನಪಿಸಿಕೊಳ್ಳುತ್ತಾರೆ.
ದಕ್ಷ ಅಧಿಕಾರಿಯಾಗಿದ್ದ ಇವರು ಪಟ್ಟಣಕ್ಕೆ ಬಂದಿದ್ದ ಚಿರತೆ ಪತ್ರಕರ್ತರೊಬ್ಬರ ಮೇಲೆ ಎರಗುವಾಗ ಪ್ರಾಣದ ಹಂಗು ತೊರೆದು ಜೀವಂತ ಸೆರೆ ಹಿಡಿಯುವ ಮೂಲಕ ಮನೆ ಮಾತಾಗಿದ್ದರು.
ಹಲವು ಮಹತ್ವದ ಪ್ರಕರಣಗಳನ್ನು ಬೇಧಿಸಿದ್ದ ಅವರು, ಜನ ಸ್ನೇಹಿಗೂ ಹೆಸರಾಗಿದ್ದರು.
ಅಂತರ ರಾಜ್ಯ ದರೋಡೆಕೋರರನ್ನು ಬಂಧಿಸಿದ ಪ್ರಕರಣದಲ್ಲಿ ಅವರಿಗೆ ಇಲಾಖೆಯಲ್ಲಿ ಉತ್ತಮ ಹೆಸರಿದೆ.
ಈಗ ಇರುವ ಅಧಿಕಾರಿಗಳು ಸಹ ಜನಸ್ನೇಹಿಯಾಗಿದ್ದಾರೆ ಎನ್ನುತ್ತಾರೆ ಹಲವು ಮುಖಂಡರು ಹಾಗೂ ಜನರು.
ಪೊಲೀಸ್ ಇಲಾಖೆಯ ಆಧುನಿಕರಣ ಯೋಜನೆಯಡಿ ₹. 1.50 ಕೋಟಿ ವೆಚ್ಚದಲ್ಲಿ ಕೊರಟಗೆರೆ ಠಾಣೆ ಕಟ್ಟಡ ಮತ್ತು ಪೊಲೀಸ್ ಇಲಾಖೆಯ 2020-ಗೃಹ ಯೋಜನೆಯಡಿ ₹.2.25 ಕೋಟಿ ವೆಚ್ಚದಲ್ಲಿ 12 ವಸತಿಗೃಹಗಳನ್ನು ನಿರ್ಮಿಸಲಾಗಿದೆ.
2017-18ನೇ ಸಾಲಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಅವರು ಸರ್ಕಾರದಿಂದ ಮುಂಜೂರು ಮಾಡಿದ್ದರು.
ಬಹಳ ವರ್ಷಗಳಿಂದ ಇಡೀ ತಾಲ್ಲೂಕಿಗೆ ಒಂದೇ ಒಂದು ಪೊಲೀಸ್ ಠಾಣೆ ಇತ್ತು. ಒಂದು ಠಾಣೆ ವ್ಯಾಪ್ತಿಗೆ ಸುಮಾರು 400ಕ್ಕೂ ಹೆಚ್ಚು ಗ್ರಾಮಗಳು ಒಳಪಡುತ್ತಿದ್ದವು.
–ಎಫ್.ಕೆ. ನಧಾಫ್, ಸಿಪಿಐ